ಕೇರಳ ಜಲಪ್ರಳಯದಿಂದ ನಲುಗಿದೆ. ಕೇರಳದ ನೆರವಿಗೆ ದೇಶದ ಬೇರೆ ಬೇರೆ ರಾಜ್ಯಗಳ ಜನ ಸಹ ನಿಂತಿದ್ದಾರೆ.
ಅದೇರೀತಿ ತಮಿಳುನಾಡಿನ ವಿಲುಪ್ಪುರಂ ಬಾಲಕಿ ಅನುಪ್ರಿಯ ಸಹ ಸ್ಪಂದಿಸಿದ್ದಾಳೆ. ಈಕೆ ತಾನು ಹೊಸ ಸೈಕಲ್ ಕೊಳ್ಳಬೇಕೆಂದು 4ವರ್ಷದಿಂದ ಕೂಡಿಟ್ಟಿದ್ದ 9000ರೂಗಳನ್ನು ಕೇರಳ ನೆರೆ ಪರಿಹಾರಕ್ಕೆ ನೀಡಿದ್ದಾಳೆ.
Kid, Anupriya from Vizhuppuram, TN, donates Rs. 9,000, her 4 years Piggy Bank savings, that she saved to buy a bicycle, towards #KeralaFloodRelief. @narendramodi @HMOIndia @CMOTamilNadu pic.twitter.com/rvmid4nihz
— Ethirajan Srinivasan (@Ethirajans) August 19, 2018
ಈ ಬಗ್ಗೆ ಇತಿರಾಜನ್ ಶ್ರೀನಿವಾಸನ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಬಾಲಕಿಯ ಬಗ್ಗೆ ಹೀರೋ ಸೈಕಲ್ ಕಂಪನಿಯವರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವಳಿಗೆ ಹೊಸ ಸೈಕಲ್ ಅನ್ನು ಉಡುಗೊರೆ ರೂಪದಲ್ಲಿ ನೀಡುವ ಮೂಲಕ ಅವಳ ಕೆಲಸವನ್ನು ಪ್ರಶಂಸಿಸಿದ್ದಾರೆ.