ರೆಬಲ್ ಸ್ಟಾರ್ ಅಂಬರೀಶ್ ಅವ್ರು ಕನ್ನಡ ಚಾನಲ್ ಗಳನ್ನು ಬಿಟ್ಟು ರಾಷ್ಟ್ತೀಯ ವಾಹಿನಿ ನೋಡ್ತಿದ್ದಾರೆ..! ಕನ್ನಡ ನ್ಯೂಸ್ ಚಾನಲ್ ಗಳನ್ನು ಅಂಬಿ ಯಾಕೆ ನೋಡ್ತಿಲ್ಲ…?
ಮೊದಲಿನಿಂದಲೂ ಅಂಬಿ ನೋಡ್ತಿದ್ದುದು ಕನ್ನಡ ಚಾನಲ್ ಗಳನ್ನು. ಆದ್ರೆ, ಕಳೆದ ನಾಲ್ಕು ದಿನಗಳಿಂದ ಕನ್ನಡ ಚಾನಲ್ ಬಿಟ್ಟು ಎನ್ ಡಿ ಟಿವಿ ನೋಡ್ತಿದ್ದಾರೆ.
ಹೌದು ಇದು ಅಂಬಿ ಮಾಡಿರೋ ತಮಾಷೆ ಅಷ್ಟೇ. ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರೋ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ನಿನ್ನೆ ಫಿಲ್ಮ್ ಛೇಂಬರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅಂಬಿ ಹೀಗಂದ್ರು.
ನಮ್ಗೂ ನಾಲ್ಕು ದಿನದ ದಿಂದ ಈ ವಿಚಾರಗಳನ್ನು ನೋಡಿ ನೋಡಿ ಬೇಜಾರಿಗಿದೆ. ಅದ್ಕೆ ಎನ್ ಡಿಟಿವಿ ನೋಡ್ತಿದ್ದೇನೆ ಅಂತ ಹಾಸ್ಯಚಟಾಕಿ ಹಾರಿಸಿದ್ರು.