ಸಿನಿಮಾ ತಾರೆಯರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳೋದು ಕಾಮನ್. ಆದರೆ, ರಾಜಕೀಯ ನಾಯಕರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳೋ ಅಭಿಮಾನಿಗಳ ಸಂಖ್ಯೆ ವಿರಳ…!
ಎಲೆಕ್ಷನ್ ಹತ್ತಿರ ಬಂದಾಗ ಜನಪ್ರತಿನಿಧಿಗಳಿಗೆ ಜನರ ಮೇಲೆ ಪ್ರೀತಿ ಹುಟ್ಟುತ್ತೆ. ಅದೇರೀತಿ ಕೆಲವರು ಹುಚ್ಚು ಅಭಿಮಾನಿಗಳೂ ಹುಟ್ಟಿಕೊಳ್ತಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಬಿಜೆಪಿ ಯುವಮುಖಂಡ ಪವನ್ ಪಾಟೀಲ್ ಎಂಬಾತ ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಅವರ ಹೆಸರನ್ನು ‘ ಕತ್ತಿ ಸಾಹುಕಾರ್’ ಎಂದು ಬರೆದುಕೊಳ್ಳೋ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಇದು ಬರಿಯ ಹಚ್ಚೆ ಅಲ್ಲ..ಬ್ಲೇಡ್ ನಿಂದ ಕೊಯ್ದುಕೊಂಡಿರೋದು…! ಇಂಥಾ ಹುಚ್ಚು ಅಭಿಮಾನಕ್ಕೆ ಏನನ್ನೋಣ?







