ಅಪ್ಪ..ಅಪ್ಪ… ಅವನು ಅಪ್ಪನನ್ನು ಕೂಗ್ತಾ ಬಂದ..! ಅಪ್ಪ ಎಲ್ಲೂ ಕಾಣಿಸ್ತಿಲ್ಲ..! ಅಮ್ಮ… ಅಮ್ಮ….! ಊಹೂ..ಅಮ್ಮನೂ ಇಲ್ಲ..! ಮನೆಯ ಬಾಗಿಲು ತೆಗೆದಿದೆ..! ಅಪ್ಪನೂ ಇಲ್ಲ, ಅಮ್ಮನೂ ಇಲ್ಲ.. ಆ ಕಡೆ ಫ್ರೆಂಡ್ ಫೋನ್ ಮಾಡಿ ಅವನ ತಂಗಿ ಮನೋಜ್ ಜೊತೆ ಓಡಿ ಹೋಗಿ ಮದ್ವೆ ಆಗಿದ್ದಾಳೆ ಅಂತ ಸುದ್ದಿ ಕೊಟ್ಟಿದ್ದಾನೆ..! ಅದೇ ವಿಷ್ಯ, ಅಪ್ಪ ಅಮ್ಮಂಗೆ ಹೇಳೋಣ ಅಂದ್ರೆ ಮನೆಯಲ್ಲೂ ಅವರ ಸುಳಿವೂ ಇಲ್ಲ..! ಅಪ್ಪನ ಫೋನಿಗೆ ಫೋನ್ ಮಾಡಿದ್ರೆ, ಫೋನ್ ಮನೆಯಲ್ಲೇ ರಿಂಗ್ ಆಗ್ತಿದೆ..! ಎಲ್ಲಾ ಎಲ್ಲಿ ಹೋಗ್ಬಿಟ್ರು..? ನಾನೀಗ ಏನು ಮಾಡ್ಲಿ ಅಂತ ಕಂಗಾಲಾಗಿದ್ದಾನೆ ಅರುಣ್…!
ಅದು 4 ಜನರ ಸುಖಿ ಕುಟುಂಬ, ಅಪ್ಪ-ಅಮ್ಮ, ಮಗ-ಮಗಳು..! ಮಗ ಅರುಣ್ ಜಾಣ, ಬುದ್ದಿವಂತ..! ಮಗಳು ಅಮೂಲ್ಯ ಈಗಿನ್ನೂ ಡಿಗ್ರಿ ಮೊದಲನೇ ವರ್ಷದಲ್ಲಿ ಓದ್ತಿದಾಳೆ..! ಇವರ ಕುಟುಂಬ ನೋಡಿದ್ರೆ ಎಂತವರಿಗೂ ಹೊಟ್ಟೆಕಿಚ್ಚಾಗಬೇಕು. ಅಷ್ಟು ಸಂತೋಷವಾಗಿ, ನಗುನಗ್ತಾ ಇದ್ರು..! ಅಪ್ಪನ ಎಂಟತ್ತು ಎಕರೆ ಅಡಿಕೆ ತೋಟವೇ ಜೀವನದ ಆಧಾರ..! ಡಿಗ್ರಿ ಕೊನೆಯ ವರ್ಷದಲ್ಲಿದ್ದ ಅರುಣ್, ಕಾಲೇಜಿಗೆ ಹೋಗೋ ಮುಂಚೆ ಹೋಗಿ ಬಂದ ಮೇಲೆ ತೋಟದ ಕೆಲಸ ನೋಡ್ಕೋತಿದ್ದ.. ಅಮೂಲ್ಯ, ಅಪ್ಪಟ ಅಪ್ಪನ ಮಗಳಾದ್ರೂ ಅಮ್ಮನ ಜೊತೆಗೆ ಎಲ್ಲಾ ಕೆಲಸಕ್ಕೂ ಸಹಾಯ ಮಾಡೋಳು..! ಹೀಗೇ ನಡೀತಿತ್ತು..! ಆದ್ರೆ ಅವನ ಊರಿಗೆ ವಿಲೇಜ್ ಅಕೌಂಟೆಂಟ್ ಒಬ್ಬರು ಹೊಸದಾಗಿ ಬಂದ್ರು, ಅವರ ಮಗನೇ ಮನೋಜ್..! ಸುಂದರ, ಅದೇ ಊರಿನ ಡಿಗ್ರಿ ಕಾಲೇಜಿನಲ್ಲಿ ಫೈನಲ್ ಇಯರ್ ಡಿಗ್ರಿಗೆ ಸೇರ್ಕೊಂಡ..! ಅವನು ಅರುಣ್ ಸಹಪಾಠಿಗಳು. ಅರುಣ್-ಹಾಗೂ ಮನೋಜ್ ತುಂಬಾ ಆತ್ಮೀಯರಾದ್ರು..! ಒಂದಿನ ಅರುಣ್, ಮನೋಜ್ ನನ್ನು ಮನೆಗೆ ಕರ್ಕೊಂಡ್ ಬಂದ. ಅವತ್ತು ಅಮೂಲ್ಯನ್ನ ನೋಡಿ ಮನೋಜ್ ನಿರ್ಧಾರ ಮಾಡ್ದ. ನಾನು ಮದ್ವೆ ಆದ್ರೆ ಇವಳನ್ನೇ ಆಗ್ಬೇಕು..! ಅವಳಿಗೂ ಮನೋಜ್ ಅದ್ಯಾಕೋ ಇಷ್ಟವಾದ..! ಕದ್ದುಮುಚ್ಚಿ ಅಲ್ಲಲ್ಲಿ ಭೇಟಿ ಮಾಡಿದ್ರು..! ಅಪ್ಪನ ಫೋನಿಂದ ಆಗಾಗ ಅವನಿಗೆ ಮೆಸೇಜ್ ಕಳಿಸಿದ್ಲು.. ಹೀಗೇ ಮುಂದುವರೀತು..! ಹೌದು ಅವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ರು..! ವಿಷಯ ಅರುಣ್ ಕಿವಿಗೆ ಬಿತ್ತು. ಆದ್ರೆ ಆ ವಿಚಾರವನ್ನು ತಂಗಿಗೂ ಕೇಳಲಿಲ್ಲ, ಗೆಳೆಯನಿಗೂ ಕೇಳಲಿಲ್ಲ..! ಸಮಯ ಬಂದಾಗ ಅವರೇ ಹೇಳ್ತಾರೆ ಅಂತ ಸುಮ್ಮನಿದ್ದ..! ಆದ್ರೆ ಅವರಿಬ್ಬರಿಗೂ ಈ ವಿಷಯ ಅರುಣ್ ಜೊತೆ ಹೇಗೆ ಚರ್ಚೆ ಮಾಡೋದು ಅನ್ನೋದೇ ದೊಡ್ಡ ಸಮಸ್ಯೆಯಾಗಿತ್ತು..! ಅವರು ಹೇಳಲೇ ಇಲ್ಲ..! ಒಂದಿನ ಮಾತಾಡ್ತಾ ಮಾತಾಡ್ತಾ ಅಮೂಲ್ಯ ಅಮ್ಮನ ಹತ್ತಿರ ಈ ವಿಷಯ ಹೇಳಿದ್ದೇ ತಡ, ಮುಖಮೂತಿ ನೋಡದೇ ಚಚ್ಚಿಬಿಟ್ರು ಅವಳ ಅಮ್ಮ..! ನಿಮ್ಮಣ್ಣಂಗೆ ಗೊತ್ತಾದ್ರೆ ನಿನ್ ತಲೆ ಕಡೀತಾನೆ ಅಂತ ಹೆದರಿಸಿಬಿಟ್ರು..! ಅಷ್ಟೇ ಅವಳು ನಿರ್ಧಾರ ಮಾಡಿಬಿಟ್ಲು..! ಇನ್ಯಾವತ್ತೂ ನಮ್ಮಿಬ್ಬರ ಪ್ರೀತಿಗೆ ನಮ್ಮ ಮನೆಯಲ್ಲಿ ಒಪ್ಪಿಗೆ ಸಿಗಲ್ಲ ಅಂತ..! ಮರುದಿನ ಕಾಲೇಜಲ್ಲಿ ಮತ್ತೆ ಮನೋಜ್ ಭೇಟಿ ಮಾಡಿ ನಡೆದಿದ್ದನ್ನ ಹೇಳಿದ್ಲು..! ನಮ್ಮ ಮನೆಯಲ್ಲೂ ಪರಿಸ್ಥಿತಿ ಹೀಗೇ ಇದೆ ಅಂದ ಮನೋಜ್..ಇಬ್ಬರೂ ಡಿಸೈಡ್ ಮಾಡಿಬಿಟ್ರು..! ನಾವಿಬ್ರೂ ಓಡಿ ಹೋಗಿ ಮದ್ವೆ ಆಗೋಣ..! ಈ ಹಳ್ಳಿ, ಈ ಜನ ನಮಗೆ ಬೇಡವೇ ಬೇಡ..! ಎಲ್ಲಾದ್ರೂ ದೂರ ಹೋಗಿಬಿಡೋಣ..! ನಿರ್ಧಾರ ಅಚಲವಾಗಿತ್ತು..! ಅವರು ಅಂದುಕೊಂಡಂತೆ ಮಾಡಿಯೇ ಬಿಟ್ರು..! ಅರುಣನಿಗೆ ಅವನ ಇನ್ನೊಬ್ಬ ಸ್ನೆಹಿತ ಫೋನ್ ಮಾಡಿ ಈ ವಿಷಯ ಹೇಳ್ದ..! ಏನು ಮಾಡಬೇಕು ಅಂತ ಗೊತ್ತಾಗಲೇ ಇಲ್ಲ..! ಅಷ್ಟರಲ್ಲಿ ಊರಲ್ಲೆಲ್ಲಾ ಇದೇ ವಿಷಯ ಗುಲ್ಲೆದ್ದಿತ್ತು..! ಅವನು ಮನೆಗೆ ಬಂದ್ರೆ ಅಪ್ಪ ಇಲ್ಲ, ಅಮ್ಮ ಇಲ್ಲ..! ಮನೆಯ ಬಾಗಿಲು ತೆಗೆದೇ ಇದೆ..! ಅಪ್ಪ, ಅಮ್ಮ ಅಂತ ಕೂಗ್ತಾ ಅವರ ಮನೆಯಲ್ಲಿ ಹುಡುಕ್ತಾ ಇದ್ದ..! ತೋಟದ ಮನೆಯಲ್ಲಿರಬಹುದು ಅಂತ ಓಡಿಹೋಗಿ ತೋಟದ ಮನೆಯಲ್ಲಿ ನೋಡಿದ್ರೆ ಅವರಿಬ್ಬರೂ ಅಲ್ಲಿ ಹೆಣವಾಗಿ ಬಿದ್ದಿದ್ದಾರೆ..! ಮಗಳಿಂದ ಮರ್ಯಾದೆ ಹೋಯ್ತು, ಇನ್ನು ಬದುಕು ಬೇಡ ಅಂತ ಸಾವಿಗೆ ಶರಣಾಗಿದ್ರು..! ಇವನು ಕುಸಿದು ಬಿದ್ದ..! ನಗುನಗುತಿದ್ದ ನಂದನವನದಂತಹ ಮನೆ ಸ್ಮಶಾಣವಾಗಿತ್ತು..! ಒಂದು ಪ್ರೀತಿ ಇಷ್ಟೆಲ್ಲಾ ಮಾಡಿಸಿಬಿಡ್ತು..!
ಇದೊಂದು ಕಥೆ..! ಆದ್ರೆ ಇಲ್ಲಿ ತಪ್ಪು ಯಾರದ್ದು..? ಪ್ರೀತಿ ಮಾಡಿದವರದ್ದಾ..? ಪ್ರೀತಿ ನಿರಾಕರಿಸಿದವರದ್ದಾ..? ವಿಷಯ ಗೊತ್ತಿದ್ದೂ ಸುಮ್ಮನಿದ್ದ ಅಣ್ಣನದ್ದಾ..? ಅಮ್ಮ ಹೇಳಿದ ಮಾತಿಗೇ ಓಡಿಹೋಗೋ ನಿರ್ಧಾರ ಮಾಡಿದ ಅಮೂಲ್ಯಳದ್ದಾ..? ಅಮೂಲ್ಯ ಹೇಳಿದ್ದನ್ನೇ ಕೇಳಿಕೊಂಡು ಅವಳ ಜೊತೆಗೆ ಓಡಿಹೋದ ಮನೋಜನದ್ದಾ..? ಮಗಳು ಓಡಿಹೋದ್ಲು ಅಂತ ಆತ್ಮಹತ್ಯೆ ಮಾಡಿಕೊಂಡ ಅಪ್ಪಅಮ್ಮನದ್ದಾ..?
ತಪ್ಪು ಎಲ್ಲರದ್ದೂ ಇದೆ..! ಪ್ರೀತಿಸ್ತೀನಿ ಅಂತ ಅಣ್ಣನ ಬಳಿ ಹೇಳಿಕೊಂಡಿದ್ರೆ, ಅಣ್ಣ ಒಪ್ಪಿ, ಅಪ್ಪಅಮ್ಮನಿಗೆ ಒಪ್ಪಿಸ್ತಿದ್ದ ಅನ್ಸುತ್ತೆ..! ಆತುರದ ನಿರ್ಧಾರ ಮಾಡಿಬಿಟ್ಲು ಅಮೂಲ್ಯ..! ಅಮೂಲ್ಯ ಹೇಳಿದ ಮೇಲಾದ್ರೂ ಆಪ್ತಮಿತ್ರನ ಜೊತೆ ಮನೋಜ್ ಈ ವಿಷಯ ಮಾತಾಡಬಹುದಿತ್ತು..! ಅವನೂ ತಪ್ಪು ಮಾಡಿದ.! ವಿಷಯ ಗೊತ್ತಾದ ಕೂಡಲೇ ಇಬ್ಬರನ್ನೂ ಕೂರಿಸಿ ಅರುಣ್ ಮಾತಾಡಬಹುದಿತ್ತು, ಅವನೂ ತಡಮಾಡಿಬಿಟ್ಟ..! ಅವರು ಓಡಿ ಹೋದ್ರು ಅಂತ ಮರ್ಯಾದೆಗೆ ಅಂಜಿ ಆತ್ಮಹತ್ಯೆ ನಿರ್ಧಾರ ಮಾಡಿ ಅವರ ಅಪ್ಪಅಮ್ಮನೂ ತಪ್ಪು ಮಾಡಿಬಿಟ್ರು..! ಆಗಿದ್ದಾಯ್ತು ಅಂತ ಕರೆಸಿ ಅವರೇ ಬದುಕು ಕಟ್ಟಿಕೊಟ್ಟಿದ್ರೆ, ಮನೆ ಮತ್ತೆ ಎಂದಿನಂತೆಯೇ ಇರ್ತಿತ್ತೋ ಏನೋ..! ಪ್ರೀತ್ಸೋದು ತಪ್ಪಲ್ಲ..! ಪ್ರೀತಿಯಲ್ಲಿ ಬಿದ್ದು ತೆಗೆದುಕೊಳ್ಳೋ ಕೆಲವು ನಿರ್ಧಾರಗಳು ತಪ್ಪು..! ಪ್ರೀತಿ ವಿರೋಧಿಸೋದು ತಪ್ಪಲ್ಲ, ಆದ್ರೆ ಆ ಪ್ರೀತಿಗೆ ನಿಜವಾದ ಪ್ರೀತಿಯ ಯೋಗ್ಯತೆ ಇದ್ದರೆ ಅದನ್ನು ವಿರೋಧಿಸೋದು ತಪ್ಪು..! ನಿಮ್ಮ ಜೀವನದಲ್ಲೂ ಇಂತಹ ಸಂಧರ್ಭಗಳು ಬಂದಿರಬಹುದು, ಬರಬಹುದು..! ಜಾಣತನದಿಂದ ಎದುರಿಸಿ..! ಪ್ರೀತಿಯಲ್ಲಿ ಗೆಲ್ಲಬೇಕು ನಿಜ, ಆದ್ರೆ ನಿಮ್ಮ ಗೆಲುವು ಇನ್ನೊಬ್ಬರನ್ನು ಸೋಲಿಸಬಾರದು ಅಷ್ಟೆ..!
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!
ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!
ತರ್ಲೆ ನನ್ಮಕ್ಳು ಬತ್ತಾವ್ರೆ…! ಎದ್ದೂಬಿದ್ದೂ ನಗೋಕೆ ರೆಡಿ ಆಗ್ರಪ್ಪ..!
ದಾನ ಮಾಡುವುದರಲ್ಲಿ ಅಜೀಂ ಪ್ರೇಮ್ ಜಿ ನಂ 1..! ಎರಡನೇ ಸ್ಥಾನದಲ್ಲಿದ್ದಾರೆ ಕರ್ನಾಟಕದ ಉದ್ಯಮಿ..!
ಆ ಫೇಸ್ ಬುಕ್ ಪುಟ ಅಷ್ಟೊಂದು ವೈರಲ್ ಆಗಿದ್ದೇಕೆ ಗೊತ್ತಾ..!