ನಿಮಗೆ ನೆನಪಿರಬಹುದು 2008ರ ಅಹಮದಾಬಾದ್ ಸರಣಿ ಸ್ಪೋಟ. ಅವತ್ತು ಕೇವಲ 70 ನಿಮಿಷದಲ್ಲಿ 20 ಬಾಂಬ್‍ಗಳು ಸ್ಪೋಟಿಸಿ 56 ಮಂದಿ ಸಾವನ್ನಪ್ಪಿದ್ದರು. 200 ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಭಯೋತ್ಪಾಧನಾ ನಿಗ್ರಹ ದಳ (ಎಟಿಎಸ್) ಬೆಳಗಾವಿಯ ಶಂಕಿತ ಸಿಮಿ ಭಯೋತ್ಪಾಧಕರನ್ನು ಬಂಧಿಸಿದ್ದಾರೆ.
ಬಂಧಿತ 38 ವರ್ಷದ ನಾಸೀರ್ ರಂಗ್ರೇಜ್. ಈತ ಬೆಳಗಾವಿಯಲ್ಲಿ ಆಟೋ ಚಾಲಕನಾಗಿದ್ದ.
ಈತ ಅಹಮದಾಬಾದ್‍ನಲ್ಲಿ ಬಾಂಬ್ ಸ್ಪೋಟಿಸಲು ಗುಜರಾತ್‍ಗೆ ಬಂದಿರಲಿಲ್ಲ.ಸ್ಫೋಟ ನಡೆಸುವವರಿಗೆ ತರಬೇತಿ ನೀಡಿದ್ದ ಎಂದು ಎಟಿಎಸ್ ಸಬ್ ಇನ್ಸ್‍ಪೆಕ್ಟರ್ ಸಿ.ಆರ್. ಜಾದವ್ ಹೇಳಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಖಡೇ ಬಜಾರ್ ರಸ್ತೆಯಲ್ಲಿರುವ ನಿವಾಸವೊಂದರ ಮೇಲೆ ದಾಳಿ ನಡೆಸಿದಾಗ ಆರೋಪಿ ಸಿಕ್ಕಿದ್ಧಾನೆ. ಗುಕರಾತ್‍ನಲ್ಲಿ ಭಯೋತ್ಪಾಧಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದ ಇಂಡಿಯನ್ ಮುಜಾಹಿದೀನ್ ಮತ್ತು ಸಿಮಿ ಭಯೋತ್ಪಾಧಕ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದ ಇವನು ಕೇರಳದ ವಾಘಮೊನ್‍ನ ಭಯೋತ್ಪಾದನಾ ಶಿಬಿರದಲ್ಲಿ ಯುವಕರಿಗೆ ತರಬೇತಿ ನೀಡುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.
POPULAR STORIES :
ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ
ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!
ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ..!!
68 ನೇ ವಯಸ್ಸಿನ ತಾತ 10ನೇ ತರಗತಿಯ ವಿದ್ಯಾರ್ಥಿ..!!
ಮಹಿಳೆ ಮೇಲೆ ಅತ್ಯಾಚಾರ..! ಭಾರತೀಯ ಆಟಗಾರ ಅರೆಸ್ಟ್ ಯಾರು ಆ ರೇಪಿಸ್ಟ್ ಕ್ರಿಕೆಟರ್…?
ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!