ಆಂಗ್ ಸಾನ್ ಸೂಕಿ ನೀಡಿದ್ದ ಅತ್ಯುನ್ನತ ಪ್ರಶಸ್ತಿ ಹಿಂಪಡೆಯಲು ಕಾರಣ‌..?

Date:

ದಿಟ್ಟತನದ ಸತತ ಹೋರಾಟ, ಶ್ರದ್ಧೆ, ಧೈರ್ಯ, ಶಿಸ್ತುಬದ್ಧ ಜೀವನದಿಂದ ಅಸಾಮಾನ್ಯವಾದದ್ದನ್ನು ಸಾಧಿಸಬಹುದು ಎಂಬುದಕ್ಕೆ ಈಕೆ ಉತ್ತಮ ಉದಾಹರಣೆ ಎನ್ನಬಹುದು. ಅಂದಹಾಗೆ ಈಕೆಯ ಹೆಸರು ಆಂಗ್ ಸಾನ್ ಸೂಕಿ ಅಂತ.

ತಮ್ಮ ವೈಯಕ್ತಿಕ ಬದುಕಿನ ಸುಖವನ್ನು ಬದಿಗಿತ್ತು ದೇಶದ ಸ್ವಾತಂತ್ರ್ಯಕ್ಕಾಗಿ, ಸಾಮಾನ್ಯ ಜನರ ಹಕ್ಕುಗಳಿಗಾಗಿ ಸತತ ಹೋರಾಟ ನಡೆಸಿದ ಮಾದರಿ ಮಹಿಳೆ ಹೆಣ್ಣು. ಮ್ಯಾನ್ಮಾರ್ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಅಲ್ಲಿನ ಸೇನೆ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಕಾರಣಕ್ಕಾಗಿ ಆಂಗ್ ಸನ್ ಸೂಕಿ ಅವರಿಗೆ ನೀಡಿದ್ದ ಅತ್ಯುನ್ನತ ಪ್ರಶಸ್ತಿಯನ್ನು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಹಿಂಪಡೆದಿದೆ. 1991ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿದ್ದ ಅಂಗ್ ಸಾನ್ ಸೂಕಿ ಕಳೆದುಕೊಂಡಿರುವ ಅತ್ಯುನ್ನತ ಗೌರವ ಇದಾಗಿದೆ.

ಸೂಕಿ ಅವರಿಗೆ 2009ರಲ್ಲಿ ನೀಡಿದ ಅತ್ಯುನ್ನತ ಅಂಬಾಸಿಡರ್ ಆಫ್ ಕನ್‌ಸೈನ್ಸ್ (ಆತ್ಮಸಾಕ್ಷಿಯ ರಾಯಭಾರಿ) ಗೌರವನ್ನು ರದ್ದುಪಡಿಸಿರುವುದಾಗಿ ಲಂಡನ್ ಮೂಲದ ಮಾನವಹಕ್ಕು ಸಂಘಟನೆ ಪ್ರಕಟಿಸಿದೆ. “ನೀವು ಇನ್ನು ಮುಂದೆ ನಿರೀಕ್ಷೆ, ಸಾಹಸ ಮತ್ತು ಮಾನವಹಕ್ಕುಗಳ ಸಂರಕ್ಷಣೆಯನ್ನು ಪ್ರತಿನಿಧಿಸುವ ಸಂಕೇತವಾಗಿ ಉಳಿದಿಲ್ಲ ಎಂಬ ತೀವ್ರ ನಿರಾಸೆಯಿಂದ ಪ್ರಕಟಿಸುತ್ತಿದ್ದೇವೆ” ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಮುಖ್ಯಸ್ಥರಾದ ಕುಮಿ ನಯ್ಡೂ ಸೂಕಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಆತ್ಮ ಸಾಕ್ಷಿಯ ರಾಯಭಾರಿ ಪ್ರಶಸ್ತಿಯ ಗೌರವದ ಸ್ಥಾನ ಮಾನವನ್ನು ನೀವು ಉಳಿಸಿಕೊಳ್ಳುವುದನ್ನು ಸಮರ್ಥಿಸಿಕೊಳ್ಳಲ್ಲು ಸಾಧ್ಯವಿಲ್ಲ.. ಆದ್ದರಿಂದ ತೀರಾ ಬೇಸರದಿಂದ ಈ ಪ್ರಶಸ್ತಿಯನ್ನು ಹಿಂಪಡೆಯುತ್ತಿದ್ದೇವೆ ಎಂದು ಕಾರಣವನ್ನು ಸಹ ನೀಡಿದೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...