ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆಲ್ ಪಂಜಾಬ್ ವಿರುದ್ಧ 4ವಿಕೆಟ್ ಗಳ ಜಯಗಳಿಸಿದೆ.
ಒಂದು ಹಂತದಲ್ಲಿ ಸೋಲಿನ ದವಡೆಗೆ ಸಿಲುಕಿದ್ದ ನಮ್ಮ ಬೆಂಗಳೂರಿಗೆ ಗೆಲುವಿನ ದಾರಿ ತೋರಿಸಿದ್ದು ಎ.ಬಿ ಡಿವಿಲಿಯರ್ಸ್.
40 ಎಸೆತಗಳಲ್ಲಿ 57 ರನ್ ಗಳಿಸಿ ಆರ್ ಸಿಬಿ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಬಿಡಿ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.
ಅಚ್ಚರಿಯಾದ್ರೂ ಇದು ಸತ್ಯ. ಎಬಿಡಿ ಗೆಲುವಿನ ದಾರಿ ತೋರಿಸಿದರೂ ಆ ಗೆಲುವು ಸಿಗುವವರೆಗೆ ಸ್ಕ್ರೀಸ್ ನಲ್ಲಿ ಉಳಿಯಲಿಲ್ಲ. 10 ರನ್ ಬೇಕಿದ್ದಾಗ ಪೆವಿಲಿಯನ್ ಸೇರಿದ್ರು. ತಾನು ಗೆಲ್ಲುವ ತನಕ ಇರಬೇಕಿತ್ತು ಎಂದು ಎಬಿಡಿ ಕ್ಷಮೆಯಾಚಿಸಿದ್ದಾರೆ.