ಈ ನಟಿಯ ಮೊದಲ ಕ್ರಷ್ ರಾಹುಲ್ ದ್ರಾವಿಡ್…!

Date:

ರಾಹುಲ್ ದ್ರಾವಿಡ್ ಅವರನ್ನು ಇಷ್ಟಪಡದೇ ಇರೋರು ಯಾರೂ ಇಲ್ಲ..! ಕ್ರಿಕೆಟ್ ಅಂಗಣ ಮತ್ತು ಅದರಿಂದ ಆಚೆಗೂ ರಾಹುಲ್ ದ್ರಾವಿಡ್ ಒಬ್ಬ ಸಭ್ಯ ವ್ಯಕ್ತಿ. ತಾಳ್ಮೆಗೆ ಇನ್ನೊಂದು ಹೆಸರೇ ದಿ ವಾಲ್. ಅದೆಂಥಾ ಎಸತವೇ ಇರಲಿ ಅದಕ್ಕೆ ದ್ರಾವಿಡ್ ಅವರಲ್ಲಿ ಉತ್ತರವಿತ್ತು…! ಇವರು ಎದುರಿಸಿದ ಪ್ರತಿ ಎಸೆತವೂ ಕ್ರಿಕೆಟ್ ಪುಸ್ತಕದ ಒಂದೊಂದು ಅಧ್ಯಾಯ. ದ್ರಾವಿಡ್ ಕ್ರಿಕೆಟ್ ಲೋಕಕ್ಕೆ ಹೊಸತನವನ್ನು ಪರಿಚಯಿಸಿದ ಮಹಾನ್ ಆಟಗಾರ.


ಅದೆಷ್ಟೋ ಪಂದ್ಯಗಳಲ್ಲಿ ಕ್ರಿಕೆಟ್ ದೇವರು ತನ್ನ ನೈಜ ಆಟವನ್ನು ಆಡದೆ ಫೆವಿಲಿಯನ್ ಸೇರಿಕೊಂಡಾಗಲೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ನಿರಾಶರಾಗ್ತಾ ಇರ್ಲಿಲ್ಲ..! ಏಕೆಂದರೆ ದ್ರಾವಿಡ್ ಇದ್ದಾರೆ ತಂಡವನ್ನು ಮೇಲೆತ್ತುತ್ತಾರೆ ಎಂಬ ನಂಬಿಕೆ ಇರ್ತಿತ್ತು..! ದ್ರಾವಿಡ್ ಲೆಕ್ಕವಿಲ್ಲದಷ್ಟು ಸಲ ತಂಡವನ್ನು ಆಪತ್ತಿನಿಂದ ಪಾರು ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ಬೇಕೆಂದಿದ್ದನ್ನೆಲ್ಲಾ ಕೊಟ್ಟಿದ್ದಾರೆ. ಭಾರತೀಯ ಕ್ರಿಕೆಟ್‍ಗಾಗಿ ತ್ಯಾಗವನ್ನೂ ಮಾಡಿದ್ದಾರೆ.


ಇವತ್ತು ದ್ರಾವಿಡ್ ಮಾರ್ಗದರ್ಶನದಲ್ಲಿ ಯುವಕ್ರಿಕೆಟಿಗರು ಬೆಳೆಯುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ಅತ್ಯುತ್ತಮ ಆಟಗಾರರನ್ನು ಸಿದ್ಧಪಡಿಸಿ ಕೊಡುವಲ್ಲಿ ದ್ರಾವಿಡ್ ಶ್ರಮಿಸ್ತಿದ್ದಾರೆ.
ಅದೇನೇ ಇರಲಿ ಈ  ಹೆಸರಾಂತ ನಟಿಯ ಮೊದಲ ಕ್ರಷ್ ಈ ನಮ್ಮ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಅಂತೆ..!


ಹೌದು ನಮ್ಮ ಕರಾವಳಿ ಮೂಲದ ಬೆಡಗಿ ಅನುಷ್ಕಾ ಶೆಟ್ಟಿಯ ಮೊದಲ ಕ್ರಷ್ ರಾಹುಲ್ ದ್ರಾವಿಡ್ ಅಂತೆ…! ಹೀಗಂತ ಸ್ವತಃ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...