ಬಿಜೆಪಿ ಸರ್ಕಾರ ICU ನಲ್ಲಿದೆ…!

Date:

ಬಿಜೆಪಿ ಸರ್ಕಾರ ICU ಸೇರಿರುವುದಕ್ಕೆ ಅಮಿತ್ ಶಾ ಅವರು ಆತಂಕದಲ್ಲಿ ಓಡೋಡಿ ಬರುತ್ತಿದ್ದಾರಂತೆ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಜನಾಕ್ರೋಶ ಅಷ್ಟೇ ಅಲ್ಲ, ಕಾರ್ಯಕರ್ತರ ಆಕ್ರೋಶವನ್ನೂ ಎದುರಿಸುತ್ತಿರುವ ಬಿಜೆಪಿ ಸರ್ಕಾರ ICU ಸೇರಿರುವುದಕ್ಕೆ ಅಮಿತ್ ಶಾ ಅವರು ಆತಂಕದಲ್ಲಿ ಓಡೋಡಿ ಬರುತ್ತಿದ್ದಾರಂತೆ. ಯಾರ ತಲೆದಂಡವಾಗಬಹುದು ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ, ಗೃಹಮಂತ್ರಿ, ರಾಜ್ಯಾಧ್ಯಕ್ಷ ಈ ಮೂವರಲ್ಲಿ ಯಾರ ಕುರ್ಚಿ ಕುಸಿಯಲಿದೆ? ಎಂದು ಲೇವಡಿ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದ ಧಿಡೀರ್ ಭೇಟಿ ಹಿಂದಿರುವ ಉದ್ದೇಶವೇನು? ಕಾನೂನು ಅವ್ಯವಸ್ಥೆಯನ್ನ ಕಣ್ತುಂಬಿಕೊಳ್ಳುವುದಕ್ಕೋ? ICU ನಲ್ಲಿರುವ ರಾಜ್ಯ ಬಿಜೆಪಿ ಪಕ್ಷದ ಕೊನೆಯ ದರ್ಶನ ಮಾಡುವುದಕ್ಕೋ? ಬಿಜೆಪಿಗೆ ಇನ್ನಷ್ಟು ‘ಶವ ರಾಜಕೀಯ’ದ ಟಾಸ್ಕ್ ಕೊಡುವುದಕ್ಕೋ? ಕದ್ದುಮುಚ್ಚಿ ಆಗಮಿಸುತ್ತಿರುವುದರ ಹಿಂದಿನ ಅಜೆಂಡಾವೇನು? ಎಂದು ಪ್ರಶ್ನಿಸಿದೆ.

Share post:

Subscribe

spot_imgspot_img

Popular

More like this
Related

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.7 ಕೆಜಿ ಹಶೀಶ್ ಸೀಜ್

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.7 ಕೆಜಿ ಹಶೀಶ್ ಸೀಜ್ದೇವನಹಳ್ಳಿ: ಕೆಂಪೇಗೌಡ...

ಹೊಸಕೋಟೆ ಸಮೀಪ ಭೀಕರ ಸರಣಿ ಅಪಘಾತ: 7 ಮಂದಿ ಸ್ಥಳದಲ್ಲೇ ಸಾವು.!

ಹೊಸಕೋಟೆ ಸಮೀಪ ಭೀಕರ ಸರಣಿ ಅಪಘಾತ: 7 ಮಂದಿ ಸ್ಥಳದಲ್ಲೇ ಸಾವು.! ಹೊಸಕೋಟೆ:...

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್ ಬಂಧನ

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್ ಬಂಧನದೇವನಹಳ್ಳಿ: ಬಿಕ್ಲು...

ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್ ಬಂಧನಕ್ಕೆ ಸಿಐಡಿ ತೀವ್ರ ಶೋಧ

ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್ ಬಂಧನಕ್ಕೆ ಸಿಐಡಿ ತೀವ್ರ...