ಚೆಂಡು ವಿರೂಪಗೊಳಿಸಿದ ಪ್ರಕರಣದಿಂದ ಆಸ್ಟ್ರೇಲಿಯಾ ಕ್ರಿಕೆಟ್ ಅವಮಾನಕ್ಕೀಡಾಗಿದ್ದು, ಅದರಿಂದ ಚೇತರಿಸಿಕೊಳ್ಳೋದು ತುಂಬಾ ಕಷ್ಟ ಇದೆ.
ಪ್ರಕರಣದ ಬಳಿಕ ಆಸೀಸ್ ಕ್ರಿಕೆಟಿನ ನವಯುಗವನ್ನು ಆರಂಭಿಸಲು ಆಸೀಸ್ ಕ್ರಿಕೆಟ್ ಮುಂದಾಗಿದೆ.
ದ.ಆಫ್ರಿಕಾ ವಿರುದ್ಧದ ಸರಣಿ ವೇಳೆ ಚೆಂಡು ವಿರೂಪಗೊಳಿಸಿದ ಘಟನೆ ನಂತರ ನಾಯಕ ಸ್ಟೀವ್ ಸ್ಮಿತ್ ನಿಷೇಧಕ್ಕೆ ಒಳಗಾಗಿದ್ದಾರೆ. ಬಳಿಕ ವಿಕೆಟ್ ಕೀಪರ್ ಟಿಮ್ ಪೈನ್ ಗೆ ತಂಡದ ನಾಯಕತ್ವ ನೀಡಲಾಗಿತ್ತು.
ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಸೀಸ್ ತಂಡವನ್ನು ಪ್ರಕಟಿಸಲಾಗಿದೆ. ನಿಗಧಿತ ಓವರ್ ಗಳ ಪಂದ್ಯಗಳಿಗೆ ಇಬ್ಬರು ನಾಯಕರನ್ನು ಆಸೀಸ್ ಕ್ರಿಕೆಟ್ ಘೋಷಿಸಿದೆ.
ಏಕದಿನ ಕ್ರಿಕೆಟಿಗೆ ಟಿಮ್ ಪೈನ್ ಅವರೇ ಸಾರಥಿ. ಟಿ20 ಸರಣಿಗೆ ಆರೋನ್ ಫಿಂಚ್ ಅವರು ನಾಯಕ…! ಏಕದಿನ ಸರಣಿಗೆ ಫಿಂಚ್ ಉಪನಾಯಕನ ಜವಬ್ದಾರಿ ವಹಸಿಕೊಳ್ಳಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಸೀಸ್ ತಂಡ
ಏಕದಿನ: ಟಿಮ್ ಪೈನ್ (ನಾಯಕ), ಆರೋನ್ ಫಿಂಚ್ (ಉಪನಾಯಕ), ಆಷ್ಟೋನ್ ಅಗರ್, ಅಲೆಕ್ಸ್ ಕಾರಿ, ಜೋಶ್ ಹ್ಯಾಸಲ್‌ವುಡ್, ಟ್ರಾವಿಸ್ ಹೆಡ್, ನಥಾಲ್ ಲಿಯಾನ್, ಗ್ಲೆನ್ ಮ್ಯಾಕ್ಸ್‌ವೆಲ್, ಶಾನ್ ಮಾರ್ಷ್, ಝೀ ರಿಚರ್ಡ್‌ಸನ್, ಕೇನ್ ವಿಲಿಯಮ್ಸನ್, ಡಿ ಆರ್ಸಿ ಶಾರ್ಟ್, ಬಿಲ್ಲಿ ಸ್ಟೇನ್ಲೇಕ್, ಮಾರ್ಕಸ್ ಸ್ಟೋನಿಸ್, ಆಂಡ್ರೂ ಟೈ.
ಟಿ 20: ಆರೋನ್ ಫಿಂಚ್ (ನಾಯಕ), ಅಲೆಕ್ಸ್ ಕಾರಿ (ಉಪನಾಯಕ), ಆಷ್ಟೋನ್ ಅಗರ್, ಟ್ರಾವಿಸ್ ಹೆಡ್, ನಿಕ್ ಮ್ಯಾಡಿನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಝೀ ರಿಚರ್ಡ್‌ಸನ್, ಡಿ ಆರ್ಸಿ ಶಾರ್ಟ್, ಬಿಲ್ಲಿ ಸ್ಟೇನ್ಲೇಕ್, ಮಾರ್ಕಸ್ ಸ್ಟೋನಿಸ್, ಮಿಷೆಲ್ ಸ್ವೆಪ್ಸನ್, ಆಂಡ್ರೂ ಟೈ, ಜಾಕ್ ವೈಲ್ಡರ್‌ಮಟ್