ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದವ ಇಂದು ಕೇಂಬ್ರಿಡ್ಜ್ ವಿವಿ ವಿದ್ಯಾರ್ಥಿ..! ಹೇಗಿತ್ತು 22ರ ಹರೆಯ ಯುವಕನ ಬದುಕು..?

Date:

22ರ ಹರೆಯದ ಯುವಕ ಚೆನ್ನೈ ಮೂಲದ ಜಯವೇಲನಿಗೆ ತನ್ನ ಮಹಾದಾಸೆ ಇದೀಗ ಪೂರೈಸಿದೆ.. ವಿಶ್ವದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾದ ಕೇಂಬ್ರಿಡ್ಜ್ ವಿವಿಯಲ್ಲಿ ಅಡ್ವಾನ್ಸ್ಡ್ ಆಟೊಮೊಬೈಲ್ ಇಂಜಿನಿಯರಿಂಗ್ ಪದವಿಯಲ್ಲಿ ಆತನಿಗೆ ಸೀಟು ಲಭಿಸಿದೆ. ಆದ್ರೆ ಇದೇನು ದೊಡ್ಡ ವಿಷಯವಲ್ಲದಿದ್ರೂ ಆತ ಈ ಮಟ್ಟಕ್ಕೆ ಬರಲು ಕಾರಣ ಮಾತ್ರ ಅತ್ಯುನ್ನತವಾದದ್ದು. ಯಾಕಂದ್ರೆ.. ಜಯವೇಲ್ ಕುಟುಂಬ ಬೀದಿಯಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವ ಒಂದು ಕಡು ಬಡತನದ ಕುಟುಂಬ.. ತುತ್ತು ಅನ್ನಕ್ಕಾಗಿ ಬೀದಿ ಬದಿ ಅಲೆದಾಡುವ ಕುಟುಂಬ…!
ಹೌದು.. 80ರ ದಶಕದಲ್ಲಿ ಒಂದು ಘೋರ ದುರಂತಕ್ಕೆ ಬಲಿಯಾದ ಜಯವೇಲು ಕುಟುಂಬ ಅಲ್ಲಿಂದ ಚನ್ನೈನ ನೆಲ್ಲೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿತ್ತು. ಕೇವಲ ಕುಟುಂಬ ಮಾತ್ರವಲ್ಲ ಬಾಲ್ಯದಲ್ಲಿ ಜಯವೇಲು ಸಹ ಕುಟುಂಬ ನಿರ್ವಹಣೆ ಭಿಕ್ಷೆ ಬೇಡುತ್ತಿದ್ದ..
ಜಯವೇಲು ಚಿಕ್ಕನಿರುವಾಗಲೇ ತನ್ನ ತಂದೆ ತೀರಿಕೊಂಡಿದ್ದರು. ಅದಾದ ನಂತರ ತಾಯಿ ಕುಡಿತದ ಚಟಕ್ಕೆ ಬಲಿಯಾದಳು..! ತಾನು ಗಳಿಸಿದ ಹಣವನ್ನೆಲ್ಲಾ ಕೇವಲ ಕುಡಿತಕ್ಕಾಗಿ ಖರ್ಚು ಮಾಡ್ತಾ ಇದ್ದ ತಾಯಿಯ ಮೇಲೆ ಜಿಗುಪ್ಸೆ ಉಂಟಾಗಿ ಬೀದಿಯಲ್ಲಿ ಸುತ್ತಾಡುತ್ತಿದ್ದಾಗ ಈತನ ನೆರವಿಗೆ ಬಂದದ್ದು ಉಮಾ ಮುತ್ತುರಾಮನ್.
ನಂತರ ಮುತ್ತುರಾಮನ್ ಹಾಗೂ ಆಕೆಯ ಪತಿ 1991 ರಲ್ಲಿ ಫುಟ್ ಮಕ್ಕಳಲ್ಲಿ ಒಬ್ಬನಾದ ಜಯವೇಲು ಕುರಿತಾದ ಎಲ್ಲಾ ಮಾಹಿತಿಗಳನ್ನು ಎನ್‍ಜಿಓಗೆ ಕಳಿಹಿಸಿಕೊಡುತ್ತಾರೆ. ಆನಂತರ ಜಯವೇಲುಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ ನೀಡಲು ಬಂದದ್ದು ಇದೇ ಸುಯಮ್ ಚಾರಿಟಬಲ್ ಟ್ರಸ್ಟ್..
ಉತ್ತಮ ಶಿಕ್ಷಣ ಪಡೆದ ಜಯವೇಲು ದ್ವಿತಿಯ ಪಿ.ಯು.ಸಿ. ಯಲ್ಲಿ ಉತ್ತಮ ಅಂಕವನ್ನೂ ಸಹ ಗಳಿಸುತ್ತಾನೆ. ಆಗ ಈತನ ಉನ್ನತ ವಿದ್ಯಾಭ್ಯ್ಯಾಸಕ್ಕಾಗಿ ಹಲವಾರು ದಾನಿಗಳು ಸಹಾಯ ಹಸ್ತ ಚಾಚಲು ಮುಂದಾಗುತ್ತಾರೆ. ವಿದೇಶದಲ್ಲಿರುವ ಕೇಂಬ್ರಿಡ್ಜ್ ವಿಶ್ವ ವಿದ್ಯಾನಿಲಯದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಈತನಿಗೆ ಇಂಗ್ಲೆಂಡ್‍ನ ಹೇಲ್ಸ್ ನಲ್ಲಿರುವ ಪ್ರತಿಷ್ಠಿತ ಗ್ಲಯ್ನಡ್ವರ್ ವಿಶ್ವ ವಿದ್ಯಾನಿಯದಲ್ಲಿ ಸಿಟು ಲಭ್ಯವಾಗುತ್ತದೆ. ಈತನ ವಿಭಿನ್ನ ಶೈಲಿಯ ಕಾರು ತಯಾರಿಕಾ ತಂತ್ರಗಾರಿಕೆಯಲ್ಲಿ ಉತ್ತಮ ಶೈಲಿಯ ರೇಸ್ ಕಾರು ತಯಾರಿಕೆಯ ಬಗ್ಗೆ ಇಂಜಿನಿಯರಿಂಗ್ ಪದವಿ ಪಡೆಯುತ್ತಾನೆ. ಪ್ರಸ್ತುತದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಟಲಿ ದೇಶಕ್ಕೆ ಪ್ರಯಾಣ ಬೆಳೆಸಿದ್ದಾನೆ.
ಈತನ ವಿದ್ಯಾಭ್ಯಾಸಕ್ಕೆಂದೇ ಸುಯಾಮ್ ಟ್ರಸ್ಟ್ ವತಿಯಿಂದ ಸುಮಾರು 17 ಲಕ್ಷ ರೂ ಹಣ ದೇಣಿಗೆಯಾಗಿ ನಿಡಿದ್ದು, ಇದೀಗ ಜಯವೇಲು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮುತುರಾಮನ್ ಅವರು 8 ಲಕ್ಷ ರೂ. ನೀಡಿದ್ದಾರೆ. ಎನ್‍ಜಿಓ ಸಂಸ್ಥೆಯಿಂದ ಓರ್ವ ಸ್ಲಂ ಹುಡುಗ ಈ ಮಟ್ಟಕ್ಕೆ ಬೆಳೆದದ್ದು ಇತರರಿಗೆ ಮಾದರಿ ಅಂದರೂ ತಪ್ಪಾಗೊಲ್ಲ. ಕಳೆದ ಹಲವು ದಿನಗಳ ಹಿಂದೆ ತನ್ನ ತಾಯಿಯನ್ನು ಭೇಟಿಯಾದ ಜಯವೇಲು ಇಂದಿಗೂ ತಾಯಿ ಕುಡಿತಕ್ಕೆ ಒಳಗಾಗಿರುವದನ್ನು ನೋಡಿ ಬೇಸರಗೊಂಡಿದ್ದನಂತೆ. ತನ್ನ ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಜಯವೇಲು ಮುತ್ತುರಮನ್ ಅವರು ನಡೆಸುತ್ತಿರುವ ಟ್ರಸ್ಟ್‍ನ್ನು ಮುಂದುವರೆಸಿಕೊಂಡು ಹೋಗುವ ಹಂಬಲ ವ್ಯಕ್ತಪಡಿಸಿದ್ದಾನೆ.

  • ಪ್ರಮೋದ್ ಲಕ್ಕವಳ್ಳಿ

POPULAR  STORIES :

ಸರ್ಕಾರ ಬಿದ್ದರೂ 20ರ ನಂತರ ನೀರು ಬಿಡೆನು: ಸಿಎಂ ಸಿದ್ದರಾಮಯ್ಯ ಗುಡುಗು..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!

ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.

ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...