ನಮ್ಮ ನಿಮ್ಮ ನಡುವೆ ಹತ್ತಾರು ಜನ ಅಂಗವಿಕಲರು ಬದುಕುತ್ತಿದ್ದಾರೆ. ಹೆಚ್ಚಿನವರು ತಾನು ಅಂಗವಿಕಲ ಎಂಬ ಕಾರಣಕ್ಕೆ ಕೊರಗುತ್ತಲೇ ಜೀವನ ದೂಡುತ್ತಿದ್ದಾರೆ. ಆದರೆ ಇನ್ನೂ ಕೆಲವರು ಅಂಗವೈಕಲ್ಯತೆಗೆ ಸವಾಲು ಹಾಕಿ ಉತ್ತಮ ಜೀವನ ಕಂಡುಕೊಂಡಿದ್ದಾರೆ. ಸಮಾಜಕ್ಕೂ ಮಾದರಿಯಾಗಿದ್ದಾರೆ. ಇಲ್ಲೋರ್ವ ಕ್ರಿಕೆಟಿಗನಿದ್ದಾನೆ, ಆತನಿಗೆ ಎರಡೂ ಕೈಗಳಿಲ್ಲ. ಆದರೂ ಚೆಂಡೆಸೆಯುತ್ತಾನೆ. ಗೂಗ್ಲಿಯೂ ಆತನಿಗೆ ಕರಗತವಾಗಿದೆ. ಕೈ ಇಲ್ಲದಿದ್ದರೂ ಸಿಕ್ಸರ್ ಸಿಡಿಸಿ ನೆರೆದ ಅಭಿಮಾನಿಗಳಿಗೆ ಮನೋರಂಜನೆ ಒದಗಿಸುತ್ತಾನೆ.
ಯೆಸ್.. ಭಾರತದ ಮುಕುಟ ಜಮ್ಮು-ಕಾಶ್ಮೀರದ ಅಮೀರ್ ಹುಸೇನ್ ಎಂಬ ಕ್ರಿಕೆಟಿಗ ಈಗ ಎಲ್ಲೆಡೆ ಸುದ್ದಿಯಾಗುತ್ತಿದ್ದಾನೆ. ಏಕೆಂದರೆ ಆತ ತನ್ನೆರೆಡೂ ಕೈಗಳನ್ನು ಕಳೆದುಕೊಂಡಿದ್ದರೂ ಕೂಡಾ ಕಾಲಿನಿಂದಲೇ ಉತ್ತಮವಾಗಿ ಬೌಲಿಂಗ್ ಮಾಡುತ್ತಾನೆ. ಅಲ್ಲದೇ ಗೂಗ್ಲಿ ಎಸೆದು ಎದುರಾಳಿ ಬ್ಯಾಟ್ಸ್ ಮೆನ್ ಗೆ ನಡುಕ ಹುಟ್ಟಿಸುತ್ತಾನೆ. ಇನ್ನು ಬ್ಯಾಟಿಂಗ್ ಮಾಡುವುದರಲ್ಲೂ ಈತ ಎತ್ತಿದ ಕೈ. ಈತ ಬ್ಯಾಟಿಂಗ್ ಮಾಡಲು ನಿಂತನೆಂದರೆ ಸಿಕ್ಸರ್ ಗಳ ಮೇಲೆ ಸಿಕ್ಸರ್ ಸಿಡಿಸುತ್ತಾನೆ. ಅಭಿಮಾನಿಗಳಿಗೆ ಮನೋರಂಜನೆಯ ಮಹಾಪೂರವನ್ನೇ ನೀಡುತ್ತಾನೆ.
22 ವರ್ಷದ ಅಮೀರ್ ಹುಸೇನ್ ಇತ್ತೀಚೆಗೆ ಲಕ್ನೋದ ಕೆಡಿ ಸಿಂಗ್ ಬಾಬು ಮೈದಾನದಲ್ಲಿ ನಡೆದ ಪ್ಯಾರಾಲಂಪಿಕ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚುಹರಿಸಿದ್ದು, ಎಲ್ಲರಿಂದ ಪ್ರಶಂಸೆಯನ್ನು ಗಿಟ್ಟಿಸುಕೊಂಡಿದ್ದಾನೆ.
ಕೇವಲ 10 ವರ್ಷದವನಿದ್ದಾಗಲೇ ಅಮೀರ್ ಕಟ್ಟಿಗೆ ಕತ್ತರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ತನ್ನೆರೆಡೂ ಕೈಗಳನ್ನು ಕಳೆದುಕೊಂಡ. ಬಳಿಕ ಬರೋಬ್ಬರಿ 3 ವರ್ಷ ಆಸ್ಪತ್ರೆಯಲ್ಲಿ ಕಳೆದ. ಆಗಲೇ ಆತನ ಮನದಲ್ಲಿ ಏನನ್ನಾದರೂ ಸಾಧಿಸುವ ಛಲ ಹುಟ್ಟಿಕೊಂಡಿತು. ಸೋಲೊಪ್ಪಿಕೊಳ್ಳಬಾರದು ಎಂಬ ಅದಮ್ಯ ಉತ್ಸಾಹ ಮೂಡಿದ್ದು. ಬಳಿಕ ಪೆನ್ನನ್ನು ಕಾಲಿನ ಬೆರಳ ಮಧ್ಯೆ ಇಟ್ಟುಕೊಂಡು ಬರೆಯುವ ಕಲೆ ಸಿದ್ಧಿಸಿಕೊಂಡ. ಪಿಯುಸಿಯನ್ನೂ ಪಾಸ್ ಮಾಡಿದ. ಈಗ ಸ್ವತಃ ಶೇವಿಂಗ್ ಮಾಡಿಕೊಳ್ಳುವ, ಬಟ್ಟೆ ಧರಿಸುವ, ಊಟ ಮಾಡುವುದನ್ನು ಕಲಿತಿದ್ದಾನೆ.
ಪ್ಯಾರಾಲಂಪಿಕ್ಸ್ ಕ್ರಿಕೆಟ್ ನಲ್ಲಿ ಮಿಂಚು ಹರಿಸುತ್ತಿರುವ ಅಮೀರ್ ಗೆ ಸಚಿನ್ ತೆಂಡೂಲ್ಕರ್, ಎಂ ಎಸ್ ಧೋನಿ ಹಾಗೂ ಸುರೇಶ್ ರೈನಾರನ್ನು ಕಂಡರೆ ಭಾರೀ ಇಷ್ಟವಂತೆ. ಅವರಂತೆಯೇ ದೊಡ್ಡ ಎತ್ತರಕ್ಕೆ ಏರಬೇಕು ಎಂಬ ಆಸೆಯನ್ನು ಅಮೀರ್ ಹುಸೇನ್ ಹೊಂದಿದ್ದಾನೆ.
Video
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಬೆಂಗಳೂರಿನಲ್ಲಿ ಇನ್ಮುಂದೆ ಓಲಾ ಬೈಕ್ ಟ್ಯಾಕ್ಸಿ..! ಪ್ರತಿ ಕಿ.ಮೀ.ಗೆ 2ರೂ ಮಾತ್ರ.. !
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!