ಗುಜರಾತ್‍ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಟನೆಯ ‘ಪದ್ಮಾವತಿ’ ಸಿನಿಮಾವನ್ನು ನಿಷೇಧಿಸೋದು ಸೂಕ್ತ ಅಂತ ಬಿಜೆಪಿ ಹೇಳಿದೆ..!
ಸಿನಿಮಾದಲ್ಲಿ ದೀಪಿಕಾ ಪದ್ಮಾವತಿ ಪಾತ್ರದಲ್ಲಿ ಹಾಗೂ ರಣವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಯಾವುದೇ ದೃಶ್ಯಗಳಿಲ್ಲ ಅನ್ನೋದನ್ನು ಖಚಿತಪಡಿಸಲು ಮೊದಲು ನಮಗೆ ಸಿನಿಮಾ ತೋರಿಸಬೇಕು. ಇದರಿಂದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶಾಂತಿ ನೆಲೆಸಿದಂತಾಗುತ್ತೆ ಎಂದು ರಜಪೂತ ನಾಯಕರು ಚುನಾವಣಾ ಆಯೋಗ ಹಾಗೂ ಗುಜರಾತ್ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ..!
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಯಾವ್ದೇ ದೃಶ್ಯಗಳಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಇದು ಸತ್ಯ ಎಂದು ತಿಳಿಯಲು ರಿಲೀಸ್‍ಗೂ ಮುನ್ನ ನಮಗೆ ಸಿನಿಮಾ ತೋರಿಸಲಿ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಹಾಗೂ ಚುನಾವಣಾ ಆಯುಕ್ತರಲ್ಲಿ ಮನವಿ ಮಾಡಿದೆ.
ಪದ್ಮಾವತಿ ಸಿನಿಮಾದ ಬಗ್ಗೆ ಆರಂಭದಿಂದಲೂ ವಿವಾದ ತಪ್ಪಿಲ್ಲ. ಬನ್ಸಾಲಿ ಅವರು ರಾಣಿ ಪದ್ಮಾವತಿ ಬಗ್ಗೆ ಸಿನಿಮಾ ಮಾಡ್ತೀನಿ ಅಂದಾಗಲೇ ಟೀಕೆಗಳು ಕೇಳಿಬಂದಿದ್ದವು. ಅಷ್ಟೇಅಲ್ಲದೆ ಶೂಟಿಂಗ್ ಸಂದರ್ಭದಲ್ಲಿ ರಜಪೂತ ಕರ್ಣಿ ಸೇನಾದ ಓರ್ವ ಸದಸ್ಯ ಬನ್ಸಾಲಿ ಕಪಾಳಕ್ಕೆ ಹೊಡೆದಿದ್ರು.
ಡಿ.1ರಂದು ಸಿನಿಮಾ ತೆರೆಕಾಣಲಿದ್ದು, ಡಿ9 ರಂದು ಮೊದಲ ಹಂತದ ಹಾಗೂ ಡಿ.18ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಸಿನಿಮಾದಲ್ಲಿ ಇತಿಹಾಸ ತಿರುಚಿದ್ದರೆ ಗಲಾಟೆ ಉಂಟಾಗಬಹುದು..! ರಜಪೂತ ಮತ್ತು ಕ್ಷತ್ರಿಯ ಸಮುದಾಯದ ಜನತೆ ಭಾವನೆಗೆ ದಕ್ಕೆ ಉಂಟಾಗ ಬಾರದು ಎಂದು ಬಿಜೆಪಿ ವಕ್ತಾರ ಜಡೇಜಾ ಹೇಳಿದ್ದಾರೆ.