ಎಟಿಎಂನಲ್ಲಿ ಕಳವು ಮಾಡ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.ಸತೀಶ್ , ಮಂಜುನಾತ್ , ಸುನೀಲ್ ಬಂಧಿತರು.
ಇವರು ಆರ್ ಕೆ ಎಂ ಸಂಸ್ಥೆಯಲ್ಲಿ ಕಸ್ಟೋಡಿಯನ್ ಆಗಿ ಹಣ ತುಂಬುವ ಕೆಲಸ ಮಾಡ್ತಿದ್ದರು.ಆಟೋದಲ್ಲಿ ಅತಿ ವೇಗವಾಗಿ ಹೋಗುತಿದ್ದಾಗ ಬೀಟ್ ಪೊಲೀಸರಿಗೆ ಅನುಮಾನ ಬಂದಿದೆ.
ಕೂಡಲೇ ಆಟೋವನ್ನು ಬೆನ್ನತ್ತಿ ಪರಿಶೀಲನೆ ನಡೆಸಿದಾಗ ಹಣ ಪತ್ತೆ ಯಾಗಿದೆ. ಕಸ್ಟೋಡಿಯನ್ ಗಳಿಗೆ ಎಟಿಎಂಗೆ ಹಣ ತುಂಬಲು ಸೀಕ್ರೆಟ್ ಪಾಸ್ವರ್ಡ್ ಕೊಟ್ಟಿರುತ್ತಾರೆ.
ಬೆಳಗಿನ ಜಾವ ಹಣ ತುಂಬಿಸಿ ರಾತ್ರಿ ವೇಳೆ ಅದೇ ಎಟಿಎಂಗಳಲ್ಲಿ ಕಳ್ಳತನ ಮಾಡುತ್ತಿದ್ದರ ಎನ್ನಲಾಗಿದೆ.