ನ್ಯಾಚ್ಯುರಲ್ ಮೆಡಿಸಿನ್ ರಿಸರ್ಚ್ ಅನ್ವಯ ಅಲೋವೆರಾದಲ್ಲಿ ವಿಟಾಮಿನ್ A,C,B12 ಮಾತ್ರವಲ್ಲದೆ ಫಾಲಿಕ್ ಆಸಿಡ್,ಕ್ಯಾಲ್ಶಿಯಂ,ಮೆಗ್ನೇಷಿಯಂ ಹಾಗೂ ಪೊಟ್ಯಾಷಿಯಂ ನಂತಹ ಮಿನರಲ್ಸ್ ಗಳಿರುತ್ತವೆ.ಇವೆಲ್ಲಾವುಗಳೂ ಒಟ್ಟಾಗಿ ನಮ್ಮ ದೇಹದ ಬೇರೆ ಬೇರೆ ಭಾಗಗಳಲ್ಲಿ ತನ್ನ ಪ್ರಭಾವವನ್ನು ಬೀರುತ್ತದಂತೆ,ನಾವು ಅಲೋವೆರಾವನ್ನು ನಿರಂತರವಾಗಿ ಉಪ್ಯೋಗಿಸಿದ್ರೆ,ನಮ್ಮ ಚರ್ಮ ಕಾಂತಿಯುತವಾಗುವುದಲ್ಲದೆ,ಮೃದುತ್ವವನ್ನು ಪಡೆದುಕೊಳ್ಳುತ್ತದಂತೆ,ಇದಲ್ಲದೆ ಅನ್ನೂ ಅನೇಕ ತರಹದ ಅನಾರೋಗ್ಯವನ್ನು ಪರಿಹರಿಸುವಲ್ಲೂ ಇವುಗಳು ಸಹಾಯಕ.ಇವುಗಳ ಬಗೆಗಿನ ಕೆಲವೊಂದು ಮಾಹಿತಿ ನಿಮಗಾಗಿ.
ಆರೋಗ್ಯವಂತ ಸ್ಕಿನ್ ಗಾಗಿ
ಅಲೋವೆರಾ ಜೆಲ್ ನ ಫೇಸ್ ಪ್ಯಾಕ್ ತರಹ ಲೇಪಿಸಿಕೊಳ್ಳಿ.ಇದರಿಂದಾಗಿ ಒಣ ಚರ್ಮ,ಬಿಸಿಲಿನ ತಾಪ,ಮೊಡವೆಗಳು,ಚರ್ಮ ಸುಕ್ಕು ಗಟ್ಟುವಿಕೆ ಹಾಗೂ ಅನೇಕ ಚರ್ಮದ ಮೇಲಿನ ಕಲೆಗಳು ನಿವಾರಣೆಯಾಗುತ್ತದೆ.ಜೊತೆಗೆ ಚರ್ಮ ನುಣುಪನ್ನೂ ಪಡೆದುಕೊಳ್ಳುತ್ತದೆ.
ಗಾಯ ಮತ್ತು ಹುಣ್ಣುಗಳಿಗೆ
ಒಂದು ಚಮಚ ಅಲೋವೆರಾ ಜೆಲ್ ಹಾಗೂ ಪುಡಿ ಮಾಡಿಟ್ಟ ಅರಿಶಿನವನ್ನು ಮಿಶ್ರಣ ಮಾಡಿ ಕ್ರೀಂ ತರಹದಲ್ಲಿ ಗಾಯದ ಮೇಲೆ ಹಚ್ಚಿದಲ್ಲಿ ಪರಿಹಾರ.ಹಾಗೂ ಇದೇ ಕ್ರೀಂ ನ್ನು ಹುಣ್ಣುಗಳಿಗೆ ಹಚ್ಚಿ ಅದರ ಮೇಲೆ ಬಟ್ಟೆಯನ್ನು ಸುತ್ತಿಕಟ್ಟಿದಲ್ಲಿ ಹುಣ್ಣು ಶೀಘ್ರದಲ್ಲಿ ಒಡೆದು ಹೋಗುತ್ತದೆ.
ಕೂದಲುದುರುವಿಕೆಗೆ ಪರಿಹಾರ
ಒಂದು ಕಪ್ ಮೆಹಂದಿ ಪೌಡರ್ ನಲ್ಲಿ ಮೂರು ಚಮಚದಷ್ಟು ಅಲೋವೆರಾ ಜೆಲ್ ಮಿಕ್ಸ್ ಮಾಡಿ ಇದನ್ನು ಕೂದಲಿಗೆ ಶ್ಯಾಂಪೂವಿನಂತೆ ಲೇಪಿಸಿಕೊಂಡು ಒಂದು ಘಂಟೆ ಬಿಟ್ಟು ಕೂದಲನ್ನು ತೊಳೆದುಕೊಳ್ಳಿ,ಇದರಿಂದಾಗಿ ನಿಮ್ಮ ಕೂದಲ ಉದುರುವಿಕೆ ಕಡಿಮೆಯಾಗುತ್ತದೆ.
ತಲೆಯ ಹೊಟ್ಟು ನಿವಾರಣೆ
ಮೂರು ಚಮಚ ಅಲೋವೆರಾ ಜೆಲ್ ನ ಪುಡಿ ಮಾಡಿದ ಕರ್ಪೂರದ ಜೊತೆ ಮಿಕ್ಸ್ ಮಾಡಿ ಕೂದಲಿನ ಬುಡಕ್ಕೇ ಹಚ್ಚಿ,ಅರ್ಧ ಘಂಟೆ ಬಿಟ್ಟು ಉಗುರು ಬಿಸಿ ನೀರಿನಿಂದ ನಿಮ್ಮ ಕೂದಲನ್ನು ತೊಳೆದಲ್ಲಿ,ತಲೆಹೊಟ್ಟು ನಿವಾರಣೆಯಾಗುವುದಲ್ಲದೆ,ಕೂದಲು ಕಾಂತಿಯುತವಾಗುತ್ತದೆ.
ಮಲಬದ್ದತೆ ನಿವಾರಣೆ
ನಿತ್ಯಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಕಪ್ ಅಲೋವೆರಾ ಜ್ಯೂಸ್ ನಲ್ಲಿ ಸೇಂದಾ ಲವಣ ಸೇರಿಸಿ ಕುಡಿದಲ್ಲಿ ನಿಮ್ಮ ಮಲಬದ್ದತೆಯ ಸಮಸ್ಯೆ ಪರಿಹಾರವಾಗುತ್ತದೆ.
ದೇಹದಲ್ಲಿರುವ ಅಧಿಕ ಕೊಬ್ಬು ನಿವಾರಕ
ದಿನನಿತ್ಯ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿರೊ ಟಾಕ್ಸಿನ್ ಹೊರಹೋಗುತ್ತದೆ,ಜೀರ್ಣ ಕ್ರಿಯೆ ಉತ್ತಮ ವಾಗಿ ಸಾಗುತ್ತದೆ.ಮೆಟಾಬಾಲಿಸಂ ಸುಧಾರಣೆಯಿಂದ ದೇಹದಲ್ಲಿ ಅತ್ಯಧಿಕವಾಗಿರೋ ಕೊಬ್ಬು ಕಡಿಮೆಯಾಗುತ್ತದೆ.
ಅಸಿಡಿಟಿ ಸಮಸ್ಯೆಗೆ ಪರಿಹಾರ
ಪ್ರತೀ ದಿನ ಅಲೋವೆರಾ ಜೆಲ್ ನ ಒಂದು ಗ್ಲಾಸು ಬಿಸಿ ನೀರಿನೊಂದಿಗೆ ಸೇರಿಸಿ ಸೇವಿಸಿದಲ್ಲಿ ನಿಮ್ಮ ಅಸಿಡಿಟಿ ನಿವಾರಣೆಯಾಗುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಳ
ಅಲೋವೆರಾ ವು ಬಿಳಿರಕ್ತ ಕಣಗಳ ಪ್ರಭಾವ ವನ್ನು ಹೆಚ್ಚಿಸುತ್ತದೆ,ಇದರಲ್ಲಿರೋ ಆಂಟಿ ಓಕ್ಸಿಡೆಂಟ್ಸ್ ರೋಗಾಣುಗಳ ವಿರುದ್ದ ಹೋರಾಡುವ ಶಕ್ತಿಯನ್ನು ನಮಗೆ ಒದಗಿಸುತ್ತದೆ
ಹಾರ್ಟ್ ಪ್ರಾಬ್ಲಂಗೆ ಉತ್ತಮ ಪರಿಹಾರ
ನಿತ್ಯ ಅಲೋವೆರಾ ಸೇವನೆಯಿಂದಾಗಿ ಅದರಲ್ಲಿರೋ ಬೀಟಾ ಸಿಸ್ಟೆರಾಲ್ ಅನ್ನೋ ಅಂಶವು ರಕ್ತದಲ್ಲಿನ ಕೊಲೆಸ್ಟ್ರಾಲ್ ನ ಕಡಿಮೆ ಮಾಡುತ್ತದೆ ಹಾಗೂ ಹೃದಯಾಘಾತದಂತಹ ತೊಂದರೆ ನಿವಾರಣೆಯಾಗುತ್ತದೆ.
ಮೂತ್ರ ದೋಷಗಳು ನಿವಾರಣೆ
ಒಂದು ಚಮಚ ಅಲೋವೆರಾ ಜೆಲ್, ಖಾಲಿ ಹೊಟ್ಟೆಯಲ್ಲಿ ನಿತ್ಯ ಸೇವಿಸುವುದರಿಂದ,ಯೂರಿನ್ ಇನ್ಫೆಕ್ಷನ್ ಹಾಗೂ ಉರಿ ಮೂತ್ರದಂತಹ ಸಮಸ್ಯೆಗೆ ಉತ್ತಮ ಪರಿಹಾರ.
ಫ್ರೆಂಡ್ಸ್ ಅಂಗೈಯಲ್ಲೇ ಔಷದ ಇರೋವಾಗ ಇನ್ಯಾಕ್ರೀ ತಡ ಮಾಡ್ತೀರಾ????
- ಸ್ವರ್ಣಲತ ಭಟ್
POPULAR STORIES :
ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!
ಫೇಸ್‍ಬುಕ್‍ನಲ್ಲಿ ಲೈವ್ ಸಾಹಸ ಪ್ರದರ್ಶನ ತೋರಿಸಲು ಹೋಗಿ ಹೆಣವಾದ..!
ಈ ವೃದ್ದ ಸನ್ಯಾಸಿಯ ದೀರ್ಘಾಯುಷ್ಯದ ಸೀಕ್ರೇಟ್ ಏನು ಗೊತ್ತಾ…?
ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!
ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು
ಬೆಳ್ಳಿತಾರೆ ಸಿಂಧು ಜೊತೆ ಜಾಹಿರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್..!
ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!
ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!