ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ

Date:

ವಿಶ್ವ ವಿಖ್ಯಾತ ಜೋಗಜಲಪಾತದ ಅಭಿವೃದ್ದಿ ಹೊಣೆಯನ್ನು ರಾಜ್ಯ ಸರ್ಕಾರ ಖಾಸಗಿ ಎಂಎನ್‍ಸಿ ಸಂಸ್ಥೆಗೆ ವಹಿಸಿಕೊಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾದ ಹಾಲೀ ಯು.ಎ.ಇ ಉದ್ಯಮಿ ಆರ್.ಬಿ. ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ ವಹಿಸಿಕೊಟ್ಟಿದೆ. ಈ ಮೂಲಕ ಕರುನಾಡಿನ ಮುಕುಟವೆನಿಸಿರುವ ಜೋಗ ಜಲಪಾತವನ್ನು ಖಾಸಗಿಯವರ ಕೈಗೆ ವಹಿಸಿಕೊಡುವ ಪ್ರಯತ್ನಕ್ಕೆ ಕೈ ಹಾಕಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜೋಗ ಪ್ರದೇಶದಲ್ಲಿನ ನೀರಿನ ಪುನರ್ ಬಳಕೆ ಮಾಡಿ ಸರ್ವ ಋತು ಜಲಪಾತ ನಿರ್ಮಿಸುವ ಯೋಜನೆಯನ್ನು ಮೆ.ಬಿ.ಆರ್.ಎಸ್ ವೆಂಚರ್‍ಗೆ ವಹಿಸಿಕೊಡಲು ಸಂಪುಟ ತೀರ್ಮಾನಿಸಿದೆ. ಇದರಿಂದ ಜಲಪಾತ ಅಭಿವೃದ್ದಿ ಮತ್ತು ನಿರ್ವಹಣೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲು ತೀರ್ಮಾನಿಸಿದ್ದರೂ, ಅದನ್ನು ಖಾಸಗೀಕರಣವಲ್ಲ ಎಂದು ಸರ್ಕಾರ ವಾಧಿಸುತ್ತಿದೆ.
ಜಲಪಾತದ ಬಗ್ಗೆ ಬಿಆರ್‍ಎಸ್ ವೆಂಚರ್ ಸಂಸ್ಥೆಯ ಮಾಲಿಕ ಬಿ.ಆರ್ ಶೆಟ್ಟಿ ಅವರಿಗೆ ಭಾವನಾತ್ಮಕ ಸಂಬಂಧವಿದ್ದು, ಅವರು 450 ಕೋಟಿ ರೂ ವೆಚ್ಚ ಮಾಡಿ ಜೋಗವನ್ನು ಸರ್ವಋತು ಜಲಪಾತವನ್ನಾಗಿ ಅಭಿವೃದ್ದಿ ಪಡಿಸಬೇಕು ಎಂದು ತೀರ್ಮಾನಿಸಿದ್ದಾರೆ. ಜೋಗದ ವೀಕ್ಷಣೆಗೆ ಈ ಸಂಸ್ಥೆ ಶುಲ್ಕವನ್ನು ನಿರ್ಧರಿಸುವುದಿಲ್ಲ, ಬದಲಿಗೆ ಅದನ್ನು ಜೋಗ ಜಲಪಾತ ಪ್ರಾಧಿಕಾರದ ತೀರ್ಮಾನದಂತೆಯೇ ಶುಲ್ಕ ನಿಗಧಿಯಾಗಲಿದೆ ಎಂದು ಸ್ಪಷ್ಟನೆ ನೀಡುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಸರ್ಕಾರದ ವತಿಯಿಂದ ಈ ಯೋಜನೆಗೆ ಯಾವುದೇ ಭೂಮಿ ಅಥವಾ ಇನ್ನಾವುದೇ ರೀತಿಯ ನೆರವನ್ನು ನೀಡುವುದಿಲ್ಲ. ಕೇವಲ ನಿರ್ವಹಣೆಯನ್ನು ಮಾತ್ರ ಆ ಸಂಸ್ಥೆ ಮಾಡಲಿದೆ. ಇನ್ನುಳಿದಂತೆ ಜೋಗ ಜಲಪಾತಗಳ ಪ್ರಾಧಿಕಾರದಂತೆಯೇ ನಡೆಯಲಿದೆ ಎಂದು ತಿಳಿಸಿದ್ದಾರೆ. ಮೂಲ ಯೋಜನಾ ಪ್ರಕಾರಗಳಂತೆಯೇ ಜೋಗ ಜಲಪಾತ ಅಭಿವೃದ್ದಿಯಾಗಲಿದ್ದು, ವರ್ಷವಿಡೀ ಪ್ರವಾಸಿಗರಿಗೆ ನೋಡಿವ ಅವಕಾಶ ಕಲ್ಪಿಸಲಾಗುವುದು ಎಂದರು.
ನಮ್ಮ ರಾಜ್ಯದವರೇ ಆದ ಬಿ.ಆರ್ ಶೆಟ್ಟಿ ಅವರು ಈ ಹಿಂದೆ ಬಂಡವಾಳ ಹೂಡಿಕೆ ಸಮಾವೇಶದಲ್ಲೂ ಜೋಗ ಜಲಪಾತದ ಬಗ್ಗೆ ತಮಗೆ ಭಾವನಾತ್ಮಕ ನಂಟಿದ್ದು, ತನ್ನ ನಾಡಿಗಾಗಿ ಏನಾದರೂ ಸಹಕಾರ ಮಾಡಬೇಕು ಎಂಬ ಕಾಳಜಿಯಿಂದ 450 ಕೋಟಿವರೆಗೆ ವೆಚ್ಚ ಮಾಡಿ ಅಭಿವೃದ್ದಿ ಪಡಿಸುತ್ತಿದ್ದಾರೆ. ಅವರು ಇದರಿಂದ ಯಾವುದೇ ಆದಾಯ ಪಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಈ ಕಾರಣದಿಂಲೇ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಆದರೆ ಮೂಲ ಯೋಜನೆಗಳ ಪ್ರಕಾರ ಅಭಿವೃದ್ದಿ ಪಡಿಸಲು ಕೆಲವು ಶರತ್ತುಗಳು ವಿಧಿಸಿ ಅನುಮತಿ ನೀಡಲಾಗಿದೆ. ಅರಣ್ಯ ಅಲಾಖೆ ಸೇರಿ ಅಗತ್ಯ ಅನುಮತಿ ಪಡೆಯುವುದು ಆ ಸಂಸ್ಥೆಗೆ ಬಿಟ್ಟದ್ದು ಎಂದು ಹೇಳಿದ್ದಾರೆ Real Story on B.R.Shettyಸೇಲ್ಸ್ ಮ್ಯಾನ್ ಆಗಿದ್ದವರ ಆಸ್ತಿ ರೂ.121819104000.!

POPULAR  STORIES :

ಮುಂದಿನ ತಿಂಗಳಿಂದ ಡ್ಯಾಂ ನೀರು ಕೃಷಿಗಿಲ್ಲ, ಕುಡಿಯೋಕೆ ಮಾತ್ರ..!

ಇಪ್ಪತ್ತೈದು ಅಡಿ ಎತ್ತರದಿಂದ ನೀರಿಗೆ ಜಿಗಿದ ಬಾಲಕ..! ಮುಂದೇನಾಯ್ತು..? ಈ ಸ್ಟೋರಿ ಓದಿ.

ಸಿಸ್ಕೋ ಸಂಸ್ಥೆಯಿಂದ ಹದಿನಾಲ್ಕು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್.?

ಸೆಕ್ಸ್ ಉದ್ಯಮದಲ್ಲಿ ಚೀನಾ ನಂ.1 ಭಾರತ ನಂ.7..!

ಮುಂದಿನ ದಿನಗಳಲ್ಲಿ ಮೂತ್ರಕ್ಕೂ ಬರ್ಬೋದು ಭಾರೀ ಬೇಡಿಕೆ..!

ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...