ನವೆಂಬರ್ ನಲ್ಲಿ 11 ದಿನಗಳು ಬ್ಯಾಂಕ್ ಗಳಿರಲ್ಲ..!

Date:

ನವೆಂಬರ್ ನಲ್ಲಿ ದೀಪಾವಳಿ ಜೊತೆಗೆ ಸಾಲು ಸಾಲು ಹಬ್ಬಗಳು ಎದುರುಗೊಳ್ಳಲಿವೆ.

ಹಬ್ಬಗಳು ಅಂದ್ಮೇಲೆ ಸಾಲು ಸಾಲು ರಜಾ ಕೂಡ ಪಕ್ಕಾ ಅಲ್ವಾ? ಅದರಂತೆ ಬ್ಯಾಂಕ್‌ಗಳು ಕೂಡ ರಜೆ ಕಾರಣ ಬಾಗಿಲು ಬಂದ್ ಮಾಡುವುದು ನಿಶ್ಚಿತ. ಇದೇ ಕಾರಣಕ್ಕೆ ನವೆಂಬರ್ ತಿಂಗಳಲ್ಲಿ ಅನೇಕ ರಾಜ್ಯಗಳಲ್ಲಿ 11 ದಿನಗಳ ಕಾಲ ಬ್ಯಾಂಕ್‌ಗಳು ಬಾಗಿಲು ಮುಚ್ಚಲಿವೆ. ಹಬ್ಬದ ಸಂದರ್ಭದಲ್ಲಿ ಎಟಿಎಂ ಮುಂದೆ ಹೆಣಗಾಡುವ ಬದಲು ಮೊದಲೇ ಹಣ ಡ್ರಾ ಮಾಡಿಕೊಳ್ಳುವುದು ಉತ್ತಮ.

ನವೆಂಬರ್ 5ರಿಂದಲೇ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಲಿದೆ. ನವೆಂಬರ್ 5 ರಿಂದ ನವೆಂಬರ್ 9 ರವರೆಗೆ ದೀಪಾವಳಿ ಸಂಭ್ರಮ ಮನೆ ಮಾಡಿರಲಿದೆ. ದಕ್ಷಿಣ ಭಾರತ ಹಾಗೂ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ 5 ರಿಂದ 9ರವರೆಗೂ ಸರ್ಕಾರಿ ರಜೆಯಿರಲಿದೆ.

ನವೆಂಬರ್ 10 ಮತ್ತು 11 ಶನಿವಾರ, ಭಾನುವಾರವಾದ ಕಾರಣ ಮತ್ತೆರಡು ದಿನ ರಜೆ ಸಿಗಲಿದೆ. ಈ ವೇಳೆಯಲ್ಲೂ ಬ್ಯಾಂಕ್‌ಗಳಿಗೆ ರಜೆ ಕಡ್ಡಾಯ.

ಇನ್ನು ನವೆಂಬರ್ 13, 14 ರಂದು ಬಿಹಾರ, ಜಾರ್ಖಂಡದಲ್ಲಿ ಛತ್ ಪೂಜೆ ಸಂಭ್ರಮ ಮನೆ ಮಾಡಲಿದೆ. ಛತ್ ಪೂಜೆ ಹಿನ್ನೆಲೆಯಲ್ಲಿ ಆ ರಾಜ್ಯಗಳ ಬ್ಯಾಂಕ್‌ಗಳು ಬಾಗಿಲು ಮುಚ್ಚಲಿವೆ.

ನವೆಂಬರ್ 21 ರಂದು ಈದ್ -ಎ-ಮಿಲಾದ್, ನವೆಂಬರ್ 23 ರಂದು ಗುರುನಾನಕ್ ಜಯಂತಿ ಇರುವುದರಿಂದ ಬ್ಯಾಂಕ್‌ಗಳಿಗೆ ರಜೆಯಿರಲಿದೆ. ಒಟ್ಟಿಗೆ ಅನೇಕ ದಿನಗಳ ಕಾಲ ಬ್ಯಾಂಕ್ ಬಂದ್ ಆಗುವ ಕಾರಣ ಎಟಿಎಂನಲ್ಲಿ ಹಣ ಸಮಸ್ಯೆ ಕಾಡಬಹುದು.

 

ಆದರೆ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಎಟಿಎಂನಲ್ಲಿ ಹಣದ ವ್ಯವಸ್ಥೆ ಮಾಡಲು ಬ್ಯಾಂಕ್‌ಗಳು ನಿರ್ಧರಿಸಿವೆ ಎಂದು ಮೂಲಗಳು ಖಚಿತಪಡಿಸಿವೆ.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...