75 ನೇ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಸಿಲಿಕಾನ್ ಸಿಟಿ ಸಕಲ ಸಿದ್ದತೆ ಮಾಡಿಕೊಂಡಿದೆ . ಸಾತಂತ್ರೋತ್ಸವದ ಸಂಭ್ರಮದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ಪೊಲೀಸರೂ ಕೂಡ ಅಲರ್ಟ್ ಆಗಿದ್ದಾರೆ . ಎಲ್ಲಾ ಸಾಲು ಸಾಲು ಕಾರ್ಯಕ್ರಮಗಳು ಇರುವ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಭದ್ರತೆಗೆ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲು ಬೆಂಗಳೂರು ಪೊಲೀಸರಿಗೆ ನಿರ್ಧರಿಸಲಾಗಿದೆ. ಎರಡು ವರ್ಷಗಳ ಬಳಿಕ ಮಾಣಿಕ್ ಷಾ ಪೆರೆಡ್ ಗ್ರೌಂಡ್‌ನಲ್ಲಿ ಸ್ವಾತಂತ್ರ್ಯೋತ್ಸವ. ಹೀಗಾಗಿ ಮೈದಾನದ ಸುತ್ತ ಹೆಚ್ಚುವರಿ ಆಯುಕ್ತರು 1, ಡಿಸಿಪಿಗಳು 10, ಎಸ್ಸಿಪಿಗಳು 19, ಇನ್ಸ್ಪೆಕ್ಟರ್ 50, ಎಫ್‌ಪಿಎಸ್‌ಐ 100, ಮಹಿಳಾ ಎಸ್‌ಎಸ್‌ಐ 15, ಎಸ್‌ಎಸ್‌ಆರ್‌ಐ 80, ಕಾನ್‌ಸ್ಟೆಬಲ್ 650, ಗಸ್ತಿನಲ್ಲಿ ಪೊಲೀಸರು 150 ಪೊಲೀಸ್, ಕೆಎಸ್‌ಆರ್ಪಿ 10 ತುಕಡಿ, ಕೆಯು 1 ಡಿಎಸ್‌ಟಿ 1, 1 ನಿಗದಿಪಡಿಸಲಾಗಿದೆ.
ಸ್ವಾತಂತ್ರ್ಯೋತ್ಸಕ್ಕೆ ಹೆಚ್ಚಿನ ಭದ್ರತೆ.
Date: