ಅಪಾರ್ಟ್‍ಮೆಂಟ್‍ನಲ್ಲಿರೋ ಮಹಿಳೆಯರೇ, ಯುವತಿಯರೇ ಎಚ್ಚರದಿಂದಿರಿ…! ಇದೊಂದು ಶಾಕಿಂಗ್ ನ್ಯೂಸ್…!
ಬೆಳ್ಳಂದೂರಿನ ಅಪಾರ್ಟ್‍ಮೆಂಟ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಅಲ್ಲಿನ ಮಹಿಳೆಯರು ಸ್ನಾನ ಮಾಡೋದನ್ನು ವೀಡಿಯೋ ಮಾಡಿ ಸಿಕ್ಕಿಬಿದ್ದಿದ್ದಾನೆ..!
ಆರೋಪಿ ಹೆಸರು ಭಾಸ್ಕರ್ ಅಹಲ್ದಾರ್. ಈ ಕಾಮುಕ ಮಹಿಳೆಯರು ಸ್ನಾನ ಮಾಡೋ ವೀಡಿಯೋ ಸೆರೆ ಹಿಡಿದು ತನ್ನ ಸ್ನೇಹಿತರಿಗೆ ಕಳುಹಿಸುತ್ತಿದ್ದ..! ಸೆಕ್ಯುರಿಟಿ ಗಾರ್ಡ್ ಆಗಿರೋ ಈತ ಎಷ್ಟು ದಿನದಿಂದ ನೀಚ ಕೃತ್ಯದಲ್ಲಿ ತೊಡಗಿದ್ದನೋ ಗೊತ್ತಿಲ್ಲ. ಮಹಿಳೆಯೊಬ್ಬರು ಸ್ನಾನ ಮಾಡುವಾಗ ಅವರ ಮನೆಯ ಬಾತ್ ರೂಂ ಕಿಟಕಿಯಲ್ಲಿ ಯಾರೋ ಓಡಿ ಹೋದ ಶಬ್ಧ ಕೇಳಿಬಂದಿದ್ದು, ಆಗ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಕಾಮುಕ ಸೆಕ್ಯುರಿಟಿ ಭಾಸ್ಕರ್ ಸಿಕ್ಕಿ ಬಿದ್ದಿದ್ದಾನೆ..! ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನಂತೆ…!