ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ

Date:

ಆಧುನಿಕ ಜಗತ್ತಿನ ಒಬ್ಬ ಗ್ರೇಟ್ ಯಶಸ್ವೀ ಉದ್ಯಮಿಯಲ್ಲೊಬ್ಬ ಈ ಸ್ಟೀವ್ ಜಾಬ್.ಈತನ ಹೆಸರು ನಮಗೆ I Phone ಹಾಗೂ APPLEಜೊತೆ ಯಲ್ಲಿ ಕೇಳಿ ಬರು‍ತ್ತದೆ.ಸ್ಟೀವ್ ಜಾಬ್,ತನ್ನ 56 ನೇ ವಯಸ್ಸಿನಲ್ಲಿ,ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದ, ಈತ ತನ್ನ ಸಾವಿಗೂ ಮುನ್ನ ತನ್ನ ಮನದಾಳದ ಕೆಲವೊಂದು ವಿಷ್ಯಗಳನ್ನು ಒಂದು ಪತ್ರದ ಮೂಲಕ ತೆರೆದಿಟ್ಟಿದ್ದ,ಆತ ಹೇಳುವುದನ್ನು ಕೇಳಿದ ಮೇಲೆ ನೀವು ‍ಒಂದು ಕ್ಷಣ ಈತನೇ ಈ ಮಾತುಗಳನ್ನೆಲ್ಲಾ ಹೇಳಿದನೇ ಎಂದೂ ಆಶ್ಚರ್ಯ ಪಡದಿರಲಾರಿರಿ.
ಸ್ಟೀವ್ ಜಾಬ್ ಕೊನೆಯ ಪತ್ರ
ನಾನು ವ್ಯಾವಹಾರಿಕ ಜಗತ್ತಿನ ಯಶಸ್ಸೆಂಬ ಶಿಖರದ ಉತ್ತುಂಗಕ್ಕೆ ಏರಿದ್ದೇನೆ.ಬೇರೆ ಅರ್ಥದಲ್ಲಿ ಹೇಳುವುದಾದರೆ ನನ್ನ ಜೀವನ ಯಶಸ್ಸಿನ ಖಜಾನೆಯಾಗಿತ್ತು.ಸಾವಿನ ಹಾಸಿಗೆಯಲ್ಲಿ ಮಲಗಿ ಕೊನೆಕ್ಷಣಗಳನ್ನು ಎಣಿಸುತ್ತಿರೋ ನನಗೆ ಜೀವನದ ಯತಾರ್ಥತೆಯ ಅರಿವಾಗಿದೆ,ನಾನು ಗಳಿಸಿದ ಯಶಸ್ಸು,ಸಂಪತ್ತು ಎಲ್ಲದಕ್ಕೂ ಯಾವುದೇ ಅರ್ಥವಿಲ್ಲ ಎಂದೆನ್ನಿಸುತ್ತದೆ.
ಈ ಕತ್ತಲೆಯಲ್ಲಿ,ನಾನು ನನ್ನ ಜೀವನದ ಹಸಿರು ಬೆಳಕನ್ನು ನೋಡಿದಾಗ ನನಗೆ ಕೇಳಿಸುವುದು ಕೇವಲ ಯಂತ್ರಗಳ ಶಬ್ದಗಳು ಮಾತ್ರ.ನನಗೆ ಮೃತ್ಯು ದೇವತೆಯ ಹತ್ತಿರ ವಿದ್ದಂತೆಯೇ ಭಾಸವಾಗುತ್ತದೆ.ಈಗ ನನಗೆ ಮನಸ್ಸಿನಲ್ಲಿ ಒಂದು ವಿಚಾರ ಬರಲು ಶುರುವಾಗಿದೆ,ಅದು ಈ ಎಲ್ಲಾ ಆಸ್ತಿ ಹಣ ಸಂಪತ್ತಿಗಿಂತಲೂ ತೀರಾ ಭಿನ್ನವಾದುದು, ಮನುಷ್ಯನಿಗೆ ಜೀವನಕ್ಕೆ ತಕ್ಕ ಹಣ ಹೊಂದಿಸಿದ ಮೇಲೆ ತನ್ನ ಸ್ವಂತಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು,ತನ್ನ ಸ್ವಂತ ಸಂತೋಷಕ್ಕಾಗಿ ಬದುಕಲು ಆರಂಭಿಸಬೇಕು,ತನ್ನ ಬಹು ದಿನಗಳ ಆಸೆಯನ್ನು ಪೂರೈಸಬೇಕು.ಸಂಪತ್ತಿನ ಭ್ರಾಂತಿಯನ್ನು ಬಿಟ್ಟು,ಇನ್ನೊಬ್ಬರ ಅಂತರಾಳದಲ್ಲಿರೋ ಪ್ರೀತಿ,ವಿಶ್ವಾಸಕ್ಕೆ ಬೆಲೆಕೊಡಬೇಕು.
ನಾನು ಗಳಿಸಿದ ಸಂಪತ್ತನ್ನು ನಾನು ನನ್ನ ಜೊತೆ ಕೊಂಡೊಯ್ಯಲಾಗುವುದಿಲ್ಲ,ಪ್ರೀತಿಯನ್ನೊಳಗೊಂಡ ಸವಿ ನೆನಪನ್ನಷ್ಟೇ ನಾನು ಕೊಂಡೊಯ್ಯುವೆನು .ಪ್ರೀತಿ ಸಾವಿರಾರು ಮೈಲಿ ಸಂಚಾರ ಮಾಡುತ್ತದೆ,ಅದಕ್ಕೆ ಲಿಮಿಟ್ ಇಲ್ಲ,ನೀನೆಲ್ಲಿ ಬೇಕಿದ್ದರೂ ಹೋಗಬಹುದು,ಎಲ್ಲಿ ಬೇಕಿದ್ದರೂ ತಲಪಬಹುದು,ಎಲ್ಲವೂ ನಿನ್ನ ಕೈಯಲ್ಲಿದೆ ಹಾಗೂ ನಿನ್ನ ಹೃದಯದಲ್ಲಿದೆ
ಪ್ರಪಂಚದಲ್ಲಿ ಅತೀ ಹೆಚ್ಚು ಬೆಲೆಬಾಳುವ ಹಾಸಿಗೆ ಯಾವುದು?-“ಅಸ್ವಸ್ಥ ಹಾಸಿಗೆ ”
ನೀನು ನಿನ್ನ ಕಾರಿಗೆ ಡ್ರೈವರ್ ನ ನೇಮಿಸಬಹುದು,ನಿನಗಾಗಿ ಬೇರೆಯವರು ದುಡಿಯಬಹುದು ಆದರೆ ನಿನ್ನ ಅನಾರೋಗ್ಯವನ್ನು ಬೇರೆ ಯಾರೂ ವಹಿಸಿಕೊಳ್ಳಲು ಅಸಾಧ್ಯ.
ನಾವು ಕಳೆದುಕೊಂಡ ಅನೇಕ ವಸ್ತುಗಳನ್ನು ಹುಡುಕಿ ತೆಗೆಯಬಹುದು ಆದರೆ,ಒಂದೇ ಒಂದು ಮರಳಿ ಪಡೆಯಲಾರದ ವಸ್ತುವೆಂದರೆ-“ಜೀವನ”
ಶಸ್ತ್ರ ಚಿಕಿತ್ಸೆ ಕೊಠಡಿಯತ್ತ ತೆರಳುತ್ತಿರೋ ಓರ್ವ ವ್ಯಕ್ತಿಯು,ತಾನಿನ್ನೂ ಓದಿ ಮುಗಿಸಲಾಗದ ಒಂದು ಪುಸ್ತಕ ವನ್ನು ನೆನೆಯುತ್ತಾನೆ,ಏನೆಂದು ಗೊತ್ತೆ?- “ಆರೋಗ್ಯ ಪೂರ್ಣ ಜೀವನದ ಸುಂದರ ಅಧ್ಯಾಯ”
ನಾವು ವರ್ತಮಾನದ ಯಾವುದೇ ಒಂದು ಹಂತದಲ್ಲಿ ಬಂದು ನಿಂತಿದ್ದರೂ ಸಹಾ,ನಾವು ತೆರೆ ಸರಿಯುವ ಸಮಯವನ್ನು ಎದುರಿಸಲೇಬೇಕು.
ನಿಮ್ಮ ಸಂಸಾರಕ್ಕೆ,ನಿಮ್ಮ ಸಂಗಾತಿಗಳಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಪ್ರೀತಿಯ ಸಂಪತ್ತನ್ನು ನೀಡಿರಿ.ನಿಮ್ಮನ್ನು ಒಳ್ಳೆಯ ರೀತಿಯಿಂದ ನೋಡಿಕೊಳ್ಳಿ ಸಂತೋಷವಾಗಿರಿ.
ಎಂತಹಾ ಅರ್ಥ ಪೂರ್ಣ ಮಾತುಗಳು!ನಿಜ ಸ್ನೇಹಿತರೇ! ಎಷ್ಟೇ ದುಡ್ಡಿರ್ಲಿ,ಸಂಪತ್ತಿರ್ಲಿ,ಇದೆಲ್ಲವನ್ನೂ ಮೀರಿ ನಮಗೆ ಬೇಕಾದದ್ದು ಕೇವಲ ಸುಮಧುರ ಭಾವನಾತ್ಮಕ ಬಾಂಧವ್ಯಗಳು,ಇವುಗಳು ನಿರ್ಮಲ,ನಿತ್ಯ ನಿರಂತರ,ಇದನ್ನು ಯಾರೂ ‍ನಿಮ್ಮಿಂದ ದೋಚಲಾರರು,ಕಿತ್ತುಕೊಳ್ಳಲಾರರು
ಆ್ಯಪಲ್ ಸಂಸ್ಥಾಪಕ ನಾಗಿರೋ ಸ್ಟೀವ್ 2011 ರಲ್ಲಿ ಸಾವನ್ನಪಿದ್ದ,ಸ್ಟೀವ್ ನ  ಆ್ಯಪಲ್ ನಿಂದ ಹೊರದೂಡಲಾಗಿತ್ತು,ಸ್ಟೀವ್ ಆ್ಯಪಲ್ ಕಂಪನಿಯನ್ನ  ಉಳಿಸಲು ಮತ್ತೆ ಹಿಂತಿರುಗಿ ಬಂದ,ಈಗ ಆತನ ಸಾವಿನ ಮತ್ತದೇ 5 ವರುಷದ ಬಳಿಕವೂ,ಸ್ಟೀವ್ ಇಲ್ಲದ APPLE,ಸ್ಟೀವ್ ಸ್ಥಾಪಿಸಿದ ಅದೇ ಹಳೆಯ APPLE ಆಗೇ ಉಳಿದಿದೆ.

  • ಸ್ವರ್ಣಲತ ಭಟ್

Like us on Facebook  The New India Times

POPULAR  STORIES :

ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!

ಇಲಿಗಳ ದಾಳಿಗೆ ನವಜಾತ ಶಿಶು ಬಲಿ..!

ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?

ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!

ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!

ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!

ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...