ಏರ್ ಇಂಡಿಯಾ ವಿಮಾನಯಾನದ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂಬ ಆಘಾತಕಾರಿ ವಿಷಯ ವರದಿಯಾಗಿದೆ.
ಏರ್ ಇಂಡಿಯಾ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಸಾಲು ಸಾಲು ಟ್ವೀಟ್ ಗಳನ್ನು ಮಾಡಲಾಗಿದ್ದು, ಒಂದು ಟ್ವೀಟ್ ನಲ್ಲಿ ‘ಏರ್ ಇಂಡಿಯಾದ ಎಲ್ಲಾ ವಿಮಾನಗಳನ್ನೂ ರದ್ದುಗೊಳಿಸಲಾಗಿದೆ ಎಂಬ ಪೋಸ್ಟ್ ಹಾಕಲಾಗಿತ್ತು. ಹಾಗೆಯೇ ಖಾತೆಯ ಹೆಸರನ್ನೂ ಬದಲಾಯಿಸಲಾಗಿತ್ತು.
ಇಂದು ಬೆಳಗ್ಗಿನ ಜಾವ ಈ ಬೆಳವಣಿಗೆ ನಡೆದಿದ್ದು ಏರ್ ಇಂಡಿಯಾದಿಂದ ಯಾವ್ದೇ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.