ಅಕ್ಟೋಬರ್ 11ರಂದು ಗುರು ಗ್ರಹವು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತದೆ. ಇದು 2019ರ ನವೆಂಬರ್ 5ರವರೆಗೂ ಅಲ್ಲಿ ಸಂಚರಿಸುತ್ತೆ. ನಡುವೆ 2019ಮಾರ್ಚ್ 30ರಿಂದ ಧನು ರಾಶಿ ಪ್ರವೇಶಿಸಿ, ಏಪ್ರಿಲ್23ಕ್ಕೆ ವೃಶ್ಚಿಕ ರಾಶಿಗೆ ಮರಳುತ್ತದೆ.
ಆದ್ದರಿಂದ ದ್ವಾದಶ ರಾಶಿಯ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯುವ ಸಮಯವಿದು.
ಗುರು ಗ್ರಹ ವೃಶ್ಚಿಕ ರಾಶಿಗೆ ಪ್ರವೇಶಿಸಿದ ಬಳಿಕ ನಿಮ್ಮ ರಾಶಿಗನುಗುಣವಾಗಿ ನಿಮ್ಮ ಯೋಗ ಹೇಗಿದೆ ನೋಡಿ.
ಮೇಷ : ಆದಾಯ ಖರ್ಚನ್ನು ಸಮದೂಗಿಸಿಕೊಂಡು ಹೋಗಬಹುದು.ಆದರೆ, ಮುಂದಿನ ವರ್ಷ ನವೆಂಬರ್ ವರೆಗೆ ಸಾಲ ಮಾಡದೇ ಇದ್ದರೆ ಒಳಿತು. ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ ಸಾಧ್ಯತೆ.

ವೃಷಭ : ಪಾಲುದಾರಿಕೆ ವ್ಯವಹಾರ ಸೇರಿದಂತೆ ಸಂಬಂಧಗಳಲ್ಲಿ ಒಳ್ಳೆಯ ಅಭಿಪ್ರಾಯ , ಹತ್ತಿರ ಆಗುವಿಕೆ ಭಾಗ್ಯವಿದೆ. ಮಾರ್ಚ್ ,ಏಪ್ರಿಲ್ ಅವಧಿಯಲ್ಲಿ ಮಾತ್ರ ಸಂಬಂಧಗಳ ಬಗ್ಗೆ ಜಾಗೃತರಾಗಿರಿ. ಆರ್ಥಿಕ ಸಮಸ್ಯೆ ಇರಲಾರದು.

ಮಿಥುನ : ಖರ್ಚಿನ ಬಗ್ಗೆ ನಿಗಾ ಇರಲಿ. ಪಾಲುದಾರರು ಮತ್ತು ಪತ್ನಿಯ ಜೊತೆಗೆ ಎಚ್ಚರದಿಂದಿರಬೇಕು. ವೃತ್ತಿ ಬದುಕಿನಲ್ಲಿ ಬೆಳವಣಿಕೆ ಕಂಡುಬರುತ್ತದೆ. ಆದರೂ ದಿನನಿತ್ಯದ ಖರ್ಚು ನಿಭಾಯಿಸುವುದು ಸಹ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕರ್ಕಾಟಕ :ಹಣಕಾಸಿನ ಸ್ಥಿತಿ ಉತ್ತಮವಾಗುವುದು. ಆರ್ಥಿಕವಾಗಿ ಸದೃಢರಾಗುತ್ತೀರಿ.ಜೊತೆಗೆ ಕುಟುಂಬಕ್ಕೆ ಹೆಚ್ಚಿನ ಹಣ ಮೀಸಲಿಡಬೇಕು.

ಸಿಂಹ : ಅನಿರೀಕ್ಷಿತ ಅನಾರೋಗ್ಯ ಸಮಸ್ಯೆ ಎದುರಾಗುವುದು. ಅನಗತ್ಯ ಖರ್ಚಿನ ಬಗ್ಗೆ ನಿಗಾ ಇರಲಿ. ಹಣಕಾಸಿನ ವಿಚಾರದಲ್ಲಿ ಪ್ರಮುಖ ತೀರ್ಮಾನ ತೆಗೆದುಕೊಳ್ಳಬೇಡಿ.

ಕನ್ಯಾ : ಬಾಳ ಸಂಗಾತಿ ಜೊತೆ ಹೆಚ್ಚಿನ ಸಮಯ ಕಳೆಯುವಿರಿ.ಉದ್ಯೋಗ ,ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಸಮಯವಲ್ಲ.

ತುಲಾ : ದೀರ್ಘಾ ಕಾಲದ ಅನಾರೋಗ್ಯಕ್ಕೆ ಮುಕ್ತಿ ಸಿಗಲಿದೆ. ಆರ್ಥಿಕತೆಯಲ್ಲಿ ಅನುಕೂಲವಾಗಲಿದೆ.

ವೃಶ್ಚಿಕ :ಕುಟುಂಬಕ್ಕಾಗಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಅರ್ಹ ವಯಸ್ಕರಿಗೆ ವಿವಾಹ ಭಾಗ್ಯವಿದೆ. ಸಂತಾನ ಅಪೇಕ್ಷಿತರಿಗೂ ಸಿಹಿ ಸುದ್ದಿ ಇದೆ.

ಧನು : ಆರೋಗ್ಯ ಸಮಸ್ಯೆಗೆ ಮುಕ್ತಿ. ದೊಡ್ಡಮಟ್ಟಿನ ಹಣಕಾಸು ವ್ಯವಹಾರ ಮಾಡಬೇಡಿ. ಕೆಲಸಕ್ಕೆ ಸಂಬಂಧಿಸಿದಂತೆ ಶ್ರಮ ಅಗತ್ಯ.

ಮಕರ : ಈಗ ಹಣ ಉಳಿಸುವ ಸಮಯ. ಈಗ ಉಳಿಸಿಕೊಳ್ಳುವ ಹಣ ಭವಿಷ್ಯಕ್ಕೆ ನೆರವಾಗುತ್ತದೆ. ಮನೋಕಾಮನೆಗಳು ಸಿದ್ಧಿಸುತ್ತವೆ.

ಕುಂಭ : ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳ ಏರಿಕೆ ನಿರೀಕ್ಷಿಸಬಹುದು. ಕೆಲಸ ಬದಲಾಯಿಸುವ ಯೋಚನೆ ಇದ್ದಲ್ಲಿ ಆತ್ಮವಿಶ್ವಾಸದಿಂದ ಮುನ್ನುಗ್ಗಿ, ಅಂದುಕೊಂಡ ಕೆಲಸ ಸಿಗಲಿದೆ.

ಮೀನ : ಕೆಲಸದಲ್ಲಿ ಒತ್ತಡ. ನಿಗಧಿಯ ಸಮಯಕ್ಕೂ ಮಿಗಿಲಾಗಿ ಕಚೇರಿಯಲ್ಲಿ ಕಳೆಯಬೇಕಾಗುತ್ತದೆ. ಆರೋಗ್ಯ ವಿಚಾರದಲ್ಲಿ ಎಚ್ಚರ.







