ಆಟೋ ಚಾಲಕನೊಬ್ಬ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟಮಡುವಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಲಕ್ಷ್ಮಣ್ ಎಂಬ 19 ವರ್ಷದ ಯುವಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವ. ಆಟೋ ಚಾಲಕ ರಾಜೇಶ್ ಹುಲಿ (30) ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾದ ಆರೋಪಿ.
ಲಕ್ಷ್ಮಣ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದಾನೆ.
ಲಕ್ಷ್ಮಣ್ ವಾಸವಿರುವ ಏರಿಯಾದಲ್ಲಿಯೇ ರಾಜೇಶ್ ಕೂಡ ಇದ್ದಾನೆ. ಮೇ 23 ರಂದು ಲಕ್ಷ್ಮಣ್ ಬ್ಯಾಂಕಿಗೆ ಹೋಗ್ಬೇಕೆಂದು ರಾಜೇಶನ ಆಟೋ ಹತ್ತಿದ್ದನು. ಈ ವೇಳೆ ರಾಜೇಶ್ ತನ್ನ ಮನೆಯ ಬಳಿ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬರ್ತೀನಿ ಅಂತ ರಾಜೇಶ್ ಹೋಗಿದ್ದನು. ನಂತರ ಲಕ್ಷ್ಮಣ್ ನನ್ನೂ ಮನೆಯ ಒಳಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ರಾಜೇಶ್ ಲಕ್ಷ್ಮಣ್ ನ ಬಾಯಿ ಕಟ್ಟಿ ಲೈಂಗಿಕ ದೌರ್ಜನ್ಯ ಎಸಗಿ, ವೀಡಿಯೋ ಕೂಡ ಮಾಡಿ ವಿಕೃತಿ ಮೆರೆದಿದ್ದಾನೆ. ವಿಷಯ ಬಾಯ್ಬಿಟ್ಟರೆ ವೀಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದನು ಎನ್ನಲಾಗಿದ್ದು, ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.