ಕಾಶ್ಮೀರದಿಂದ ಬಂದ ಸೇಬಿನಲ್ಲಿ ಭಾರತ ವಿರೋಧಿ ಸಂದೇಶಗಳಿರುವದು ಪತ್ತೆಯಾಗಿದೆ. ಸಿರ್ಸಾದಲ್ಲಿ ಈ ಘಟನೆ ಸಂಭವಿಸಿದ್ದು ಸೇಬಿನ ಬಾಕ್ಸ್ ತೆಗೆದು ನೋಡಿದಾಗ ಸೇಬಿನ ಮೇಲೆ ಭಾರತ ವಿರೋಧಿ ಬರಹಗಳಿರುವುದು ಪತ್ತೆಯಾಗಿದೆ. ಈ ಹಿಂದೆ ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಬಲೂನ್‍ಗಳ ಮೂಲಕ ಪಾಕ್ ನಿಂದ ಭಾರತ ವಿರೋಧಿ ಸಂದೇಶಗಳು ಬಂದಿದ್ದವು. ಅದೇ ರೀತಿಯಾಗಿ ಈಗ ಸೇಬಿನ ಮೂಲಕ ಸಂದೇಶಗಳು ಬಂದಿದೆ. ಸೇಬಿನ ಮೇಲೆ ಭಾರತದ ನಾಯಿಗಳು ಕಾಶ್ಮೀರದಿಂದ ತೊಲಗಿ ನಾವು ಸ್ವತಂತ್ರ್ಯವನ್ನು ಬಯಸುತ್ತಿದ್ದೇವೆ ಎಂದು ಕಪ್ಪು ಇಂಕ್‍ನಲ್ಲಿ ಸೇಬಿನ ಮೇಲೆ ಇಂಗ್ಲೀಷ್ ಬರಹದಲ್ಲಿ ಬರೆಯಲಾಗಿದೆ. ಈ ಬಾಕ್ಸ್ ಯಾವ ಮೂಲಗಳಿಂದ ಬಂದಿದೆ ಎಂಬುದು ಇನ್ನು ಪತ್ತೆಹಚ್ಚಿಲ್ಲವಾದರೂ ಈ ಕುರಿತು ತ್ವರಿತ ತನಿಖೆ ಆರಂಭಗೊಂಡಿದೆ. ರಾಜಿಂದರ್ ಸಿಂಗ್ ಎಂಬುವವರು ನಾನಾ ಭಾಗಗಳಿಂದ ಸೇಬನ್ನು ತರುವ ರಾಜು ಎಂಬುವವರ ಬಳಿಯಿಂದ ಈ ಸೇಬಿನ ಬಾಕ್ಸ್ ಕೊಂಡುಕೊಂಡಿದ್ದರು ಎಂದು ತಿಳಿದು ಬಂದಿದೆ. ಇದು ನೇರವಾಗಿ ಕಾಶ್ಮೀರದಿಂದಲೇ ಬಂದದ್ದು ಎಂದು ಪ್ರಾಥಮಿಕ ತನಿಖೆಯಿಂದ ಧೃಡ ಪಟ್ಟಿದೆ.
POPULAR STORIES :
ಹುಡುಗಿಯೊಬ್ಳು ಐಫೋನ್ ತಗೊಳೋಕೆ ನಿಮ್ಮತ್ರ ದುಡ್ ಕೇಳುದ್ರೆ..?
Oxford ಇಂಗ್ಲೀಷ್ ಡಿಕ್ಷನರಿಯಲ್ಲಿ ದಕ್ಷಿಣ ಭಾರತದ ಎರಡು ಸಾಮಾನ್ಯ ಪದಗಳ ಸೇರ್ಪಡೆ..!
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ಏಳು ಸಾವಿರ ವರ್ಷಗಳ ಹಿಂದಯೇ ಏಲಿಯನ್ಸ್ ವಿಮಾನ ನಿಲ್ದಾಣ ನಿರ್ಮಿಸಿಕೊಂಡಿದ್ವು : ಇರಾಕ್ ಸಚಿವ..!