ವಿರಾಟ್ ಕೊಹ್ಲಿ ಎಂಥಾ ಆಟಗಾರನಲ್ವಾ..!? ಅವನಿಗಿಂತ ಆಟಗಾರ ಯಾರಾದರೂ ಇದ್ದಾರಾ..? ಎನ್ನುವಾಗ ಬಾಲ್ ಹೋಗಿ ಸ್ಟೇಡಿಯಂ ಆಚೆಬಿದ್ದಿತ್ತು. ಆ ಬಾಲ್‍ನಲ್ಲಿ ಸ್ಪಷ್ಟವಾಗಿ ಬರೆದಿತ್ತು ಅವನ ಹೆಸರು; ಎಬಿಡಿ ವಿಲಿಯರ್ಸ್. ಕ್ರೀಸ್‍ನ ಯಾವಬದಿಗೆ ಬಾಲ್ ಹಾಕಿದರೇ ವಿಲಿಯರ್ಸ್‍ನನ್ನು ಔಟ್ ಮಾಡಬಹುದು ಅಂತ ಯೋಚಿಸಿಯೇ ಬೌಲ್ ಮಾಡುತ್ತಾರೆ. ನಿಂತು, ಕುಂತು, ಮಲಗಿ, ಗುಡಿಸಿ ಗುಂಡಾಂತರ ಮಾಡಿದರೂ ಆತನ ಅಬ್ಬರ ತಣಿಯುವುದಿಲ್ಲ. ವಿಲಯರ್ಸ್ ಆಟ ನೋಡುವುದಕ್ಕೇ ಚಂದ. ಸಾಮಾನ್ಯವಾಗಿ ಬಹುತೇಕ ಪಂದ್ಯಗಳಲ್ಲಿ ವಿಲಿಯರ್ಸ್ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ. ಸುಮ್ಮಸುಮ್ಮನೇ ಔಟಾಗುವ ಜಾಯಮಾನವಲ್ಲ. ಕ್ರಿಕೆಟ್ ಮಾತ್ರವಲ್ಲದೇ ಎಲ್ಲಾ ಆಟಗಳನ್ನು ಆಡುವ ಈ ಆಟಗಾರ, ಬ್ಯಾಟಿಂಗ್‍ಗೆ ಇಳಿದಾಗ ಸ್ಟೇಡಿಯಂನಲ್ಲಿ ಪತ್ನಿ ಇದ್ದರಂತೂ ಮುಗೀತು. ಅಬ್ಬರಿಸಿ ಬೊಬ್ಬಿರಿದುಬಿಡುತ್ತಾರೆ. ಮಡದಿ ಡ್ಯಾನಿಯಲ್ಲೇಳನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ವಿಲ್ಲಿ ಅವಳನ್ನು ಮೆಚ್ಚಿಸಲು ಅದ್ಭುತವಾಗಿ ಆಡುತ್ತಾರಂತೆ. ಈ ಸೀಕ್ರೆಟ್ ಅನ್ನು ಅವರ್ಯಾವತ್ತು ಬಾಯಿಬಿಟ್ಟು ಹೇಳಿಲ್ಲ. ಅರ್ಥಮಾಡಿಕೊಂಡವರು ಅವನ ಹೆಂಡತಿಯನ್ನು ಕರೆತರುವ ಕೆಲಸ ಮಾಡುತ್ತಾರೆ.
- ರಾ ಚಿಂತನ್
POPULAR STORIES :
ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?
ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!
ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?
ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?
ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!