ಡಿಸೆಂಬರ್ 18ರಿಂದ ಬೆಂಗಳೂರು-ಮೈಸೂರು ನಡುವೆ E-ಬಸ್ ಸಂಚಾರ ನಡೆಸಲಿವೆ. ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ಬಸ್ ಸಂಚಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು-ಮೈಸೂರು ನಡುವೆ ಹೆಚ್ಚು ಪ್ರಯಾಣಿಕರು ಸಂಚಾರ ನಡೆಸುವ ಹಿನ್ನೆಲೆ KSRTC ಪ್ರಯಾಣಿಕರ ಅನುಕೂಲಕ್ಕಾಗಿ ಇ-ಬಸ್ ವ್ಯವಸ್ಥೆಯನ್ನ ಕಲ್ಪಿಸಿದೆ.
ವಿದ್ಯುತ್ ಚಾಲಿತ ಬಸ್ನಲ್ಲಿ ಒಟ್ಟು 43 ಆಸನಗಳ ವ್ಯವಸ್ಥೆ ಇದ್ದು, ಒಮ್ಮೆ ಚಾರ್ಜ್ ಮಾಡಿದ್ರೆ ಬಸ್ಗಳು 250 ರಿಂದ 300 ಕಿಲೋ ಮೀಟರ್ ಸಂಚಾರ ನಡೆಸಲಿದೆ. ಡಿಸೆಂಬರ್ 15ರಂದು ಒಲೆಕ್ಟ್ರಾಗ್ರೀನ್ ಟೆಕ್ ಲಿಮಿಟೆಡ್ ಮಾಡ್ಯುಲರ್ ಬ್ಯಾಟರಿಗಳೊಂದಿಗೆ ಸುಸಜ್ಜಿತವಾಗಿರುವ ಎಲೆಕ್ಟ್ರಿಕ್ ಬಸ್ಗಳನ್ನ ಒದಗಿಸಲಿದೆ.
ಇನ್ನ ವಿದ್ಯುತ್ ಚಾಲಿತ ಬಸ್ಗಳಲ್ಲಿ ಟ್ರ್ಯಾಕಿಂಗ್ ಘಟಕಗಳು, ಸಿಸಿಟಿವಿ ಮತ್ತು ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ.