ಬೆಂಗಳೂರು : ಬಿಜೆಪಿ ನಾಯಕ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ ಹತ್ಯೆ ಪ್ರಕರಣ ಅತ್ಯಂತ ಅಮಾನುಷವಾಗಿದೆ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಇಂತಹ ಘಟನೆಗಳು ನಡೆಯಬಾರದು. ಹಿಂದೈ ಟೈಲರ್ ಹತ್ಯೆ ಅತ್ಯಂತ ಅಮಾನುಸಷವಾಗಿದೆ. ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕೊಲೆ ಅರೋಪಿಗಳೆಲ್ಲಾ ಮತಾಂಧರು. ಜಗತ್ತಿನ ನೆಮ್ಮದಿ ಕಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜಸ್ಥಾನದಲ್ಲಿ ನಡೆದ ಕೊಲೆ ಪ್ರಕರಣದ ಕುರಿತಂತೆ ಬುದ್ಧಿ ಜೀವಿಗಳು ಒಬ್ಬರೂ ಮಾತನಾಡುತ್ತಿಲ್ಲ. ಬುದ್ಧಿ ಜೀವಿಗಳಿಗೆ ಲಕ್ವಾ ಹೊಡೆದಿದೆಯಾ? ಎಲ್ಲಾ ವರ್ಗದ ತಪ್ಪನ್ನು ಖಂಡಿಸಬೇಕು. ಕೇವಲ ಒಂದು ವರ್ಗದವರ ಪರ ನಿಲ್ಲುವುದು ಅಪಾಯಕಾರಿ ಎಂದು ವಾಗ್ದಾಳಿ ನಡೆಸಿದ್ದಾರೆ.