ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!

Date:

ಗಂಡು ಹೆಣ್ಣಿನ ಪ್ರೀತಿ ಮದುವೆಯಲ್ಲಿ ಮುಕ್ತಾಯವಾದರೆ ಅದು ಸುಂದರ ಜೀವನಕ್ಕೆ ನಾಂದಿಯಾಗುತ್ತದೆ ಅಂತಾರೆ. ನಮ್ಮ ದೇಶದಲ್ಲಿ ತಮ್ಮ ಮಕ್ಕಳ ಭಾವೀ ಸಂಗಾತಿಗಳನ್ನು ನಿರ್ಣಯಿಸುವಲ್ಲಿ ಹಿರಿಯರ ಪಾತ್ರ ದೊಡ್ದದು. ಆದ್ರೆ ಇಲ್ಲೊಂದು ಕಡೆ ನಡೆದ ಪ್ರೇಮ ವಿವಾಹಕ್ಕೆ ತಮ್ಮ ಮಕ್ಕಳೇ ಸ್ವತಃ ಹಿರಿಯರ ಮದುವೆಯನ್ನು ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಾವು ಹೇಳಬೇಕೆಂದಿರುವುದು 52 ವರುಷದ ಅನಿತಾ ಚೆಂಬುವಿಲಾಯಿಲ್ ಹಾಗೂ ಅವರನ್ನು ವಿವಾಹವಾಗಿರೋ 68 ವರುಷದ ಜಿ.ವಿಕ್ರಮನ್ ಬಗ್ಗೆ. ಈ ವಿವಾಹವನ್ನು ನಡೆಸಿದವರು ಸ್ವತ: ಅನಿತಾ ಪುತ್ರಿ ಆಥಿರಾ ದಾಥನ್ ಆಗಿದ್ದಾರೆ.ಇವರು ಈ ಎರಡು ಜೋಡಿಗಳನ್ನು ಪರಸ್ಪರ ಸೇರಿಸಿ ಅವರ 32 ವರುಷದ ಪ್ರೇಮ ಕಥೆಗೆ ಒಂದು ಪೂರ್ಣವಿರಾಮ ನೀಡಿದ್ದಾರೆ.
ಕೇರಳದವರ ಅಥಿರಾ ಈ ಸುಂದರ ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದು 1984 ರ ಕೊಲ್ಲಂ ಬಳಿಯ ಒಛಿರಾದಲ್ಲಿ ನಡೆದ ಒಂದು ಪ್ರೇಮ ಕಥೆ,ಆಗಿನ್ನೂ ಅನಿತಾ ಹತ್ತನೆಯ ತರಗತಿಯ ವಿದ್ಯಾರ್ಥಿನಿ.ವಿಕ್ರಂ ಅಲ್ಲೇ ಪಕ್ಕದಲ್ಲಿರೋ ಟ್ಯೂಷನ್ ಸೆಂಟರ್ನಲ್ಲಿ ಪಾಠ ಮಾಡುತ್ತಿದ್ದು,ಒಂದು ರಾಜಕೀಯ ಪಕ್ಷವಾದ CPI(M)ನ ಕಾರ್ಯಕರ್ತನೂ ಅಗಿದ್ದ.ಇವರಿಬ್ಬರೂ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದು,ವಿಷ್ಯ ಮನೆಯವ್ರಿಗೆ ತಿಳಿದು ಅನಿತಾ ತಂದೆ ಈ ಸಂಬಂಧವನ್ನು ವಿರೋಧಿಸಿದರು.ಅನಿತಾಳ ತಂದೆ ಆರ್ಮಿಯಲ್ಲಿ ಅಸಿಸ್ಟಂಟ್ ಇಂಜಿನಿಯರ್ ಆಗಿದ್ದು,ವಿಕ್ರಂ CPI(M)ನ ಕಾರ್ಯಕರ್ತನೂ ಆಗಿದ್ದು,ಅನಿತಾಳಿಗಿಂತಲೂ ವಯಸ್ಸಿನಲ್ಲಿ ತುಂಬಾ ದೊಡ್ಡವನಾಗಿದ್ದುದರಿಂದ ಆಕೆಯ ತಂದೆ ಇವರಿಬ್ಬರ ಮದುವೆಗೆ ಒಪ್ಪದೆ ಆಕೆಯನ್ನು ಶಾಲೆಗೆ ಹೋಗದಂತೆ ತಡೆದದ್ದಲ್ಲದೆ,ಅವನಿಗೆ ಜೀವ ಬೆದರಿಕೆ ಹಾಕಿದ್ರು ಹಾಗೂ ಆಕೆಗೆ ಬೇರೆಯ ಕಡೆ ಸಂಬಂಧ ನೋಡಿ ಮದುವೆನೂ ಮಾಡಿದ್ರು.
ಪ್ರೀತಿ ಕಳೆದುಕೊಂಡ ವಿಕ್ರಂ ಊರನ್ನೇ ಬಿಟ್ಟು ಹೊರಟು ಹೋದನು,ತನ್ನ ಜೀವನದಲ್ಲಿ ಮದುವೆಯಾಗದೇ ಇಡೀ ಜೀವನ ಪಕ್ಷದ ಕಾರ್ಯಕ್ಕಾಗಿ ಮೀಸಲಿಟ್ಟನು.
ಇತ್ತ ಅನಿತಾಳ ವೈವಾಹಿಕ ಸಂಬಂಧ ಅಷ್ಟಾಗಿ ಸರಿಯಿರಲಿಲ್ಲ,ಆಕೆ ತನ್ನ ಮದುವೆಯಿಂದ ಸಂತೋಷವಾಗಿರಲಿಲ್ಲ,ಆಕೆಯ ಪತಿ ತನ್ನ ಮಗಳಿಗೆ 8 ವರುಷವಿರೊವಾಗಲೇ ಕುಡಿದ ಮತ್ತಿನಲ್ಲಿ ಸತ್ತುಹೋಗುತ್ತಾನೆ.ಅನಿತಾಳೆ ಮುಂದೆ ನಿಂತು ತನ್ನೆರಡೂ ಮಕ್ಕಳನ್ನೂ ಸಾಕಿ ಸಲಹಿ ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದಳು.ಹಲವು ವರುಷಗಳ ಬಳಿಕ ಮತ್ತೆ ವಿಕ್ರಮ ಮತ್ತೆ ವಿಛಿರಾಗೆ ತನ್ನ ನಿವೃತ್ತಿ ಸಮಯ ಕಳೆಯಲು ಮರಳಿ ಬಂದಿದ್ದು,ಪಂಚಾಯತ್ ಚುನಾವಣೆಗಾಗಿ ಸ್ಪರ್ಧಿಸುತ್ತಿರಲು,ಅದರ ಪ್ರಚಾರ ನಿಮಿತ್ತ ಅನಿತಾಳ ಭೇಟಿಯಾಗುತ್ತದೆ. ಅನಿತಾ ತನ್ನ ಮಗಳಿಗೆ ಆಕೆಯ ಜೀವನದ ಎಲ್ಲಾ ಸಂಗತಿಗಳನ್ನೂ ಹೇಳುತ್ತಾಳೆ,ಇದನ್ನು ಕೇಳಿದ ಆಥಿರಾ ಆ ರಾತ್ರಿಯಿಡೀ ನಿದ್ದೆ ಮಾಡದೆ ಯೋಚಿಸುತ್ತಾ ಕೊನೆಗೊಂದು ತೀರ್ಮಾನಕ್ಕೆ ಬರುತ್ತಾಳೆ.ಈ ನಿರ್ಧಾರವೇನೆಂದರೆ ಅಥಿರಾ ಮದುವೆಯ ದಿನ ವಿಕ್ರಂ ನನ್ನು ತನ್ನ ತಂದೆಯ ಸ್ಥಾನದಲ್ಲಿ ನೋಡಬೇಕೆಂಬುದಾಗಿರುತ್ತದೆ, ಆದ್ರೆ ಆಕೆಯ ಮದುವೆಯಾಗುವ ತನಕವೂ ಯಾವ ವಿಚಾರವನ್ನೂ ಮಾಡಲಾರೆ ಎಂದು ವಿಕ್ರಂ ಹೇಳುತ್ತಾನೆ.ಅಥಿರಾ ಮದುವೆಯಾಗುತ್ತಿದ್ದಂತೆಯೇ ಮತ್ತೆ ಆಕೆ ತನ್ನ ವಿಚಾರವನ್ನು ಮನೆಯವರ ಮುಂದಿಡುತ್ತಾಳೆ.ಇದಕ್ಕೆ ಆಕೆಯ ಹಿರಿಯ ಸಹೋದರಿಯೂ ಅನುಮತಿ ನೀಡುತ್ತಾಳೆ.
ಅಥಿರಾ ಮದುವೆಯಾಗಿ ಸರಿಯಾಗಿ ಎರಡು ತಿಂಗಳಿಗೆ ಅನಿತಾಳ ಮದುವೆಯು ವಿಕ್ರಂನೊಂದಿಗೆ ಹತ್ತಿರದ ಸಂಬಂಧಿಕರು,ಆಪ್ತ ಸ್ನೇಹಿತರು ಹಾಗೂ ಅಕ್ಕ ಪಕ್ಕದ ಜನರ ಸಮ್ಮುಖದಲ್ಲಿ ಆಕೆಯ ಮನೆಯಲ್ಲೇ ನಡೆಯುತ್ತದೆ,ಆದ್ರೆ ಆಶ್ಚರ್ಯವೆಂಬಂತೆ ಯಾರು ಈ ಜೋಡಿಯನ್ನು ಬೇರ್ಪಡಿಸಲು ಕಾರಣರಾಗಿದ್ದರೋ ‍ಯಾರು ವಿಕ್ರಂಗೆ ಜೀವ ಬೆದರಿಕೆ ನೀಡಿದ್ದರೋ ಅದೇ 82 ವರುಷದ ಅನಿತಾಳ ತಂದೆ ಆತನೇ ಇವರ ಮದುವೆಯನ್ನು ನಡೆಸಿಕೊಡುತ್ತಾನೆ.
ಈ ನಿಟ್ಟಿನಲ್ಲಿ ಅನಿತಾ ಹೇಳುವುದೇನೆಂದರೆ,”ನಮ್ಮ ತಂದೆ ತಾಯಿಯರ ಬಗ್ಗೆ ‍ಅವರ ಆಸೆ ಆಕಾಂಕ್ಷೆಗಳ ಬಗ್ಗೆ ನಾವು ತಿಳಿಯಲೇಬೇಕು ಹಾಗೂ ಅದನ್ನು ಗೌರವಿಸಬೇಕು,ನಾನು ಬೆಳೆಯುತ್ತಾ ಬೆಳೆಯುತ್ತಾ ನನ್ನ ತಾಯಿಯು ಪಟ್ಟಿರೊ ಅನೇಕ ಕಷ್ಟಗಳನ್ನು ನೋಡಿದ್ದೇನೆ,ನಾನು ಅವಳನ್ನು ಸಂತೋಷವಾಗಿಡಬೇಕೆಂದು ನಿರ್ಧರಿಸಿದ್ದೆ,ಪ್ರತಿಯೊಂದು ಮಕ್ಕಳು ಪ್ರಯತ್ನ ಪಟ್ಟಲ್ಲಿ ಮಾತ್ರ ತಮ್ಮ ಹೆತ್ತವರನ್ನು ಸಂತೋಷವಾಗಿಡಲು ಸಾಧ್ಯ.ಜುಲೈ 21 ನನ್ನ ಜೀವನದ ಅತೀ ಮುಖ್ಯವಾದ ಹಾಗೂ ಸಂತೋಷವಾದ ಕ್ಷಣ.
ತನ್ನ ತಾಯಿಯ ಜೀವನದಲ್ಲಿ ಸಂತೋಷವನ್ನು ಮತ್ತೆ ಮರುಕಳಿಸುವಂತೆ ಮಾಡಿದ ಈ ಹುಡುಗಿ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಸ್ನೇಹಿತರೇ ಪ್ರೀತಿಗೆ ಹೊತ್ತು ಗೊತ್ತು ಇಲ್ಲ ಹಾಗೂ ನಿಜವಾದ ಪ್ರೀತಿಗೆ ಸಾವಿಲ್ಲ ಎಂಬುದು ಕಡೆಗೂ ಅನಿತಾಳ ಪಾಲಿಗೆ ನಿಜವಾಯ್ತು ಅಲ್ಲವೇ????

  • ಸ್ವರ್ಣಲತ ಭಟ್

POPULAR  STORIES :

ಮಹಿಳೆಯರೆ… ಸ್ಮೋಕ್ ಮಾಡ್ತಾ ಇದೀರಾ…! ಹುಷಾರ್…!

ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!

ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!

ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!

ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ

ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.

ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...