ಬಾಲಿವುಡ್ ನಟ ಅಮಿತಾ ಬಚ್ಚನ್ ಅವರ ಮೊಮ್ಮಗಳು, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ – ನಟ ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಭವಿಷ್ಯದಲ್ಲಿ ಪ್ರಧಾನಮಂತ್ರಿ ಆಗುತ್ತಾಳೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಡಿ. ಜ್ಞಾನೇಶ್ವರ ಅವರು ಹೀಗೆಂದು ಭವಿಷ್ಯ ನುಡಿದಿರೋದು. ಮುನ್ನೋಟ 2018 ಎನ್ನುವ ವಿಚಾರದ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಆರಾಧ್ಯ ತನ್ನ ಹೆಸರನ್ನು ರೋಹಿಣಿ ಎಂದು ಬದಲಿಸಿಕೊಂಡರೆ ದೇಶದ ಪ್ರಧಾನಿ ಆಗಬಹುದು ಎಂದು ಹೇಳಿದ್ದಾರೆ.
ಚಿರಂಜೀವಿ ಮತ್ತು ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ. 2009ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ಇದೇ ಡಿ. ಜ್ಞಾನೇಶ್ವರ ಅವರು ಭವಿಷ್ಯ ನುಡಿದಿದ್ದರು.
ಈಗ ಆರಾಧ್ಯ ಪ್ರಧಾನಿ ಆಗುತ್ತಾಳೆ ಎಂದು ಹೇಳಿರುವುದಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ. ಮುಂದೆ ತಮಿಳುನಾಡಿನಲ್ಲಿ ನಡೆಯುವ ಉಪಚುನಾವಣೆಯಲ್ಲಿ ರಜನಿಕಾಂತ್ ಅವರ ಪಕ್ಷ ಬಹುಮತ ಪಡೆದು ರಜನಿಕಾಂತ್ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದಾರೆ.