ಪಾಕಿಸ್ತಾನದ ಮೇಲೆ ನಮ್ಮಭಾರತೀಯ ಯೋಧರು ಏರ್ ಸ್ಟ್ರೈಕ್ ಮಾಡಿದ ದಿನದಂದು ಜನಸಿದ ಮಗುವಿಗೆ ಮಿರಾಜ್ಸಿಂಗ್ರಾಥೋರ್ಎಂದುರಾಜಸ್ಥಾನದ ಮಹಾವೀರ್ ಸಿಂಗ್ ಹಾಗೂ ಸೋನಮ್ ಸಿಂಗ್ ದಂಪತಿಗಳು ಹೆಸರಿಟ್ಟಿದ್ದಾರೆ.ರಾಜಸ್ಥಾನದ ನಾಗ್ ಪುರ ಜಿಲ್ಲೆಯ ದಾಬ್ದಾ ಗ್ರಾಮದ ದಂಪತಿಗಳು ಮಂಗಳವಾರ ಬೆಳಗ್ಗಿನ 3.50ರ ಹೊತ್ತಿಗೆ ದಂಪತಿಗೆ ಗಂಡು ಮಗು ಜನಿಸಿದೆ. ಪಾಕ್ ಉಗ್ರರ ಅಡಗುತಾಣಗಳನ್ನು ಮಟ್ಟಹಾಕಲು ಭಾರತ, ಮಿರಾಜ್ 2000 ಎಂಬ ಯುದ್ಧ ವಿಮಾನವನ್ನು ಬಳಸಿಕೊಂಡಿತು. ಈ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಹೀಗಾಗಿ ಇದೇ ಹೆಸರನ್ನು ತಮ್ಮ ಮಗನಿಗೆ ನಾಮಕರಣ ಮಾಡಿದ್ದಾರೆ.
ಮಗುವಿಗೆ ಮಿರಾಜ್ ಸಿಂಗ್ ರಾಥೋರ್ ಹೆಸರು ಹಿಡುವ ಮೂಲಕ ಭಾರತೀಯ ಯೋಧರಿಗೆ ಬಿಗ್ ಸೆಲ್ಯೂಟ್ ಹೊಡೆದಿದ್ದಾರೆ ಈ ದಂಪತಿಗಳು.