ಹೆಣ್ಣಿನ ಮೈಮಾಟ ಸುಂದರವಾಗಿ ಆಕರ್ಷಕವಾಗಿ ಕಾಣಬೇಕು ಅಂದ್ರೆ ದೇಹದ ಎಲ್ಲಾ ಅಂಗಾಗಳನ್ನು ಸುಂದರವಾಗಿ ಕಾಣುವಂತೆ ಮಾಡಬೇಕು. ಅದರಲ್ಲೂ ಮಹಿಳೆಯರ ಮೈಮಾಟ ಸುಂದರವಾಗಿ ಕಾಣೋದಕ್ಕೆ ಮೊದಲು ಆಕರ್ಷಿಸುವುದು ಸ್ತನಗಳು. ಹೌದು.. ಸ್ತನಗಳು ಬಿಗಿಯಾಗಿದ್ರೆ ಮೈ ಮಾಟ ಆಕರ್ಷಕವಾಗಿ ಕಾಣುತ್ತೆ. ಜೋತು ಬಿದ್ದ ಸ್ತನಗಳು ವಯಸ್ಸು ಹೆಚ್ಚಾಗಿರುವಂತೆ ಕಾಣುವಂತೆ ಮಾಡುತ್ತವೆ.
ಹೆಣ್ಣಿನ ಸ್ತನಗಳು ಜೋತು ಬಿದ್ದಿದ್ದರೆ ಹೆಚ್ಚು ವಯಸ್ಸಾದಂತೆ ಕಾಣುತ್ತಾರೆ. ನೀವು ಹೇಗೆ ಕೂರುತ್ತೀರಿ, ಹೇಗೆ ಮಲಗುತ್ತೀರಿ ಅದು ಕೂಡ ಸ್ತನದ ಆಕಾರದ ಮೇಲೆ ಪರಿಣಾಮ ಬೀರುತ್ತದೆ. ಆದ್ರೀಗ ಅದಕ್ಕೆ ಚಿಂತೆ ಮಾಡಬೇಕಾಗಿಲ್ಲ. ಮನೆಯಲ್ಲಿಯೇ ಅದಕ್ಕೆ ಮದ್ದು ಇದೆ. ಜೋತು ಬಿದ್ದ ಸ್ತನಗಳನ್ನು ಈ ಮನೆಮದ್ದು ಬಳಸಿ ಮಸಾಜ್ ಮಾಡಿ, ಮತ್ತೆ ಆಕರ್ಷಕ ಶೇಪ್ ಪಡೆಯಬಹುದು.
ಸೌತೆಕಾಯಿ ಪೇಸ್ಟ್ ಮಾಡಿ ಅದರಲ್ಲಿ ಮೊಟ್ಟೆಯ ಹಳದಿ ಹಾಕಿ ಮಿಶ್ರಣ ಮಾಡಿ ಸ್ತನಗಳಿಗೆ ಹಚ್ಚಿಬೇಕು. ಸೌತೆ-ಮೊಟ್ಟೆಯ ಮಿಶ್ರಣವನ್ನು ಮೇಲ್ಮುಖವಾಗಿ ಮಸಾಜ್ ಮಾಡಿ 30 ನಿಮಿಷ ಬಿಡಿ, ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದರಲ್ಲಿರುವ ಪ್ರೊಟೀನ್ ಹಾಗೂ ವಿಟಮಿನ್ಸ್ ಸ್ತನಗಳು ಬಿಗಿಯಾಗುವಂತೆ ಮಾಡುತ್ತದೆ. ವಾರಕ್ಕೊಮ್ಮೆ ಈ ರೀತಿ ಮಾಡುತ್ತಾ ಬಂದ್ರೆ ಸ್ತನಗಳ ಸೌಂದರ್ಯ ಹೆಚ್ಚುತ್ತೆ.
ಅಥವಾ
1 ಮೊಟ್ಟೆಯ ಬಿಳಿಗೆ 1 ಚಮಚ ಜೇನು, 1 ಚಮಚ ಮೊಸರು ಹಾಕಿ ಮಿಕ್ಸ್ ಮಾಡಿ ಆ ಮಿಶ್ರಣ ಹಚ್ಚಬೇಕು. ಇದರಿಂದ ಕೂಡ ಸ್ತನಗಳು ಬಿಗಿಯಾಗಿ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.