ಪಾಳು ಬಾವಿಗೆ ಬಿದ್ದ ಕರಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಡೇಕೊಳ್ಳದ ಸಮೀಪದ ಜರಿಮಲೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಆಹಾರ ಹುಡುಕಿಕೊಂಡು ವೀಳ್ಯದೆಲೆ ತೋಟಕ್ಕೆ ನುಗ್ಗಿದ್ದ ಕರಡಿ ಆಕಸ್ಮಿಕವಾಗಿ ಪಾಳು ಬಾವಿಗೆ ಬಿದ್ದಿದೆ. ಇದನ್ನು ಕಂಡ ಕೆಲವು ಕಿಡಿಗೇಡಿಗಳು ಬಾವಿಯಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಪರಿಣಾಮ ಕರಡಿ ಸಜೀವ ದಹನವಾಗಿದೆ.