ನಟಿ ಐಶ್ವರ್ಯ ರೈ ಅವರ ತಾಯಿ ವೃಂದಾ ರೈ ವಾಸವಿರೋ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಮುಂಬೈನ ಬಾಂದ್ರದಲ್ಲಿನ ಲಾ ಮರ್ ಬಿಲ್ಡಿಂಗ್‍ನಲ್ಲಿ ವಾಂದ್ರ ರೈ ವಾಸವಿದ್ದಾರೆ. ಇದೇ ಕಟ್ಟಡಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಅತ್ತೆ-ಮಾವ ಕೂಡ ವಾಸವಿದ್ದಾರೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.
ತಾಯಿ ವಾಸವಿರುವ ಮನೆಗೆ ಬೆಂಕಿ ತಗುಲಿದ ವಿಷಯ ತಿಳಿಯುತ್ತಿದ್ದಂತೆ ಐಶ್ವರ್ಯ ರೈ ತನ್ನ ಪತಿ ಅಭಿಷೇಕ್ ಜೊತೆ ತೆರಳಿ, ತಾಯಿಯ ಯೋಗಕ್ಷೇಮ ವಿಚಾರಿಸಿದ್ದಾರೆಂದು ತಿಳಿದು ಬಂದಿದೆ.