ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿರೋ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಪೋರಂ ಮಾಲ್ ವೊಂದರಲ್ಲಿ ಡಾವೆಲ್ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಜುನ್ ಪಾಲ್ಗೊಂಡಿದ್ದರು. ವೇದಿಕೆಗೆ ಅರ್ಜುನ್ ಬೈಕ್ ಏರಿ ಬರುತ್ತಿರುವಾಗ ಕ್ರ್ಯಾಕರ್ಸ್ ಉರಿಸಲಾಗಿತ್ತು.
ಅರ್ಜುನ್ ಬೈಕ್ ನಿಂದ ಇಳಿಯುವಾಗ ಕ್ರ್ಯಾಕರ್ಸ್ ಉರಿ ಅವರ ಭುಜ ಮತ್ತು ಕೈಗೆ ತಾಗಿ ಸುಟ್ಟ ಗಾಯಗಳಾಗಿವೆ. ಆದರೂ ಅರ್ಜುನ್ ಕಾರ್ಯಕ್ರಮ ನಿಲ್ಲಿಸಲಿಲ್ಲ. ವೇದಿಕೆಯನ್ನೇರಿ ಹಾಡಿ ಅಭಿಮಾನಿಗಳನ್ನು ಖುಷಿ ಪಡಿಸಿದ್ರು.