ಭಾರತೀಯ ಸ್ಟೇಟ್ ಬ್ಯಾಂಕ್ ತಮ್ಮ 6 ಲಕ್ಷಕ್ಕೂ ಅಧಿಕ ಗ್ರಾಹಕರ ಡೆಬಿಟ್ ಕಾರ್ಡ್ ನಂಬರ್‍ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಸೂಚನೆ ನೀಡಿ ಇನ್ನು ಒಂದು ದಿನ ಕಳೆದಿಲ್ಲ.. ಆಗಲೇ ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಅಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ..! ಈ ಸ್ಪೋಟಕ ಸುದ್ದಿ ಕೇಳಿದ್ದೆ ತಡ ಮಾಡದೇ ಒಮ್ಮೆ ನಿಮ್ಮ ಬ್ಯಾಂಕ್‍ಗಳಿಗೆ ಭೇಟಿ ಕೊಡೋದು ಒಳ್ಳೇದು. ಯಾಕಂದ್ರೆ ದೇಶದಲ್ಲಿ ಸುಮಾರು 32 ಲಕ್ಷಕ್ಕೂ ಅಧಿಕ ಗ್ರಾಹಕರ ಡೆಬಿಟ್ ಕಾರ್ಡ್ ಸಂಖ್ಯೆ ಹ್ಯಾಕ್ ಆಗಿದೆ.. ಅಂದ್ರೆ ಕದಿಯಲಾಗಿದೆ ನೋಡಿ..! ಈ ಒಂದು ಸ್ಪೋಟಕ ಸುದ್ದಿಯನ್ನು ಸ್ವತಃ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ದೇಶದ ಎಲ್ಲಾ ಬ್ಯಾಂಕ್‍ಗಳಿಗೂ ಈ ಕುರಿತು ಎಚ್ಚರಿಕೆ ನೀಡಿದೆ. ಕಳೆದ ಒಂದು ದಿನಗಳ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 6 ಲಕ್ಷಕ್ಕೂ ಅಧಿಕ ಗ್ರಾಹಕರ ಡೆಬಿಟ್ ಕಾರ್ಡ್ ಬ್ಲಾಕ್ ಮಾಡಿದ್ದು ಬ್ಯಾಂಕಿಂಗ್ ಇತಿಹಾಸದಲ್ಲೇ ಮೊದಲಾಗಿತ್ತು..! ಆದ್ರೆ ಈಗ ಅದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಿನ ಗ್ರಾಹಕರ ಪಿನ್‍ಕೋಡ್‍ಗಳು ಕದ್ದಿರೋದು ಕೂಡ ಇದೇ ಮೊದಲು..! ಅಷ್ಟೇ ಅಲ್ಲ ಇದು ಮತ್ತೊಂದು ಇತಿಹಾಸ.. ಕೇವಲ ಪಿನ್‍ಕೋಡ್ ಮಾತ್ರ ಕಳುವಾಗಿಲ್ಲ ಈಗಾಗಲೇ ಹಣ ತೆಗೆಯುವ ಕಾರ್ಯಗಳು ಕೂಡ ಮುಂದುವರೆದಿದ್ದು ಈಗಾಗಲೇ ಸುಮಾರು 1.3 ಕೋಟಿ ಹಣ ಹಣ ಕಳವು ಮಾಡಲಾಗಿದೆ ನೋಡಿ..! ಇನ್ನೊಂದೆಡೆ ಪಿನ್ ಕೋಡ್ ಕಳವು ಮಾಡಲಾಗಿರುವ ಕುರಿತಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳು ಸ್ಪಷ್ಟವಾದ ಹೇಳಿಕೆ ನೀಡಲು ವಿಫಲವಾಗಿದೆ. ಯಾಕಂದ್ರೆ ಇಲ್ಲಿ ಹ್ಯಾಕರ್‍ಗಳು ಕೆಲ ಎಟಿಎಂಗಳ ಮಾಹಿತಿಯನ್ನು ಮಾತ್ರ ಪಡೆದುಕೊಂಡಿದ್ದಾರೆಯೇ ಅಥವಾ ಮಾಲ್‍ವೇರ್ ಬಳಸಿ ಇಡೀ ಎಟಿಎಂ ಮೆಷಿನ್‍ಗಳ ಮೂಲ ಮಾಹಿತಿಗಳನ್ನೇ ಪಡೆದುಕೊಂಡಿದ್ದಾರೆಯೇ..? ಎಂಬ ದ್ವಂದ್ವ ಪ್ರಶ್ನೆ ಅವರಿಗೆ ಕಾಡ್ತಾ ಇದೆ. ಆದರೆ ಎನ್‍ಪಿಸಿಐ ನೀಡಿರೋ ಮಾಹಿತಿ ಪ್ರಕಾರವಾಗಿ ದೇಶದ ಪ್ರತಿಷ್ಟಿತ ಬ್ಯಾಂಕ್‍ಗಳಾದ ಹೆಚ್‍ಡಿಎಫ್‍ಸಿ, ಐಸಿಐಸಿಐ, ಎಸ್‍ಬಿಐ, ಎಕ್ಸಿಸ್ ಮತ್ತು ಯೆಸ್ ಬ್ಯಾಂಕ್‍ಗಳ ಮಾಹಿತಿಗಳನ್ನು ಕದಿಯಲಾಗಿದೆ ಎಂಬ ಸತ್ಯಾಂಶ ಬಯಲಾಗಿದೆ. ಈ ಪೈಕಿ 26 ಲಕ್ಷ ವೀಸಾ ಹಾಗೂ ಮಾಸ್ಟರ್ ಕಾರ್ಡ್, 6 ಲಕ್ಷ ರುಪೆ ಕಾರ್ಡ್‍ಗಳ ಮಾಹಿತಿ ಸೋರಿಕೆಯಾಗಿದ್ದು, ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಎಸ್‍ಬಿಐ ಈಗಾಗಲೇ ಸುಮಾರು ಆರು ಲಕ್ಷ ಗ್ರಾಹಕರ ಡೆಬಿಟ್ ಕಾರ್ಡ್ ಬ್ಲಾಕ್ ಮಾಡಿದ್ದಾರೆ.
Like us on Facebook The New India Times
POPULAR STORIES :
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!