ಪೇದೆ ಡ್ಯೂಟ್ ಯಲ್ಲಿರುವಾಗ ಪತ್ನಿ ಪಿಎಸ್ ಐ ಜೊತೆ ಮಂಚದಲ್ಲಿ…! ಪಲ್ಲಂಗದಾಟ ಆಡುವಾಗಲೇ ಕ್ವಾರ್ಟರ್ಸ್ ಗೆ ಬೆಂಕಿ…!

Date:

 

ಪೇದೆ ಡ್ಯೂಟಿಯಲ್ಲಿರುವಾಗ ಆತನ ಪತ್ನಿಯೊಂದಿಗೆ ಪಿಎಸ್ ಐ ಪಲ್ಲಂಗದಾಟ ಆಡಿ , ಜೈಲು ಪಾಲಾಗಿರೋ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಪೊಲೀಸ್ ಇಲಾಖೆಯ ವೈಯರ್ ಲೆಸ್ ವಿಭಾಗದ ಪಿಎಸ್ ಐ ಕಿರಣ್ ಸಾಮ್ರಾಟ್ ನೇ ಆ‌ ‘ಪೋಲಿ’ಸ್…!

ಈತ ಪೇದೆಯೊಬ್ಬರ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಪೋಲೀಸ್ ಇಲಾಖೆಯ ಡಿಆರ್ ಕ್ವಾರ್ಟರ್ಸ್ ನ ಮನೆಯಲ್ಲಿ ಕುಡಿದು ಸಿಗರೇಟ್ ಸೇದಿ ಮನೆತುಂಬಾ ಬಿಸಾಕಿ ಪಲ್ಲಂಗದಾಟವಾಡುತ್ತಿದ್ದರಂತೆ. ಈ ವೇಳೆ ಕ್ವಾರ್ಟರ್ಸ್ ಗೆ ಬೆಂಕಿ ಬಿದ್ದಿದೆ. ಮನೆ ಸುಟ್ಟು ಹೋಗಿದೆ.
ಪಿಎಸ್‍ಐ ಕಿರಣ ಸಾಮ್ರಾಟ್ ಹಾಗೂ ಪೇದೆಯ ಪತ್ನಿಯ ಮಧ್ಯೆ
ನಾನಾ ದಿನಗಳಿಂದ ಅನೈತಿಕ ಸಂಬಂಧವಿತ್ತು. ಇಬ್ಬರ ಮಧ್ಯೆ ಇತ್ತೀಚಿಗೆ ಸಣ್ಣ ಮಟ್ಟದ ಮನಸ್ತಾಪ ಸಹ ಏರ್ಪಟ್ಟಿತ್ತು. ಹೀಗಾಗಿ ಪಿಎಸ್‍ಐ ಕಿರಣ ಸಾಮ್ರಾಟರ ಮನೆಯಲ್ಲಿ ಎರಡು ದಿನಗಳ ಕಾಲ ಪೇದೆಯ ಪತ್ನಿ ವಾಸವಿದ್ದಳು. ಆಗ ಆಕೆಯನ್ನು ಸಮಾಧಾನಪಡಿಸಿದ ಪಿಎಸ್‍ಐ ಆಕೆಯೊಂದಿಗೆ ಕುಡಿದು ಸಿಗರೇಟ್ ಸೇದಿ ಮನೆ ತುಂಬಾ ಬಿಸಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕ್ವಾರ್ಟರ್ಸ್ ನಲ್ಲಿದ್ದ ಸೋಫಾಗೆ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿದೆ. ಅಲ್ಲದೇ ಬೆಂಕಿ ಅನಾಹುತದಿಂದ ಅಕ್ಕಪಕ್ಕದಲ್ಲಿದ್ದ ಇತರೆ ಅಧಿಕಾರಿಗಳ ಕುಟುಂಬದವರ ಆಪತ್ತಿಗೂ ಕಾರಣವಾಗಿದೆ. ಹೀಗಾಗಿ ಇಬ್ಬರ ಅನೈತಿಕ ಸಂಬಂಧದಿಂದ ಪೊಲೀಸ್ ಕ್ವಾರ್ಟರ್ಸ್ ಸುಟ್ಟು ಹೋದ ಪರಿಣಾಮ ಹಿರಿಯ ಅಧಿಕಾರಿಗಳು ಪಿಎಸ್‍ಐ ಕಿರಣ ಸಾಮ್ರಾಟ್ ಹಾಗೂ ಪೇದೆಯ ಪತ್ನಿ ವಿರುದ್ಧ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಬಿಜೆಪಿ ಜನರ ಮೊದಲ ಆಯ್ಕೆ, ಕಾಂಗ್ರೆಸ್ ದೇಶದ ವಿಶ್ವಾಸ ಕಳೆದುಕೊಂಡಿದೆ: ಪ್ರಧಾನಿ ಮೋದಿ ವಾಗ್ದಾಳಿ

ಬಿಜೆಪಿ ಜನರ ಮೊದಲ ಆಯ್ಕೆ, ಕಾಂಗ್ರೆಸ್ ದೇಶದ ವಿಶ್ವಾಸ ಕಳೆದುಕೊಂಡಿದೆ: ಪ್ರಧಾನಿ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಅಟ್ಟಹಾಸ: ಕ್ಷುಲ್ಲಕ ಕಾರಣಕ್ಕೆ ಸಹಾಯಕ ಜೈಲರ್ ಮೇಲೆ ಹಲ್ಲೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಅಟ್ಟಹಾಸ: ಕ್ಷುಲ್ಲಕ ಕಾರಣಕ್ಕೆ ಸಹಾಯಕ ಜೈಲರ್...

ಬಿಗ್ ಬಾಸ್ ಕನ್ನಡ ಸೀಸನ್ 12: ಗಿಲ್ಲಿ–ಅಶ್ವಿನಿ ಮಧ್ಯೆ ಟೈಟ್ ಫೈಟ್, ಫೈನಲ್ ಗೆಲುವಿಗೆ ಕುತೂಹಲ

ಬಿಗ್ ಬಾಸ್ ಕನ್ನಡ ಸೀಸನ್ 12: ಗಿಲ್ಲಿ–ಅಶ್ವಿನಿ ಮಧ್ಯೆ ಟೈಟ್ ಫೈಟ್,...

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬೀಸಾಕೋ ಅಭ್ಯಾಸವಿದ್ರೆ ಈಗ್ಲೆ ಬಿಟ್ಟುಬಿಡಿ; ಇದರಲ್ಲೂ ಅಡಗಿದೆ ನಾನಾ ಲಾಭಗಳು!

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬೀಸಾಕೋ ಅಭ್ಯಾಸವಿದ್ರೆ ಈಗ್ಲೆ ಬಿಟ್ಟುಬಿಡಿ; ಇದರಲ್ಲೂ...