ಪೊಲೀಸರ ಕೆಲಸ ಸಾವಿನ ಜೊತೆ ಸರಸವಾಡುವುದಕ್ಕೆ ಸಮನಾಗಿರುತ್ತದೆ. ಜಗತ್ತಿನ ಅಪರಾಧವನ್ನು ನಿಗ್ರಹಿಸಲು ಅವರು ಪಡುವ ಪಾಡು ಅಷ್ಟಿಷ್ಟಲ್ಲ. ಕಳ್ಳಕಾಕರು, ರೌಡಿಗಳು, ಉಗ್ರರ ನಡುವೆ ಅವರು ಜೀವದ ಹಂಗು ತೊರೆದು ಸೆಣಸುತ್ತಾರೆ. ಪೊಲೀಸರಿಗೆ ಅವರೇ ಸರಿಸಾಟಿ. ನಿನ್ನೆ ಬೆಂಗಳೂರಿನ ಆರ್ಟಿ ನಗರದ ಪೊಲೀಸ್ ಕಾನ್ಸ್ಟೇಬಲ್ ಶ್ರೀಧರ್ ಮೂರ್ತಿ ಎಂಬುವವರ ಮೇಲೆ ಕಾರು ಕಳ್ಳ ಪ್ರೇಮ್ಕುಮಾರ್ ಎಂಬಾತ ಕದ್ದ ಕಾರನ್ನು ಹರಿಸಿ ಅವರನ್ನು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದ್ದಾನೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಧರ್ ಮೂರ್ತಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ನಡುವೆ ಕಾರು ಕಳ್ಳ ಪ್ರೇಮ್ ಕುಮಾರ್ ನನ್ನು ಹೆಡೆಮುರಿಕಟ್ಟಲು ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರ ಮೇಲೆ ದಾಳಿ ಮಾಡುವಷ್ಟು ಚಿಗಿತುಕೊಂಡಿರುವ ಇಂತಹ ಹರಾಮಿಗಳಿಗೆ ಸೂಕ್ತ ಪಾಠ ಕಲಿಸದಿದ್ದರೇ, ನಾಳೆ ದಿನ ಪೊಲೀಸ್ ಠಾಣೆಗಳಿಗೆ ನುಗ್ಗಲು ಇಂತಹವರು ಹಿಂದೆಮುಂದೆ ನೋಡುವುದಿಲ್ಲ. ಈ ಹರಾಮಿ ಸಿಕ್ಕಕೂಡಲೇ ಅವನು ಜೀವಮಾನದಲ್ಲಿ ಮತ್ತೆಂದೂ ಇಂತಹ ಕೆಲಸ ಮಾಡಬಾರದು ಅಂತಹ ಪಾಠವನ್ನು ಪೊಲೀಸರು ಕಲಿಸಬೇಕಿದೆ.
POPULAR STORIES :
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?
ಅಪಘಾತವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡ್ತೀರಾ..? ಅಪಲೋಡ್ ಮಾಡಿದ್ರೇ ಜೈಲ್ ಗ್ಯಾರಂಟಿ..!?
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
ಮುಸ್ಲಿಮರ `ಅಜಾನ್’ ವೇಳೆ ಅರ್ಧಕ್ಕೆ ಭಾಷಣ ನಿಲ್ಲಿಸಿದ ಮೋದಿ…! #Video