ನೀವು ನಿನ್ನೆ ರಾಕಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯವನ್ನು ನೋಡಿದ್ರ? ನೀವು ಪಂದ್ಯ ಪಂಜಾಬ್ ಬೌಲಿಂಗ್ ಮಾಡುವಾಗ ಗಮನಿಸಿರಬಹುದು? ಆ್ಯಂಡ್ರ್ಯೂ ಟೈ 34 ರನ್ ನೀಡಿ 4 ವಿಕೆಟ್ ಪಡೆದರು. ಪ್ರತಿ ವಿಕೆಟ್ ಪಡೆದಾಗ ಗ್ರಾಂಡ್ ಮಾ ಎಂದು ಬರೆದಿದ್ದ, ಕೈ ಗೆ ಕಟ್ಟಿಕೊಂಡಿದ್ದ ಕಪ್ಪುಪಟ್ಟಿಗೆ ಮುತ್ತಿಕ್ಕಿದರು. ಆದರೆ ಆ ಪಟ್ಟಿಗೇಕೆ ಮುತ್ತಿಕ್ಕುತ್ತಿದ್ದಾರೆ ಎಂದು ಅರ್ಥವಾಗಿರಲಿಲ್ಲ.

ಪಂದ್ಯದ ಬಳಿಕ ಅವರು ಪರ್ಪಲ್ ಕ್ಯಾಪ್ ಸ್ವೀಕರಿಸುವ ವೇಳೆ ಭಾವುಕರಾಗಿ ಪಟ್ಟಿಯ ಬಗ್ಗೆ ಹೇಳಿದರು. ‘ನನಗೆ ಇದೊಂದು ಕಠಿಣ ದಿನವಾಗಿತ್ತು. ನನ್ನ ಅಜ್ಜಿ ನಮ್ಮನ್ನು ಅಗಲಿದ್ದಾರೆ. ನನ್ನ ಈ ಪ್ರದರ್ಶನವನ್ನು ಅಜ್ಜಿಗೆ ಸಮರ್ಪಿಸುತ್ತೇನೆ. ಇದು ನನ್ನ ಪಾಲಿಗೆ ಭಾವೋದ್ವೇಗದ ಪಂದ್ಯ. ಎಷ್ಟೇ ಕಷ್ಟ ಎದುರಾದರೂ ನನಗೆ ಯಾವತ್ತೂ ಕ್ರಿಕೆಟ್ ಮೇಲಿನ ಅಭಿಮಾನ ಕಡಿಮೆ ಆಗುವುದಿಲ್ಲ’ ಎಂದರು.

ಅಜ್ಜಿ ವಿಧಿವಶರಾದ ಕಾರಣದಿಂದ ಟೈ ಕೈಗೆ ಪಟ್ಟಿ ಕಟ್ಟಿಕೊಂಡು ಆಡಿದರು. ಟೈ ಬೌಲಿಂಗ್ ನಲ್ಲಿಯೂ, ಕನ್ನಡಿಗ ರಾಹುಲ್ ಬ್ಯಾಟಿಂಗ್ ನಲ್ಲಿ ಮಿಂಚಿದರೂ ಪಂಜಾಬ್ ಗೆ ವಿಜಯಲಕ್ಷ್ಮಿ ಒಲಿಯಲಿಲ್ಲ.







