ಹೆಚ್ಚು ಹೆಚ್ಚು ಹಣ ಕೂಡಿಟ್ಟಿರುವ ಶ್ರೀಮಂತರೆಲ್ಲರೂ ಹಲವಾರು ದೇವರುಗಳ ಪರಮ ಭಕ್ತರಾಗಿರ್ತಾರೆ. ತಮ್ಮ ಆರಾಧ್ಯ ದೈವನಿಗೆ ಕೋಟಿ ಕೋಟಿ ಬೆಲೆ ಬಾಳುವ ವಜ್ರ ವೈಡೂರ್ಯ ಸಮರ್ಪಣೆ ಮಾಡ್ತಾರೆ. ಆದ್ರೆ ಇಲ್ಲೋರ್ವ ಶ್ರೀರಾಮ ಭಕ್ತ ತನ್ನ ಇಷ್ಟ ದೇವನಿಗೆ ಬೆಳ್ಳಿಯ ಕಿರೀಟ ಅರ್ಪಿಸಿದ್ದಾನೆ ನೋಡಿ..! ಅದರ ಬೆಲೆ ಸುಮಾರು 1.50 ಲಕ್ಷ ರೂ..! ಹೌದು ತೆಲಂಗಾಣದ ನಲ್ಗೊಂಡ ಜಿಲ್ಲೆಯ 75 ವರ್ಷದ ಮುದುಕ ಯಾದಿರೆಡ್ಡಿ ತನ್ನ ಆರಾಧ್ಯ ದೈವನಿಗೆ ಭಿಕ್ಷೆಯಲ್ಲಿ ಕೂಡಿಟ್ಟ ಹಣದಲ್ಲಿ ಬೆಳ್ಳಿ ಕಿರೀಟ ಸಮರ್ಪಣೆ ಮಾಡಿ ಸಾರ್ಥಕತೆ ಮೆರೆದಿದ್ದಾನೆ. ಸಾಮಾನ್ಯ ಆಟೋ ಟ್ರೈವರ್ ಆಗಿದ್ದ ಯಾದಿರೆಡ್ಡಿ ವಯಸ್ಸಾಗುತ್ತಾ ಹೋದಂತೆ ಅಶಕ್ತನಾದ ಈತ ಬೀದಿಯಲ್ಲಿ ಭಿಕ್ಷೆ ಬೇಡಲು ಶುರು ಮಾಡಿದ. ಹೆಂಡ್ತಿ ಮಕ್ಕಳು ಎಂಬ ಜೀವನದ ಜಂಜಾಟನೆ ಇಲ್ಲದ ಈತ ಪ್ರತಿನಿತ್ಯ ಭಿಕ್ಷೆ ಬೇಡಿ ಅದರಲ್ಲಿ ಹೆಚ್ಚಿಗೆ ಬಂದ ಹಣವನ್ನು ದೇವರ ಕಾರ್ಯಗಳಿಗೆ ವ್ಯಯ ಮಾಡ್ತಾನಂತೆ ನೋಡಿ..! ಅದ್ರಲ್ಲೂ ಶ್ರೀರಾಮನ ಪರಮ ಭಕ್ತನಾದ ಇವನು ವಿಜಯವಾಡದಲ್ಲಿರೊ ಶ್ರೀರಾಮ ದೇವಾಸ್ಥಾನಕ್ಕೆ ಬೆಳ್ಳಿ ಕಿರೀಟ ಸಮರ್ಪಣೆ ಮಾಡಿದ್ದಾನೆ. ಇದಕ್ಕೂ ಮುನ್ನ ಯಾದಿರೆಡ್ಡಿ ಸಾಯಿ ಬಾಬಾ ಅವರಿಗೆ ಬೆಳ್ಳಿ ಕಿರೀಟ ಅರ್ಪಿಸಿದ್ದರಂತೆ. ದೇವರ ಕೃಪಾ ಕಟಾಕ್ಷದಿಂದ ತಾನು ಇಷ್ಟು ವರ್ಷ ಬದುಕಿದ್ದು ಎಂದು ನಂಬಿರುವ ಈತ ತಾನು ದುಡಿದ ಅಲ್ಪ ಸ್ವಲ್ಪ ಹಣದಲ್ಲೂ ದೇವರಿಗೆ ಬೆಳ್ಳಿ ಕಿರೀಟ ಮಾಡಿಸಿದ್ದಾನೆ. ಅಷ್ಟೆ ಅಲ್ಲ ಶ್ರೀರಾಮ ದೇವಸ್ಥಾನದ ನಿತ್ಯ ಅನ್ನ ಸಂತರ್ಪಣೆಗಾಗಿ ಇಪ್ಪತ್ತು ಸಾವಿರ ಹಣ ನೀಡಿದ್ದಾನೆ ಈ ಭಿಕ್ಷುಕ..!
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?
ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story
ಜನವರಿಯಿಂದ ಜಿಯೋ ಫ್ರೀ ಇಂಟರ್‍ನೆಟ್ ಕ್ಯಾನ್ಸಲ್..?!!
ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ
ಉತ್ತರ ಕೊರಿಯಾದಲ್ಲಿ ಕ್ರಿಸ್ಮಸ್ ಆಚರಿಸುವಂತಿಲ್ಲ..! ಅದರ ಬದಲು ಏನು ಮಾಡ್ಬೇಕು ಗೊತ್ತಾ..?
ಶಮಿ ಪತ್ನಿಯ ಡ್ರೆಸ್ ಬಗ್ಗೆ ಟೀಕೆ, ಟೀಕಾಕಾರರಿಗೆ ನಾಚಿಕೆಯಾಗಬೇಕು : ಮಹಮ್ಮದ್ ಕೈಫ್
ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!