ಸಾಲಮನ್ನಾದ ಬಗ್ಗೆ ಶೀಘ್ರದಲ್ಲೇ ನಿರ್ಧಾರ : ಬಿಎಸ್ ವೈ

Date:

ನಾನು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಷ್ಟ್ರೀಕೃತ ಬ್ಯಾಂಕ್ ಗಳ 1ಲಕ್ಷದವರೆಗಿನ‌ ಬೆಳೆ ಸಾಲ,‌ಸಹಕಾರ ಬ್ಯಾಂಕ್ ಗಳಲ್ಲಿನ 1 ಲಕ್ಷಗಳವರೆಗಿನ ಸಾಲ ಮತ್ತು ನೇಕಾರರ 1 ಲಕ್ಷದವರೆಗಿನ ಸಾಲ ಮನ್ನಾ ಮಾಉವ ಭರವಸೆ ನೀಡಿದ್ದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರಿಗೆ ಹೇಳಿದ್ದೇನೆ. ಅದರಂತೆ ಅವರು ಈ ಬಗ್ಗೆ ಅಂಕಿಅಂಶಗಖನ್ನು ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ನೀಡಲಿದ್ದಾರೆ. ನಂತರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.


ಪ್ರಮಾಣ ವಚನ ಸ್ವೀಕರಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ರಾಜ್ಯದ ಆರೂವರೆ ಕೋಟಿ ಜನತೆಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮೂರನೇ ಬಾರಿಗೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನನ್ನನ್ನು ಮತ್ತು ನಮ್ಮ ಪಕ್ಷವನ್ನು ಬೆಂಬಲಿಸಿದ ರೈತರು, ಜನರಿಗೆ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸುತ್ತೇನೆ ಎಂದರು.


ರೈತರು,‌ನೇಕಾರರ ಸಾಲಮನ್ನಾದ ಬಗ್ಗೆ ಹೇಳಿದ್ದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ತೀರ್ಮಾನಕೈಗೊಳ್ಳುವುದಾಗಿ ತಿಳಿಸಿದರು.
ಅದೇರೀತಿ ಬಹುಮತ ಸಾಬೀತುಪಡಿಸಲು 15 ದಿನ ಕಾಯುವುದಿಲ್ಲ. ಆದಷ್ಟು ಬೇಗ ಸಾಬೀತುಪಡಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

Share post:

Subscribe

spot_imgspot_img

Popular

More like this
Related

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಕೃಷ್ಣ ಬೈರೇಗೌಡ 

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು:...

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ ಟೀಕೆ

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ...

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು!

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು! ಹೆಚ್ಚಿನವರಿಗೆ ಮಧ್ಯಾಹ್ನ ಚಿಕ್ಕನಿದ್ರೆ ಅಥವಾ...

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ ಬೆಂಗಳೂರು: ಕಾಂಗ್ರೆಸ್...