ಫಿಫಾ ವಿಶ್ವಕಪ್ ಗೆ ದಿನಗಣನೆ ಆರಂಭವಾಗಿದೆ. ಜೂನ್ 14 ರಿಂದ ರಷ್ಯಾದಲ್ಲಿ ನಡೆಯುವ ಫುಟ್ಬಾಲ್ ಹಬ್ಬದಲ್ಲಿ 32 ತಂಡಗಳು ಭಾಗವಹಿಸುತ್ತವೆ. ಒಟ್ಟು ಒಂದು ತಿಂಗಳುಗಳ ಕಾಲ 64 ಪಂದ್ಯಗಳು ನಡೆಯುತ್ತವೆ.
2010ರ ಫಿಫಾ ವಿಶ್ವಕಪ್ ನಲ್ಲಿ ನಿಖರ ಭವಿಷ್ಯ ನುಡಿಯುವ ಮೂಲಕ ಅಕ್ಟೋಪಸ್ ಫೇಮಸ್ ಆಗಿತ್ತು. ಆಕ್ಟೋಪಸ್ ನುಡಿದ 13 ಭವಿಷ್ಯಗಳಲ್ಲಿ 11ಸತ್ಯವಾಗಿತ್ತು.
ಈ ಬಾರಿ ‘ಅಚಿಲ್ಸ್’ ಎನ್ನುವ ವೈಟ್ ಕ್ಯಾಟ್ ಯಾರು ಗೆಲ್ತಾರೆ ಎಂಬ ಭವಿಷ್ಯ ನುಡಿಯಲಿದೆ…!
ಅಚಿಲ್ಸ್ ಗೆ ಕಿವಿ ಕೇಳಲ್ಲ. ಮಾಸ್ಕೊದ ಹರ್ಮಿಟೆಜ್ ನಲ್ಲಿ ಅಚಿಲ್ಸ್ ವಾಸವಿದೆ. ಆಕ್ಟೋಪಸ್ ನಂತೆ ಇದು ಸಹ ನಿಖರ ಭವಿಷ್ಯ ನುಡಿಯುತ್ತದೆ ಎಂದು ನಂಬಲಾಗಿದೆ.