ಕೆನಡಾ ಮೂಲದ ಇ-ಕಾಮರ್ಸ್ ಸಂಸ್ಥೆಯಾದ ಅಮೆಜಾನ್ ಕಂಪನಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಡೋರ್ ಮ್ಯಾಟ್‍ಗಳನ್ನು ಮಾರಾಟ ಮಾಡ್ಬೇಡಿ ಅಂತ ಎಚ್ಚರಿಕೆ ನೀಡಿದ್ದಾರೆ. ಡೋರ್‍ಮ್ಯಾಟ್ ಮಾರಾಟ ಮಾಡಿದ್ದೆ ಆದ್ರೆ ನಿಮ್ಮ ಸಂಸ್ಥೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಅಂತ ವಾರ್ನಿಂಗ್ ನೀಡಿದ್ದಾರೆ..! ಅಷ್ಟಕ್ಕೂ ಡೋರ್ ಮ್ಯಾಟ್ ಮಾರಾಟಕ್ಕೂ ಸುಷ್ಮಾ ಅವರು ವಾರ್ನಿಂಗ್ ಕೊಡೋಕೂ ಏನಿದೆ ಸಂಬಂಧ ಅಂತ ನೀವು ಕೇಳೋದಾದ್ರೆ ಈ ಸ್ಟೋರಿನ ನೀವು ಓದ್ಲೆ ಬೇಕು. ವಿಶ್ವದ ನಂ.1 ಆನ್ಲೈಲ್ ಶಾಪಿಂಗ್ ಸಂಸ್ಥೆಯಾದ ಅಮೇಜಾನ್ ಘೋರ ಅಪರಾದವೊಂದು ಮಾಡಿದೆ. ದೇಶದ ರಾಷ್ಟ್ರಧ್ವಜವನ್ನು ಹೋಲುವ ಡೋರ್ ಮ್ಯಾಟ್‍ಗಳನ್ನು ಉತ್ಪಾದಿಸಿದಲ್ಲದೆ ಅದನ್ನು 1491ರೂ.ಗೆ ಮಾರಾಟಕ್ಕಿಟ್ಟಿದ್ದಾರೆ..! ಇದರ ಮಾಹಿತಿ ತಿಳಿಯುತ್ತಿದ್ದಂತೆ ಅಮೇಜಾನ್ ಸಂಸ್ಥೆಗೆ ಎಚ್ಚರಿಕೆ ನೀಡಿರುವ ಅವರು ಕೂಡಲೆ ಉತ್ಪನ್ನಗಳನ್ನು ವಾಪಾಸ್ ಪಡೆದುಕೊಳ್ಳುವಂತೆ ಹೇಳಿದ್ದಾರೆ. ಕಾಲೊರೆಸುವ ಡೋರ್ ಮ್ಯಾಟ್‍ಗಳಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹೋಲುವ ಉತ್ಪನ್ನಗಳನ್ನು ಮಾರಾಟಕ್ಕಿಟ್ಟಿರೋದು ನಮ್ಮ ದೇಶದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತೆ ಎಂದು ಹೇಳಿರುವ ಅವರು ಅಮೇಜಾನ್ ಕಂಪನಿ ತಾವು ಮಾಡಿರೋ ತಪ್ಪಿಗೆ ಕೂಡಲೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ರೆ ಈಗಾಗಲೆ ಕಂಪನಿ ಅಧಿಕಾರಿಗಳಿಗೆ ನೀಡಿರೋ ವೀಸಾವನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಇದಕ್ಕೆ ಮಣಿದಿರುವ ಅಮೇಜಾನ್ ರಾಷ್ಟ್ರಧ್ವಜ ಮಾದರಿಯ ಉತ್ಪನ್ನಗಳನ್ನು ಹಿಂಪಡೆದು ಮಾರಾಟ ಸ್ಥಗಿತಗೊಳಿಸಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಖಂಡಿಸುವ ಪ್ರಥಮ್ ನುಡಿದ ಭವಿಷ್ಯ ನಿಜವಾಗುತ್ತಾ??
ಭಾರಿ ಗಿಫ್ಟ್ ನೀಡೋಕೆ ಮುಂದಾಗಿದೆ ಜಿಯೋ..!
ರಯೀಸ್ ಚಿತ್ರ ಬಿಡುಗಡೆ ಮಾಡ್ಬೇಡಿ: ಶಿವಸೇನೆ ಧಮ್ಕಿ..!
ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!
ಇನ್ಮುಂದೆ ಖಾಸಗೀ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್‍ಮೆಂಟ್ ಇರೋದಿಲ್ಲ..!
ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ
195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!