ಕೋಟಿಗಟ್ಟಲೆ ಸಂಪಾದನೆ ಮಾಡೋ ಭಿಕ್ಷಕರ ಬಗ್ಗೆ ಕೇಳಿದ್ದೀರಿ. ಕೋಟ್ಯಾಧಿಪತಿ ಭಿಕ್ಷಕರೂ ಇರಬಹುದು…! ಶ್ರೀಮಂತ ಬಡವನಾಗಿರೋ ಉದಾಹರಣೆಗಳೂ ನಮ್ಮ ನಡುವೆ ಇವೆ. ಆದರೆ, ಭಿಕ್ಷಕನಾಗಿರೋ ರಿಯಲ್ ಸ್ಟೋರಿ ನಿಮಗೆ ಗೊತ್ತೇ…?! ಇಲ್ಲೊಬ್ಬ ಉದ್ಯಮಿ ನಷ್ಟ ಅನುಭವಿಸಿಲ್ಲ, ವಯಸ್ಸಾಗಿದೆ ಅಂತ ಮಕ್ಕಳು, ಮೊಮ್ಮಕ್ಕಳು ಈತನನ್ನು ಮನೆಯಿಂದ ಹೊರದಬ್ಬಿಲ್ಲ…! ಆದ್ರೂ ಭಿಕ್ಷಕನಾಗಿದ್ದಾನೆ…!
ಹೌದು, ಉದ್ಯಮಿ ರಸ್ತೆ ಬದಿ ಭಿಕ್ಷೆ ಬೇಡ್ತಿದ್ದುದು ಬಯಲಾಗಿದೆ…! ಇದನ್ನು ಪತ್ತೆ ಮಾಡಿದ್ದು ಆಧಾರ್ ಕಾರ್ಡ್…! ಉತ್ತರ ಪ್ರದೇಶದ ರಾಯಲ್ ಬರೇಲಿಯ ಉದ್ಯಮಿಯೊಬ್ಬರ ಕರುಣಾಜನಕ ಕಥೆ ಇದು…
ರಾಯ್ಪುರದಲ್ಲಿ ಸ್ವಾಮಿ ಭಾಸ್ಕರ್ ಸ್ವರೂಪ್ ಜಿ. ಮಹಾರಾಜ್ ಎಂಬುವವರು ಆಶ್ರಮವೊಂದನ್ನು ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ವಯಸ್ಸಾದ ವ್ಯಕ್ತಿಯನ್ನು ನೋಡಿ. ಅಯ್ಯೋ ಪಾಪ ಅನಿಸಿ ಆತನನ್ನು ತನ್ನ ಆಶ್ರಮಕ್ಕೆ ಭಾಸ್ಕರ್ ಕರೆದುಕೊಂಡು ಬಂದಿದ್ದಾರೆ…!
ಆಶ್ರಮವಾಸಿಗಳು ಆ ಭಿಕ್ಷಕನಿಗೆ ಸ್ನಾನ ಮಾಡಿಸುವಾಗ ಬಟ್ಟೆಯಲ್ಲಿ ಆಧಾರ್ ಕಾರ್ಡ್ ಹಾಗೂ 1,06,92,731 ಕೋಟಿ ರೂ ಹೂಡಿಕೆ ಮಾಡಿರೋ ದಾಖಲೆ ಸಿಕ್ಕಿದೆ.
ಆಧಾರ್ ಕಾರ್ಡ್ ಮಾಹಿತಿಯಂತೆ ವಿಳಾಸವನ್ನು ಕಂಡುಹಿಡಿದಾಗ ಆ ಭಿಕ್ಷುಕ ತಮಿಳುನಾಡಿ ತಿರುನಲ್ವೇಲಿಯ ಉದ್ಯಮಿ ಮುತ್ತಯ್ಯ ನಾಡಾರ್ ಅಂತ ತಿಳಿದಿದೆ…!
ಶ್ರೀಮಂತ ಉದ್ಯಮಿ ಮುತ್ತಯ್ಯ ನಾಡಾರ್ ರೈಲಿನಲ್ಲಿ ಪ್ರಯಾಣಿಸುವಾಗ ಯಾರೋ ಇಂಜೆಕ್ಷನ್ ನೀಡಿ ಸ್ಮರಣಶಕ್ತಿ ಕಳೆದುಕೊಳ್ಳುವಂತೆ ಮಾಡಿದ್ದರು ಎಂದು ಹೇಳಲಾಗುತ್ತಿದ್ದು, ಇದೀಗ ಕುಟುಂಬದವರು ಸ್ವರೂಪ್ ಅವರ ಆಶ್ರಮಕ್ಕೆ ಬಂದು ನಾಡರ್ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.