ಮೋದಿಗೆ ಪತ್ರಬರೆದ 8 ವರ್ಷದ ಕನ್ನಡದ ಹುಡುಗ..! ಅಷ್ಟಕ್ಕೂ ಆ ಪತ್ರದಲ್ಲಿ ಅಂಥಹದ್ದೇನಿದೆ….?

1
89

ದಿನಾ ಅದೇ ಟ್ರಾಫಿಕಲ್ಲಿ ಓಡಾಡ್ತಾ ಇರ್ತೀವಿ..! ಕರ್ಮಕಾಂಡ.. ಯಾಕಾದ್ರೂ ಬೆಂಗಳೂರಿಗೆ ಬಂದ್ವೇನೋ..! ನಮ್ಮ ಅರ್ಧ ಆಯುಷ್ಯ ಜರ್ನಿಯಲ್ಲೇ ಕಳೆದೋಗುತ್ತೆ ಅಂತ ಗೊಣ ಗುಡ್ತಾಲೇ ಇರ್ತೀವಿ..! ಕೆಲವೊಂದು ಕಡೆ ಸರಿಯಾದ ಕ್ರಮಗಳನ್ನು ಜಾರಿಗೆ ತಂದ್ರೆ ಯಾವ ಟ್ರಾಫಿಕ್ ಸಮಸ್ಯೆನೂ ಇರಲ್ಲ.. ಮಣ್ಣೂ ಇರಲ್ಲ..! ಆದ್ರೆ ಈ ಟ್ರಾಫಿಕ್ ಸಮಸ್ಯೆ ಬಗ್ಗೆ ಯಾರಾದ್ರೂ ಕಂಪ್ಲೇಂಟ್ ಕೊಡ್ತೀವೇನ್ರೀ..? ಹ್ಞೂಂ, ಹ್ಞೂಂ ಬಾಯಲ್ಲಿ ಬಡಬಡಾಯಿಸ್ತೇವೆಯೇ ಹೊರತು ಯಾರೂ ಕಂಪ್ಲೆಂಟ್ ಮಾಡಲ್ಲ..! ನಂಗ್ಯಾಕೆ ಬೇಕು ಗುರೂ.., ಎಲ್ಲರೂ ಇದೇ ರೋಡ್ ನಲ್ಲಿ ಓಡಾಡ್ತಾರೆ.., ಬೇರೆ ಯಾರಾದ್ರೂ ಕೊಟ್ರೆ ಕೊಡ್ಕೊಳ್ಳಿ ಅಂತ ತೆಪ್ಪಗೆ ಇರ್ತೀವಿ..! ಆದ್ರೆ ಈ ಟ್ರಾಫಿಕ್ ಸಮಸ್ಯೆ ಬಗ್ಗೆ ಕೇವಲ 08 ವರ್ಷದ ಹುಡುಗ ಕಂಪ್ಲೇಂಟ್ ಕೊಟ್ಟಿದ್ದಾರೆ..! ಅದೂ ಮಾನ್ಯ ಪ್ರಧಾನ ಮಂತ್ರಿಗಳಿಗೇ..! ಆ ಹುಡಗ ನಮ್ ಕನ್ನಡಿಗನೇ..! ಅವ್ನು ಪಿಎಂಗೆ ಏನಂಥಾ ಕಂಪ್ಲೇಂಟ್ ಮಾಡಿದ್ದಾನೆ…! ಅದಕ್ಕೆ ಪಿಎಂ ಮೋದಿ ಏನ್ ಉತ್ತರ ಕೊಟ್ಟಿದ್ದಾರೆ..! ಅನ್ನುವುದರ ಫುಲ್ ಡೀಟೆಲ್ಸ್ ಇಲ್ಲದೆ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಆ ಎಂಟು ವರ್ಷದ ಹುಡುಗನ ಹೆಸರು ಅಭಿನವ್. ಮೂರನೇ ತರಗತಿ ಓದ್ತಾ ಇದ್ದಾನೆ..! ಇವನು ಅಪ್ಪ ಅಮ್ಮನ ಜೊತೆ ದೊಡ್ಡಬೊಮ್ಮಸಂದ್ರದಲ್ಲಿದ್ದಾನೆ..! ಓದ್ತಾ ಇರೋದು ಯಶವಂತಪುರದ “ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ”..! ಮನೆಯಿಂದ ಸ್ಕೂಲ್ ಗೆ ಕೇವಲ ಮೂರೇ ಮೂರು ಕಿಲೋಮೀಟರ್..! ಆದ್ರೂ 45ನಿಮಿಷವಂತೂ ಬೇಕೇ ಬೇಕು..! ಕಾರಣ ಗೊತ್ತೇ ಇದೆಯಲ್ಲಾ.. ಟ್ರಾಫಿಕ್ ಟ್ರಾಫಿಕ್, ಟ್ರಾಫಿಕ್..! ಸೋ ಬೆಂಗಳೂರಲ್ಲಿ ಯಾರಾದ್ರೂ ಅಲ್ಲಿಂದ ಅಲ್ಲಿಗೆ ಎಷ್ಟು ದೂರ ಆಗುತ್ತೆ ಅಂತ ಕೇಳಿದ್ರೆ ಕಿಲೋಮೀಟರ್ ಲೆಕ್ಕ ಯಾರೂ ಹೇಳಲ್ಲ..! ಎಷ್ಟು ಟೈಮ್ ಹಿಡಿಯುತ್ತೆ ಅಂತ ಹೇಳ್ತಾರೆ…! ಎನುವೇ.. ಮ್ಯಾಟ್ರಿಗೆ ಬರ್ತೀನಿ.,.. ಆ ಹುಡುಗ ಹೀಗೆ ಕೇವಲ ಮೂರು ಕಿ.ಮೀ ದೂರದ ಶಾಲೆಗೆ ಹೋಗಲಿಕ್ಕೆ 45 ನಿಮಿಷ ಆಗುತ್ತೆ ಅಂದ್ರೆ..? ಇದಕ್ಕೇನಾದ್ರೂ ಪರಿಹಾರವ ಕಂಡು ಹಿಡಿಯಲೇ ಬೇಕು…! ಅದಕ್ಕೋಸ್ಕರ ಇಲ್ಲೇ ಅಧಿಕಾರಿಗಳಿಗೆ ಹೇಳ್ತಾ ಕೂತ್ರೆ ಪ್ರಯೋಜನವಿಲ್ಲ ಅಂತ ಡೈರೆಕ್ಟಾಗಿ ಪ್ರಧಾನಿಯವರ ಕಚೇರಿಗೇ ಪತ್ರ ಬರೆದು ಬಿಡ್ತಾನೆ..! ಆ ಪತ್ರದಲ್ಲಿ ಗುರುಗುಂಟೆ ಪಾಳ್ಯದ ಬಳಿಯಲ್ಲಿನ “ಔಟರ್ ರಿಂಗ್ ರೋಡ್”ನ ರೈಲ್ವೇ ಕ್ರಾಸಿಂಗ್ ಮೇಲೆ ಫ್ಲೈ ಓವರ್ ನಿರ್ಮಾಣವಾಗ್ತಾ ಇದ್ದೂ.., ಅದರಿಂದಲೇ ಟ್ರಾಫಿಕ್ ಸಮಸ್ಯೆ ಎದುರಾಗಿದೆ..! ಅದು ಕೇವಲ ಟ್ರಾಫಿಕ್ ಸಮಸ್ಯೆಯನ್ನು ಸೃಷ್ಟಿಸ್ತಾ ಇರುವುದಲ್ಲದೆ.. ಆರೋಗ್ಯದ ಮೇಲೂ ಕೆಟ್ಟಪರಿಣಾಮ ಬೀರುತ್ತೆ..! ನನಗಂತೂ ಶಾಲೆಗೆ ಹೋಗಲಿಕ್ಕೂ ಸಮಸ್ಯೆ ಆಗ್ತಾ ಇದೆ…! ಆದಷ್ಟು ಬೇಗ ಈ ಕಾಮಗಾರಿ ಪೂರ್ಣಗೊಳಿಸಿ ಎಂದು ಬರೆದಿದ್ದಾನೆ..! ಈ ಪತ್ರವನ್ನು ಓದಿದ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಗಮನ ಕೊಡುವಂತೆ ರೈಲ್ವೇ ಇಲಾಖೆಗೆ ತಿಳಿಸಿದ್ದಾರೆ…!
ಭಲೇ ಹುಡುಗ… ಮೆಚ್ಚಿದ್ವೀ ಕಣೋ ನಿನ್ನ..! ಇಷ್ಟೊಂದು ಚಿಕ್ಕ ವಯಸ್ಸಲ್ಲೇ ಸರ್ಕಾರವನ್ನು ಪ್ರಶ್ನಿಸಿದ್ದಿಯಲ್ಲಾ..?! ಯು ಆರ್ ರಿಯಲಿ.. ಗ್ರೇಟ್..! ನಾವ್ಯಾರೂ ಪ್ರಶ್ನೆ ಮಾಡದೇ ಇರೋದನ್ನು ಪ್ರಶ್ನಿಸಿದ ಈ ಹುಡುಗ ನಮಗಂತೂ ತುಂಬಾ ತುಂಬಾ ತುಂಬಾ ..ಇಷ್ಟವಾಗ್ಬಿಟ್ಟ..! ಹುಡುಗರು ಅಂದ್ರೆ ಹಿಂಗರಬೇಕ್ರೀ..! ಈ ನಮ್ಮ ಬೆಂಗಳೂರು ಹುಡಗನ ಬಗ್ಗೆ ನೀವು ಏನಂತಿರೀ..?

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಸ್ವರ್ಗದಲ್ಲಿರೋ ಅಬ್ದುಲ್ ಕಲಾಂರಿಗೆ ಹುಟ್ಟುಹಬ್ಬದ ಶುಭಾಷಯಗಳು…

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!

ತಿನ್ನುವ ಮುನ್ನ ಯೋಚಿಸು ಚಿನ್ನಾ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?

ಹತ್ತು ವರ್ಷದ ಹುಡುಗನಿಗೆ ಅದೆಂಥಾ ಜವಬ್ದಾರಿ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ..!

ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

1 COMMENT

LEAVE A REPLY

Please enter your comment!
Please enter your name here