261 ಮಂದಿಯ ಜೀವ ಉಳಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್…!

0
135

ಗಗನ ಮಧ್ಯದಲ್ಲಿ ಎರಡು ವಿಮಾನಗಳ‌ ನಡುವೆ ಸಂಭವಿಸುತ್ತಿದ್ದ ಭೀಕರ ಅಪಘಾತವೊಂದು ಮಹಿಳಾ ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದೆ.


ಮುಂಬೈನ ವಾಯುಯಾನ ಮಾರ್ಗದ ನಡುವೆ ಏರ್ ಇಂಡಿಯಾ ಮತ್ತು ಏರ್ ವಿಸ್ತಾರ ವಿಮಾನಗಳ ನಡುವೆ ಅಪಘಾತ ಸಂಭವಿಸುತ್ತಿತ್ತು.
ಏರ್ ವಿಸ್ತಾರದ ಪೈಲಟ್ ಶೌಚಾಲಯಕ್ಕೆ ತೆರಳಿದ್ರು. ಆಗ ಮಹಿಳಾ ಸಹ ಪೈಲಟ್ ಒಬ್ಬರು ವಿಮಾನ ಚಲಾಯಿಸುತ್ತಿದ್ದರು.ಈ ಸಮಯದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಪೈಲಟ್ ಕ್ಯಾಪ್ಟನ್ ಅನುಪಮಾ ಕೊಹ್ಲಿ ಇದ್ದರು.


ಈ ಸಂದರ್ಭದಲ್ಲಿ ಏರ್ ಟ್ರಾಫಿಕ್ ಮತ್ತು‌ ಏರ್ ವಿಸ್ತಾರದ ನಡುವೆ ಸಂಪರ್ಕದಲ್ಲಿ ಗೊಂದಲ ಉಂಟಾಗಿತ್ತು. ಏರ್ ಇಂಡಿಯಾದಲ್ಲಿದ್ದ ಅನುಪಮಾ‌ ಅವರು ಎದುರಿನಿಂದ ಇನ್ನೊಂದು ವಿಮಾನ ಬರುತ್ತಿರೋದನ್ನು ಕಂಡು ವಿಸ್ತಾರದ ಯುಕೆ 997ವಿಮಾನಕ್ಕೆ ಎಟಿಸಿ ಮೂಲಕ ಎಚ್ಚರಿಕೆ ನೀಡಿದರು.ಜೊತೆಗೆ ತಮ್ಮ ಹಿಡಿತದಲ್ಲಿದ್ದ ಏರ್ ಇಂಡಿಯಾ ವಿಮಾನವನ್ನು ಇನ್ನಷ್ಟು ಎತ್ತರಕ್ಕೆ ಹಾರಿಸಿದ್ರು.‌ ಇದರಿಂದ ಆಗಬಹುದಿದ್ದ ಅನಾಹುತ ತಪ್ಪಿದೆ.


ವಿಸ್ತಾರ ಯುಕೆ 997ವಿಮಾನ ದೆಹಲಿಯಿಂದ ಪುಣೆಗೆ , ಏರ್ ಇಂಡಿಯಾದ ಎಐ631ವಿಮಾನ ಮುಂಬೈನಿಂದ ಭೋಪಾಲ್‌ ಗೆ ಪ್ರಯಾಣ ಬೆಳೆಸಿತ್ತು.‌ ವಿಸ್ತಾರದಲ್ಲಿ‌ 152 ಮತ್ತು ಏರ್ ಇಂಡಿಯಾದಲ್ಲಿ 109ಪ್ರಯಾಣಿಕರಿದ್ದರು.

LEAVE A REPLY

Please enter your comment!
Please enter your name here