No menu items!
18.6 C
Munich
Thursday, July 16, 2026

ಐಪಿಎಲ್ 2026 ಹಿನ್ನೆಲೆ: ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ

Must read

ಐಪಿಎಲ್ 2026 ಹಿನ್ನೆಲೆ: ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ

ಬೆಂಗಳೂರು: 2026ರ ಐಪಿಎಲ್ ಆವೃತ್ತಿ ಇಂದಿನಿಂದ ಆರಂಭವಾಗುತ್ತಿರುವ ಹಿನ್ನೆಲೆ, ಪಂದ್ಯ ದಿನಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಬಿಎಂಆರ್ಸಿಎಲ್ ಮಹತ್ವದ ನಿರ್ಧಾರ ಕೈಗೊಂಡಿದೆ. ಪಂದ್ಯ ನಡೆಯುವ ದಿನಗಳಲ್ಲಿ ನಮ್ಮ ಮೆಟ್ರೋ ಸೇವೆಯನ್ನು ತಡರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ.
ಇಂದು ಆರ್ಸಿಬಿ ಮತ್ತು ಎಸ್ಆರ್ಎಚ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಪಂದ್ಯ ವೀಕ್ಷಿಸಿ ಹಿಂದಿರುಗುವ ಅಭಿಮಾನಿಗಳಿಗೆ ಅನುಕೂಲವಾಗಲೆಂದು ಈ ಕ್ರಮ ಕೈಗೊಳ್ಳಲಾಗಿದೆ.
ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಕೊನೆಯ ಮೆಟ್ರೋ ಸಂಚರಿಸುತ್ತಿದ್ದರೂ, ಇದೀಗ ಪಂದ್ಯ ದಿನಗಳಲ್ಲಿ ಎಲ್ಲಾ ನಿಲ್ದಾಣಗಳಿಂದ ಕೊನೆಯ ಸೇವೆಯನ್ನು ತಡರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಮೆಜೆಸ್ಟಿಕ್ ನಿಲ್ದಾಣದಿಂದ ನಾಲ್ಕೂ ದಿಕ್ಕುಗಳಿಗೆ ಕೊನೆಯ ರೈಲು ರಾತ್ರಿ 1.30ಕ್ಕೆ ಹೊರಡಲಿದೆ.
ಇದಲ್ಲದೆ, ಐಪಿಎಲ್ ಟಿಕೆಟ್ಗಳ ಮೇಲೆ ಮೆಟ್ರೋ ಕ್ಯೂಆರ್ ಕೋಡ್ ಮುದ್ರಿಸಲಾಗಿದ್ದು, ಕ್ರೀಡಾಂಗಣಕ್ಕೆ ಬರುವವರು ಕಬ್ಬನ್ ಪಾರ್ಕ್ ಅಥವಾ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಳಸುವಂತೆ ಸೂಚಿಸಲಾಗಿದೆ.
ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ 44 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.

- Advertisement -spot_img

More articles

- Advertisement -spot_img

Latest article