ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ದಿ ವಿಲನ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಈ ಚಿತ್ರದ ನಾಯಕಿ ಆಮಿ ಜಾಕ್ಸನ್ ಮಾತ್ರ ಚಿತ್ರಕ್ಕಿಂತ ಹೆಚ್ಚಾಗಿ ವಿವಾದಿತ ಟ್ವೀಟ್ ನಿಂದ ಸುದ್ದಿಯಲ್ಲಿದ್ದಾರೆ.
ದಿ ವಿಲನ್ ಚಿತ್ರದ ಬಗ್ಗೆ ಟ್ವೀಟ್ ಮಾಡಿ ಆಮಿ ಸಂತೋಷ ಹಂಚಿಕೊಂಡಿದ್ದು ಗೊತ್ತೇ ಇದೆ. ಇದರಲ್ಲಿ ಮಾಡಿದ ಯಡವಟ್ಟು ಕೂಡ ವೈರಲ್ ಆಗಿದೆ..
ಟ್ವೀಟ್ ನಲ್ಲಿ ನಿರ್ದೇಶಕ ಪ್ರೇಮ್ ಗೆ ಧನ್ಯವಾದ ಹೇಳಿದ್ದರು. ಜತೆಗೆ ಸ್ಯಾಂಡಲ್ ವುಡ್ ಎನ್ನುವ ಬದಲು ಕಾಲಿವುಡ್ ಎಂದು ಬರೆದಿದ್ದರು ಇದು ನಿಮ್ಗೆ ಗೊತ್ತೇ ಇದೆ.
ಆದರೆ , ಹೆಚ್ಚು ಕಮ್ಮಿ ವರ್ಷಾನುಗಟ್ಟಲೆ ಶೂಟಿಂಗ್ ನಲ್ಲಿ ಪಾಲ್ಗೊಂಡು ಕನ್ನಡ ಚಿತ್ರರಂಗಕ್ಕೆ ಸ್ಯಾಂಡಲ್ ವುಡ್ ಅಂತಾರೆ ಎಂಬುದನ್ನೂ ತಿಳಿಯದೇ ಆಮಿ ಟ್ವೀಟ್ ಮಾಡಿದ್ದು ತಪ್ಪೇ. ವಿಲನ್ ಆಮಿಯ ಮೊದಲ ಸ್ಯಾಂಡಲ್ ವುಡ್ ಚಿತ್ರ. ಇವರಿಗೆ ಸ್ಯಾಂಡಲ್ ವುಡ್ ಗೊತ್ತಿಲ್ಲ ಅಂದ್ರೆ?