ಇವರು ಸುದ್ದಿವಾಹಿನಿಯ ಸುದ್ದಿ ಚಾಲಕ…!

Date:

ಅಪ್ಪ ಲಾರಿ ಚಾಲಕ, ಮಗ ಸುದ್ದಿ ಚಾಲಕ…! ಕಷ್ಟದಲ್ಲಿ ಬೆಳೆದ ವ್ಯಕ್ತಿಯ ಕಥೆಯಿದು. ಬಡತನದಲ್ಲಿ ಬೆಳೆದ ಸಾಧಕನ ಯಶೋಗಾಥೆಯಿದು. ಕುಟುಂಬಕ್ಕೆ ಹೊರೆಯಾಗದೆ ಚಿಕ್ಕಂದಿನಲ್ಲೇ ಪಾರ್ಟ್ ಟೈಮ್ ಕೆಲಸ ಮಾಡ್ಕೊಂಡು ಓದಿದ ಹೆಮ್ಮೆಯ ಕನ್ನಡಿಗನ ರಿಯಲ್ ಸ್ಟೋರಿ ಇದು…! ಇದರ ನಾಯಕ ಅಭಿಷೇಕ್ ರಾಮಪ್ಪ.


ದಿಗ್ವಿಜಯ ಸುದ್ದಿವಾಹಿನಿಯ ನ್ಯೂಸ್ ಆ್ಯಂಕರ್ ಅಭಿಷೇಕ್, ಕಲ್ಪತರು ನಾಡು, ಶೈಕ್ಷಣಿಕ ನಗರಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಹುಟ್ಟಿದವರು. ಬೆಳೆದಿದ್ದೆಲ್ಲಾ ರಾಜಧಾನಿ ಬೆಂಗಳೂರಲ್ಲಿ. ತಂದೆ ರಾಮಪ್ಪ, ತಾಯಿ ಭಾರತಿ, ತಮ್ಮ ರಾಕೇಶ್.


ತಂದೆ ಲಾರಿ ಡ್ರೈವರ್, ಇವತ್ತಿಗೂ ಲಾರಿ ಓಡಿಸ್ತಾರೆ. ಅಭಿಷೇಕ್ ಸುದ್ದಿಮನೆಗೆ ಬರುವ ಸುದ್ದಿಗಳನ್ನು ವೀಕ್ಷರಿಗೆ ತಲುಪಿಸೋ ಚಾಲಕನ ಕೆಲಸ ಮಾಡ್ತಿದ್ದಾರೆ…!


ತಮ್ಮ ಕಷ್ಟಗಳು ಮಕ್ಕಳಿಗೆ ಗೊತ್ತಾಗದಂತೆ ಅಪ್ಪ-ಅಮ್ಮ ಬೆಳೆಸಿದ್ರು. ಅಭಿಷೇಕ್ ದಾಸರಹಳ್ಳಿಯ ಸ್ಟಾಂಡರ್ಡ್ ಇಂಗ್ಲಿಷ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿದ್ರು. ನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಡಿಪ್ಲೋಮ ಇನ್ ಮೆಕನಿಕಲ್ ಇಂಜಿನಿಯರಿಂಗ್, ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಮಾಡಿದ್ರು.


ಬಡತನದಲ್ಲಿ ತಂದೆ ಮಕ್ಕಳು ಚೆನ್ನಾಗಿ ಓದ್ಬೇಕು ಅಂತ ಕಾನ್ವೆಂಟ್ ಗೆ ಸೇರಿಸಿದ್ರು. 5ನೇ ತರಗತಿ ಓದುವಾಗಲೇ ಮನೆಯ ಕಷ್ಟಗಳನ್ನು ಅರ್ಥಮಾಡಿಕೊಂಡ ಅಭಿಷೇಕ್, ಆ ದಿನಗಳಿಂದಲೇ ಪಾರ್ಟ್ ಟೈಮ್ ಕೆಲಸ ಮಾಡ್ತಿದ್ರು…!


ಶಾಲಾ ದಿನಗಳಲ್ಲಿ ಸೈಕಲ್ ಶಾಪ್, ಸೀರಿಯಲ್ ಸೆಟ್ ಹಾಕುವಲ್ಲಿ, ಗ್ರಂಥಾಲಯದಲ್ಲಿ ಕೆಲಸ ಮಾಡಿ, ತನ್ನ ಕೈಲಾದ ಮಟ್ಟಿಗೆ ವಿದ್ಯಾಭ್ಯಾಸದ ಚಿಕ್ಕ-ಪುಟ್ಟ ಖರ್ಚುಗಳನ್ನು ನೋಡಿಕೊಳ್ತಿದ್ರು. ಕಾಲೇಜು ದಿನಗಳಲ್ಲಿ ಸಭೆ-ಸಮಾರಂಭಗಳಲ್ಲಿ ಅಡುಗೆ ಸಹಾಯಕರಾಗಿ ದುಡಿದಿದ್ದರು. ಇಂಜಿನಿಯರಿಂಗ್ ಮಾಡುವಾಗ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಟ್ಯೂಷನ್ ಮಾಡಿ ಆದಷ್ಟು ಖರ್ಚು-ವೆಚ್ಚವನ್ನು ನೋಡಿಕೊಂಡಿದ್ದರು.


ಪದವಿ ಮುಗಿಯುವಷ್ಟರಲ್ಲಿ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡ್ರು. ಕೋಲ್ಕತ್ತಕ್ಕೆ ಹೋಗಬೇಕಿತ್ತು…! ಆದ್ರೆ, ಆ ಕಂಪನಿಯವರು ಅಗ್ರಿಮೆಂಟ್ ಅದು ಇದು ಅಂತ ಕತೆ ಹೊಡೆಯೋಕೆ ಶುರುಮಾಡಿದ್ರು. ಬಾಂಡ್ ಪೇಪರ್ ನಲ್ಲಿ ಸಹಿ ಮಾಡಿ, ಕೆಲಸ ಪಡೆಯೋದು ಇಷ್ಟವಾಗದ ಅಭಿಷೇಕ್ ಸಿಕ್ಕ ಕೆಲಸವನ್ನೇ ರಿಜೆಕ್ಟ್ ಮಾಡಿದ್ರು…!


ಮುಂದೇನಪ್ಪ ಮಾಡೋದು ಅಂತ ಯೋಚಿಸುತ್ತಿರುವಾಗ ಫ್ರೆಂಡ್ ಒಬ್ರು, ‘ನಿನ್ನ ವಾಯ್ಸ್ ಚೆನ್ನಾಗಿದೆ. ಮೀಡಿಯಾದಲ್ಲಿ ಟ್ರೈ ಮಾಡು’ ಅಂದ್ರು. ತುಮಕೂರಿನ ‘ತುಮಕೂರು ನ್ಯೂಸ್’ ಚಾನಲ್ ಗೆ ಹೋದ್ರು. ಅಲ್ಲಿ ಕೆಲಸ ಆಯ್ತು, ಆ್ಯಂಕರಿಂಗ್, ರಿಪೋರ್ಟಿಂಗ್, ವಾಯ್ಸ್ ವೋವರ್ ಎಲ್ಲವನ್ನು ಕಲಿತರು, ಕೆಲಸ ಮಾಡಿದ್ರು. ಅದು 2014ನೇ ಇಸವಿ.


ಕೆಲವು ತಿಂಗಳ ನಂತರ ತುಮಕೂರು ನ್ಯೂಸ್ ಬಿಟ್ಟು, ಡಿಸೆಂಬರ್ ನಲ್ಲಿ ಅದೇ ಜಿಲ್ಲೆಯ ಮತ್ತೊಂದು ಸ್ಥಳಿಯ ಚಾನಲ್ ‘ಪ್ರಗತಿ’ಗೆ ಸೇರಿದ್ರು. ನ್ಯೂಸ್ ಚಾನಲ್ ನಲ್ಲಿ ಸಿಗ್ತಿದ್ದ ಸಂಬಳದಿಂದ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿತ್ತು.


ಅಪ್ಪ-ಅಮ್ಮ ಬೆಂಗಳೂರಲ್ಲಿ ಇದ್ದಿದ್ದರಿಂದ ನಿತ್ಯ ತುಮಕೂರು ಬೆಂಗಳೂರು ಅಪ್ ಡೌನ್ ಮಾಡಲು ಬಸ್ ಚಾರ್ಜ್‍ಗೆ ಆ ಸಂಬಳ ಸರಿ ಆಗೋಗ್ತಿತ್ತು. ಹಾಗಾಗಿ ಮತ್ತೊಂದು ಕೆಲಸದ ಅನಿವಾರ್ಯತೆ ಅಭಿಷೇಕ್ ಗೆ ಎದುರಾಯ್ತು. ಆಗ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ್ರು. ಬೆಳಗ್ಗೆ 8.30ರಿಂದ ಮಧ್ಯಾಹ್ನ 3.30ರವರೆಗೆ ಶಾಲೆಯಲ್ಲಿ ಪಾಠ ಮಾಡಿ, ಸಂಜೆ ತುಮಕೂರು ಬಸ್ ಹತ್ತುತ್ತಿದ್ರು…! ರಾತ್ರಿ 10.30ಕ್ಕೆ ತುಮಕೂರಿಂದ ವಾಪಸ್ಸು ಬೆಂಗಳೂರು ಬಸ್ ಹತ್ತೋದು…! ಇದೇ ನಿತ್ಯದ ಕೆಲಸ ಆಗಿತ್ತು.
ಇಷ್ಟಾದರು ಕುಟುಂಬದ ನಿರ್ವಹಣೆ, ಜೀವನ ನಡೆಸೋದು ಸಿಕ್ಕಾಪಟ್ಟೆ ಕಷ್ಟ ಆಯ್ತು. ಹಾಗಾಗಿ ಕೆಲಸ ಬದಲಿಸೋದು ಅನಿವಾರ್ಯವಾಯ್ತು. ಪ್ರಗತಿ ಟಿವಿಯನ್ನು ಬಿಟ್ರು.


2015ರ ಮೇ ನಲ್ಲಿ ರಾಜ್ಯಮಟ್ಟದ ಸುದ್ದಿವಾಹಿನಿಯೊಂದು ಅಭಿಷೇಕ್ ಅವರನ್ನು ಬರಮಾಡಿಕೊಂಡಿತು…! ಅದೇ ಪ್ರಜಾ ಟಿವಿ. ಇಲ್ಲಿ 11 ತಿಂಗಳು ಕೆಲಸ ಮಾಡಿ ನಂತರ 2016ರ ಏಪ್ರಿಲ್ ನಲ್ಲಿ ರಾಜ್ ನ್ಯೂಸ್ ಗೆ ಎಂಟ್ರಿ ಕೊಟ್ರು. ಅಲ್ಲೊಂದಿಷ್ಟು ತಿಂಗಳು ಅನುಭವ ಪಡೆದ ಮೇಲೆ 2017ರ ಅಕ್ಟೋಬರ್ ನಲ್ಲಿ ‘ದಿಗ್ವಿಜಯ’ದ ಹಾದಿ ಹಿಡಿದ್ರು.


ದಿಗ್ವಿಯದಲ್ಲಿ ‘ವಾವ್ ಕರ್ನಾಟಕ’ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡ್ತಿದ್ರು. ಈಗ ‘ಮಹಾಪ್ರಮಾದ’ ನಡೆಸಿಕೊಡ್ತಿದ್ದಾರೆ. ಕಳೆದ 2 ತಿಂಗಳುಗಳಿಂದ ಶ್ರೀಲಕ್ಷ್ಮೀ ಅವರೊಡನೆ ‘ನ್ಯೂಸ್ ಔಟ್ ಲುಕ್’ ನಡೆಸಿಕೊಡ್ತಿದ್ದಾರೆ.


ಅಭಿಷೇಕ್ ಮರುಜನ್ಮ ಪಡೆದವರು…! ಡಿಪ್ಲೋಮ ದಿನಗಳಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದಾಗ ಟೈಫಾಯಿಡ್ ಜ್ವರಕ್ಕೆ ತುತ್ತಾಗಿದ್ರು. ಅದನ್ನು ನಿರ್ಲಕ್ಷಿಸಿದ ಪರಿಣಾಮ ಅದು ‘ಮೆದುಳು ಜ್ವರಕ್ಕೆ’ ತಿರುಗಿ 4 ದಿನ ಕೋಮ ಸ್ಥಿತಿಯಲ್ಲಿದ್ರು…!


ಬದುಕಿಳಿದ ಮೇಲೆ, ಎಷ್ಟು ದಿನ ಇರ್ತೀವೋ ಬಿಡ್ತಿವೋ ಗೊತ್ತಿಲ್ಲ. ಏನಾದ್ರು ಮಾಡಲೇ ಬೇಕು. ಅಂದುಕೊಂಡಿದ್ದನು ಸಾಧಿಸಲೇ ಬೇಕು ಅಂದು ಪಣತೊಟ್ಟರು.
ಕ್ರಿಕೆಟ್ ಆಟಗಾರನಾಗಬೇಕು ಎಂಬ ಕನಸಿತ್ತು. ಆದ್ರೆ, ಆ ದಿನಗಳಲ್ಲಿ ಕಿಟ್ ಕೊಳ್ಳುವುದು ಸಹ ಕಷ್ಟವಾಗಿದ್ದರಿಂದ ಕನಸನ್ನು ಮೊಳಕೆಯಲ್ಲೇ ಚಿವುಟಿದ್ರು. ಚೆಸ್ ಹಾಗೂ ಫುಟ್ಬಾಲ್ ಆಟಗಾರ, ಒಳ್ಳೆಯ ಅಥ್ಲಿಟ್ ಕೂಡ ಹೌದು. ಮಗ ಎಲ್ಲಿ ಓದುವುದನ್ನು ನಿರ್ಲಕ್ಷಿಸ್ತಾನೋ ಎಂಬ ಕಾರಣದಿಂದ ಅಪ್ಪ-ಅಮ್ಮ ಆಟಕ್ಕೆ ಹೆಚ್ಚಿನ ಆದ್ಯತೆ ನೀಡಲಿಲ್ಲ.


ಅಂದು ಅಪ್ಪ-ಅಮ್ಮನಿಗೆ, ನನಗೆ ಒಳ್ಳೆಯ ಮಾರ್ಗದರ್ಶನ ನೀಡೋರು ಇದ್ದಿದ್ದರೆ ಇವತ್ತು ಇಷ್ಟದ ಕ್ರೀಡಾಪಟು ಆಗಿರುತ್ತಿದ್ದೆ ಎಂದು ಅಭಿಷೇಕ್ ನೊಂದುಕೊಳ್ತಾರೆ. ಅಷ್ಟೇಅಲ್ಲದೆ ಕಷ್ಟದಲ್ಲೂ ಬೆಳೆಸಿದ ಅಪ್ಪ-ಅಮ್ಮನ ತ್ಯಾಗವನ್ನು ಸ್ಮರಿಸುವುದನ್ನು ಮರೆಯಲ್ಲ.


ಪಕ್ಕದ ಮನೆಯಲ್ಲಿರುವ ಪುಷ್ಪಲತಾ ಅವರು ನನ್ನ ಎರಡನೇ ತಾಯಿ ಎಂದು ಅಭಿಷೇಕ್ ಹೇಳಿಕೊಳ್ತಾರೆ. ಅಭಿಷೇಕ್ ಮೊದಲು ಟ್ಯೂಷನ್ ಗೆ ಹೋಗಿದ್ದು ಇವರ ಬಳಿಯೆ. ಎಬಿಸಿಡಿ ಕಲಿಸಿಕೊಟ್ಟವರೂ ಪುಷ್ಪಲತಾ ಅವರಂತೆ. ಕಾಲೇಜು ಸೇರಲು 15ಸಾವಿರ ರೂ ಕೊಟ್ಟು ಉಪಕರಿಸಿದ್ದರು. ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇವತ್ತಿಗೂ ಅಭಿಷೇಕ್ ಪುಷ್ಪಲತಾ ಅವರೊಂದಿಗೆ ಚರ್ಚಿಸುತ್ತಾರಂತೆ.


ತಮ್ಮ ರಾಕೇಶ್ ಮೇಲೆ ಅಭಿಷೇಕ್ ಗೆ ತುಂಬಾ ಪ್ರೀತಿ, ಅಭಿಮಾನ. ನನ್ನ ತಮ್ಮನೇ ನನಗೆ ರೋಲ್ ಮಾಡಲ್. ಯಾವತ್ತೂ ಅಪ್ಪ-ಅಮ್ಮನನ್ನು ಬಿಟ್ಟಿರದ ಅವನು, ನನ್ನ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತೆ ಅಂತ ಉಚಿತ ಶಿಕ್ಷಣ ಪಡೆಯಲು ನವೋದಯ ಸೇರಿದ್ದ…! ಇವತ್ತಿಗೂ ಕುಟುಂಬದ ಬಗ್ಗೆ ನನಗಿಂತಲೂ ಹೆಚ್ಚು ಕಾಳಜಿ ತೋರುತ್ತಾನೆ ಎಂದು ಪ್ರೀತಿಯಿಂದ, ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.


ನ್ಯೂಸ್ ಆ್ಯಂಕರಿಂಗ್ ಡಿಸ್ಕಷನ್ ನಲ್ಲಿ ಪಳಗಿರೋ ಅಭಿಷೇಕ್ ಪ್ರಜಾಟಿವಿಯಲ್ಲಿರುವಾಗ ಸ್ಕ್ರಿಪ್ಟ್ ಬರೆಯುತ್ತಿದ್ದೆ. ಬರವಣಿಗೆ ಕಲಿಯಬೇಕು ಎಂಬುದು ನನ್ನಾಸೆ. ಜೊತೆಗೆ ಪತ್ರಿಕೋದ್ಯಮದಲ್ಲಿ ಪದವಿ, ಸ್ನಾತಕೋತ್ತರ ಪದವಿಯನ್ನು ಮಾಡೋ ಆಸೆಕೂಡ ಇದೆ ಏನೇನಾಗುತ್ತೋ ಗೊತ್ತಿಲ್ಲ ಅಂತ ವಿನಯದಿಂದ ನುಡಿಯುತ್ತಾರೆ. ಇವರ ಮಾತುಗಳಲ್ಲಿ ಸಾಧಿಸುವ ಛಲ ಹಾಗೂ ಮತ್ತಷ್ಟು ಮಗೆದಷ್ಟು ಜ್ಞಾನದ ಹಸಿವು ಕಾಣುತ್ತದೆ. ಹಠ, ನಿಸ್ವಾರ್ಥ, ಛಲ, ಜ್ಞಾನದ ಹಸಿವೇ ಇವರನ್ನು ಈ ಮಟ್ಟಿಗೆ ಬೆಳೆಸಿದ್ದಲ್ಲವೇ…?


ಮುಂದಾದೊಂದು ದಿನ ಅಕಸ್ಮಾತ್ ಮಾಧ್ಯಮದಿಂದ ದೂರಸರಿದ್ರೆ ಟೀಚಿಂಗ್ ಪ್ರೊಫೆಷನ್ ಆಯ್ಕೆಮಾಡಿಕೊಳ್ತೀನಿ ಎನ್ನುವ ಅಭಿಷೇಕ್, ಶಿಕ್ಷಕರಿಂದ ಸಮಾಜದಲ್ಲಿ ಕ್ರಾಂತಿ ಸಾಧ್ಯ ಎನ್ನುತ್ತಾರೆ.


ಅಭಿಷೇಕ್ ನೀವು ಯುವಸಮುದಾದಯ ಸ್ಪೂರ್ತಿಯ ಚಿಲುಮೆ, ನೀವು ನಡೆದು ಬಂದಹಾದಿ ಬಡತನದಲ್ಲಿ ಕನಸುಗಳೊಂದಿಗೆ ಬದುಕುತ್ತಿರೋ ಯುವಕರಿಗೆ ಮಾರ್ಗದರ್ಶಿ. ಅಭಿಷೇಕ್ ರಾಮಪ್ಪ, ನೀವಿನ್ನೂ ಎತ್ತರಕ್ಕೆ ಬೆಳೀರಿ. ನೀವು ಕಷ್ಟಪಟ್ಟವರು, ಕಷ್ಟಪಡುತ್ತಿರೋರು. ಹಾಗಾಗಿ ಅನುಮಾನವೇ ಬೇಡ ಇನ್ನೂ ದೊಡ್ಡ ಯಶಸ್ಸು ನಿಮಗೆ ಕಾದಿದೆ…

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ

48) 27ಡಿಸೆಂಬರ್ 2017 :ವಾಣಿ ಕೌಶಿಕ್

49) 28ಡಿಸೆಂಬರ್ 2017 : ಸುಗುಣ

50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ

ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.

51) 01ಜನವರಿ 2018 :ಐಶ್ವರ್ಯ ಎ.ಎನ್

52) 02ಜನವರಿ 2018 :ಶ್ರೀಧರ್ ಆರ್

53) 03ಜನವರಿ 2018 : ದಿವ್ಯಶ್ರೀ

54) 04ಜನವರಿ 2018 : ಮಂಜುಳ ಮೂರ್ತಿ

55) 05ಜನವರಿ 2018 : ಅಭಿಷೇಕ್ ರಾಮಪ್ಪ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...