ದೆಹಲಿಯ ಫೋಟೋ ಗ್ರಾಫರ್ ಅಂಕಿತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ಯಶ್ ಪಾಲ್ ಅವರು ಮೌನ ಮುರಿದ್ದಿದ್ದು, ನನ್ನ ಮಗನ ಕೊಲೆಯನ್ನು ಧರ್ಮದೊಂದಿಗೆ ಲಿಂಕ್ ಮಾಡ್ಬೇಡಿ ಎಂದು ಕೇಳಿಕೊಂಡಿದ್ದಾರೆ.
ಅಂಕಿತ್ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವತಿಯ ಕಡೆಯವರು ನಡು ರಸ್ತೆಯಲ್ಲಿ ಅಂಕಿತ್ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾತಾಡಿರುವ ಅಂಕಿತ್ ತಂದೆ ಯಶ್ ಪಾಲ್ ಸಕ್ಸೇನಾ, ಘಟನೆಯಿಂದ ತನಗೆ ಬೇಸರವಾಗಿದೆ. ಮುಸ್ಲೀಂ ವಿರುದ್ಥ ಹಗೆ ಬೇಡ. ಕೋಮು ದ್ವೇಷ ಹರಡಲು ನನ್ನ ಮಗನ ಸಾವನ್ನು ಬಳಸಿಕೊಳ್ಳ ಬೇಡಿ ಎಂದು ಮನವಿ ಮಾಡಿದ್ದಾರೆ.