ಹೌದು…ಇದು ನಿಜ.. ಒಂದೇ ಬಾಲಿಗೆ 286 ರನ್ ಗಳಿಸಿದ ಕ್ರಿಕೆಟಿಗರ ಕಥೆ ಇದು..! ಇದು ನಡೆದದ್ದು 1894ರಲ್ಲಿ, ಆಸ್ಟ್ರೇಲಿಯಾದಲ್ಲಿ.
ಅದು ವೆಸ್ಟರ್ನ್ ಆಸ್ಟ್ರೇಲಿಯಾ ಹಾಗೂ ವಿಕ್ಟೋರಿಯಾ ತಂಡಗಳ ನಡುವಿನ ಕ್ರಿಕೆಟ್ ಪಂದ್ಯ. ವಿಕ್ಟೋರಿಯಾ ತಂಡ ಮೊದಲ ಇನ್ನಿಂಗ್ ಬ್ಯಾಟ್ ಮಾಡಲು ಕ್ರೀಜಿಗಿಳಿಯಿತು. ಮೊದಲ ಎಸೆತದಲ್ಲೇ ವಿಕ್ಟೋರಿಯಾ ತಂಡದ ಆರಂಭಿಕ ದಾಂಡಿಗ ಬಲವಾಗಿ ಹೊಡೆದ ಹೊಡೆತಕ್ಕೆ ಬಾಲ್ ಹೋಗಿ ಕ್ರೀಡಾಂಗಣದ ಒಳಗೇ ಇದ್ದ ಎತ್ತರದ ಮರಕ್ಕೆ ಹೋಗಿ ಸಿಕ್ಕಿ ಹಾಕಿಕೊಂಡುಬಿಡ್ತು..! ಅದು ಎತ್ತರಕ್ಕೆ ಸಿಕ್ಕಿಹಾಕಿಕೊಂಡರೂ ಅದು ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತಿತ್ತು..! ಈ ಕಡೆ ಕ್ರೀಜಿನಲ್ಲಿದ್ದ ಇಬ್ಬರೂ ದಾಂಡಿಗರೂ ಸುಮ್ಮನೆ ರನ್ ಓಡುತ್ತಿದ್ದರು. ಬಾಲ್ ಕಳೆದುಹೋಯ್ತು ಅಂತ ಘೋಶಿಸಿ ಅಂತ ವೆಸ್ಟ್ ಆಶ್ತ್ರೇಲಿಯಾ ತಂಡ ಕೇಳಿದರೂ ಅಂಪೈರ್ ಒಪ್ಪಲಿಲ್ಲ..! ಕಾರಣ, ಅದು ಕಣ್ಣಿಗೆ ಕಾಣುತ್ತಿರುವಾಗ ಅದು ಹೇಗೆ ಕಳೆದು ಹೋಯ್ತು ಅಂತ ಹೇಳಲು ಸಾಧ್ಯ ಅನ್ನೋದು ಅಂಪೈರ್ ವಾದ..! ಹತ್ತಿರದಲ್ಲೇ ಯಾರದಾದರೂ ಮನೆಗೆ ಹೋಗಿ ಗರಗಸ ತಂದು ಮರ ಕಡಿಯೋಣ ಅಂದ್ರೆ ಅದೂ ಸಾಧ್ಯವಾಗಲಿಲ್ಲ..! ಕೊನೆಗೆ ಬಂದೂಕು ತಂದು ಆ ಚೆಂಡಿನ ಆಚೆ ಈಚೆ ಹೊಡೆದು ಅದನ್ನು ಕೆಳಗೆ ಉರುಳಿಸೋ ಐಡಿಯಾ ಮಾಡ್ತಾರೆ. ಹತ್ತಿರದಲ್ಲಿದ್ದ ಒಬ್ಬರ ಮನೆಯಿಂದ ಬಂದೂಕು ತಂದು 708 ಗುಂಡು ಹೊಡೆದರೂ ಅದು ಗುರಿ ತಪ್ಪಿತು. ಕೊನೆಗೆ ಒಂದು ಗುಂಡು ಬಾಲಿನ ಪಕ್ಕದಲ್ಲೇ ಬಿದ್ದು ಆ ಚೆಂಡು ನೆಲಕ್ಕೆ ಬೀಳುತ್ತೆ. ಆದ್ರೆ ಮೈದಾನದಲ್ಲಿದ್ದ ಆಸ್ಟ್ರೇಲಿಯಾ ಆಟಗಾರರು ಆ ಹೊತ್ತಿಗೆ ಸುಸ್ತಾಗಿ ಹೋಗಿದ್ರು. ಬಾಲನ್ನು ವಿಕೆಟ್ ಕೀಪರ್ ಬಳಿ ತಲುಪಿಸುವ ಹೊತ್ತಿಗೆ ಆ ಇಬ್ಬರೂ ಆರಂಭಿಕ ದಾಂಡಿಗರು ಬರೋಬ್ಬರಿ 286 ರನ್ ಓಡಿದ್ರು..! ಅದು ಹೆಚ್ಚುಕಮ್ಮಿ 6 ಕಿಲೋಮೀಟರ್ ಲೆಕ್ಕ..! ಒಂದೇ ಬಾಲಿಗೆ 286 ರನ್ ಗಳಿಸಿ ವಿಕ್ಟೋರಿಯ ತಂಡ ಡಿಕ್ಲೇರ್ ಮಾಡೊಕೊಳ್ತು..! ಆ ಪಂದ್ಯವನ್ನೂ ವಿಕ್ಟೋರಿಯ ತಂಡ ತನ್ನದಾಗಿಸಿಕೊಳ್ತು..!
- ರಘು ಭಟ್
POPULAR STORIES :
ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?
ರಾಜೀನಾಮೆ ನಂತರ ಮೊದಲಬಾರಿಗೆ ಮೀಡಿಯಾ ಮುಂದೆ ಅನುಪಮಾ ಏನ್ ಹೇಳಿದ್ರು ಗೊತ್ತಾ?!
ಹೇರ್ ಟ್ರಾನ್ಸ್‍ಪ್ಲಾಂಟ್ ಮಾಡಿಸ್ಕೋತೀರಾ..!? ಸಾವು ಗ್ಯಾರಂಟಿ..!! ಹುಷಾರ್..!!?
ದೆಹಲಿಗೆ ಬಾಂಬಿಡ್ತಾನಂತೆ ದಾವೂದ್..! ನರರಾಕ್ಷಸನನ್ನು ಹಿಡಿಯೋ ತಾಕತ್ತಿಲ್ಲವೇ..!?
`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video